ಕೊಂಕಣಿಯ ಯುವ ಕಾರ್ಯಕರ್ತ ಲಾರೆನ್ಸ್ ಡಿಸೋಜ ಶಾಲೆಗಳಲ್ಲಿ ಕೊಂಕಣಿ ಕಲಿಕೆ ಬಗ್ಗೆ ಕೆಲಸ ಮಾಡುವ ಕೊಂಕಣಿ ಪ್ರಚಾರ ಸಂಚಾಲನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಒಂಬತ್ತನೇ ವಾರ್ಷಿಕ ಮಹಾಸಭೆಯು 26-09-15ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಈ ಮಹಾಸಭೆಯಲ್ಲಿ 2015-18 ನೇ ಸಾಲಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಲುವಿ ಪಿಂಟೊ ವಾಲೆನ್ಶಿಯಾ (ಉಪಾಧ್ಯಕ್ಷ) ಜೇಮ್ಸ್ ಡಿಸೋಜ, ಬೊಂದೆಲ್ (ಕಾರ್ಯದರ್ಶಿ) ಐವನ್ ಮಸ್ಕರೇನ್ಹಸ್, ಬಿಜಯ್ (ಜತೆ ಕಾರ್ಯದರ್ಶಿ), ಬ್ರಿಸ್ಟನ್ ಮಿರಾಂದಾ, ಕಿನ್ನಿಗೋಳಿ (ಖಜಾಂಚಿ) ವಿನ್ಸೆಂಟ್ ಮಸ್ಕರೇನ್ಹಸ್, ಮೂಡಬಿದ್ರೆ (ಸಾರ್ವಜನಿಕ ಸಂಪರ್ಕಾಧಿಕಾರಿ) ಮತ್ತು ವಂ. ಆಲ್ವಿನ್ ಸೆರಾವೊ, ಪಾದುವಾ (ಶಿಕ್ಷಣ ಸಂಚಾಲಕ).
ಇತರ ಸಮಿತಿ ಸದಸ್ಯರು: ರೊಯ್ ಕ್ಯಾಸ್ತೆಲಿನೊ, ಎರಿಕ್ ಒಝೇರಿಯೊ, ಸ್ಟ್ಯಾನಿ ಆಲ್ವಾರಿಸ್, ಸ್ಟ್ಯಾನ್ಲಿ ಡಿಕುನ್ಹಾ, ರೊನಾಲ್ಡ್ ಗೋಮ್ಸ್, ಅನಿಲ್ ಡಿಕುನ್ಹಾ, ಅಮೃತ್ ಶೆಣೈ ಮತ್ತು ರೀನಾ ಡಿಸೋಜ.
2006 ರಲ್ಲಿ ಆರಂಭವಾದ ಕೊಂಕಣಿ ಪ್ರಚಾರ ಸಂಚಾಲನವು ಶಾಲೆಗಳಲ್ಲಿ ಕೊಂಕಣಿ ಕಲಿಕೆ ಬಗ್ಗೆ ಕೆಲಸ ಮಾಡುತ್ತಿದೆ.