ಕೊಂಕಣಿ ಲೋಕೋತ್ಸವ ಪ್ರಚಾರ ಅಭಿಯಾನದ ಸಮಾರೋಪ

Spread the love

ಕೊಂಕಣಿ ಲೋಕೋತ್ಸವ ಪ್ರಚಾರ ಅಭಿಯಾನದ ಸಮಾರೋಪ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಬರುವ ಫೆಬ್ರವರಿಯಲ್ಲಿ ಆಯೋಜಿಸಿದ ಕೊಂಕಣಿ ಲೋಕೋತ್ಸವದ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಯೋಜಿಸಿದ ಪ್ರಚಾರ ಅಭಿಯಾನದ ಸಮಾರೋಪವು ಶುಕ್ರವಾರ ಸಂಜೆ 4.30 ಗಂಟೆಗೆ ಮಂಗಳೂರಿನ ಬಿಷಪ್ಸ್ ಹೌಸ್‌ನಲ್ಲಿ ನಡೆಯಿತು.

ಪ್ರಚಾರ ವಾಹನವನ್ನು ಬರಮಾಡಿಕೊಂಡ ಬಿಷಪ್ ಎಲೋಶಿಯಸ್ ಪಾವ್ಲ್ ಡಿಸೋಜ ಕೊಂಕಣಿ ಲೋಕೋತ್ಸವದ ಮುಖಾಂತರ ಭಾಷೆ ಬೆಳೆಯಲಿ. ಕೊಂಕಣಿಯಂತಾ ಭಾಷೆಗೆ ಇಂಥಾ ರಾಜ್ಯವ್ಯಾಪಿ ಪ್ರಚಾರ ಅಗತ್ಯವಿದೆ. ಜನರಿಗೆ ತಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಯುತ್ತದೆ ಎಂದು ಶುಭ ಹಾರೈಸಿದರು.

ಇದೇ ವೇಳೆ ಪ್ರಚಾರ ಅಭಿಯಾನವು ಸಾಂಗವಾಗಿ ನೆರವೇರಲು ಸಹಕರಿಸಿದ ಸಂದೀಪ್ ಮೊಂತೇರೊ, ಪ್ರಕಾಶ್ ನಾಯ್ಕ್, ಸಂತೋಶ್ ಶೆಣೈ, ಸುನೀಲ್ ಡಿಸೋಜ, ರೋಶನ್ ಫೆರ್ನಾಂಡಿಸ್, ಜೇಮ್ಸ್ ಡಿಸೋಜ, ಜೆರೊಮ್ ಡಿಸೋಜ ಮತ್ತು ಜಾರ್ಜ್ ಡಿಸೋಜ ಈ 8 ಜನರನ್ನು ಬಿಷಪ್‌ರವರು ಶಾಲು ಹೊದಿಸಿ, ಹೂ ಹಾರ ಹಾಕಿ ಸನ್ಮಾನಿಸಿದರು.

ಎಲ್ಲರನ್ನು ಸ್ವಾಗತಿಸಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಬಿಷಪ್‌ರವರಿಗೆ ಲೋಕೋತ್ಸವಕ್ಕೆ ಅತಿಥಿಯಾಗಿ ಆಗಮಿಸಲು ಆಹ್ವಾನ ನೀಡಿದರು.

ಲೋಕೋತ್ಸವ ಸಮಿತಿ ಸದಸ್ಯರಾದ ಬಸ್ತಿ ವಾಮನ್ ಶೆಣೈ, ಪೋರ್‌ವಿಂಡ್ಸ್ ಮಾಲಕ ಎಲಿಯಾಸ್ ಫೆರ್ನಾಂಡಿಸ್, ಲಾರೆನ್ಸ್ ಡಿಸೋಜ, ವಿದ್ಯಾ ಕಾಮತ್, ದಿನೇಶ್ ಶೇಟ್, ನಿರಂಜನ ರಾವ್ ಮತ್ತಿತರರು ಉಪಸ್ಥಿತರಿದ್ದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಈ ಅಭಿಯಾನವು 02.01.2017 ರಂದು ಉಡುಪಿಯಿಂದ ಆರಂಭವಾಗಿ13.01.2017 ರವರೆಗೆ 12 ದಿನ ನಡೆಯಿತು. ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಮಂಡ್ಯ, ತುಮಕೂರು, ಮೈಸೂರು, ಕೊಡಗು ಮತ್ತು ಕಾಸರಗೋಡು ಮತ್ತು ದಕ್ಷಿಣ ಕನ್ನಡ ಈ 15 ಜಿಲ್ಲೆಗಳ 56 ಸ್ಥಳಗಳಲ್ಲಿ ಕೊಂಕಣಿ ಜನರನ್ನು ಒಗ್ಗೂಡಿಸಿ ಪ್ರಚಾರ ನಡೆಸಲಾಗಿತ್ತು .


Spread the love