ಕೊಣಾಜೆ: ಇಸ್ಪೀಟ್ ಆಟವಾಡುತ್ತಿದ್ದ ಮೂವರ ಬಂಧನ
ಮಂಗಳೂರು: ಇಸ್ಪೀಟ್ ಆಟ ಆಡುತ್ತಿದ್ದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅನಿಲ್ ಡಿಸೋಜಾ (45), ಹನೀಫ್ ಮೊಹಮ್ಮದ್ (32) ಮತ್ತು ಮಹಮ್ಮದ್ ನಾಝೀಮ್ (20) ಎಂದು ಗುರುತಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣಾ ಪಿಎಸ್ಐ ಅಶೋಕ್ ರವರಿಗೆ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಇಸ್ಪೀಟ್ ಆಟ ಆಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ನೆಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 6 ಪ್ಯಾಕೇಟ್ ಇಸ್ಪೀಟ್ ಎಲೆಗಳು, ರೂ 6750/- ನಗದು ಹಣ ನೆಲಕ್ಕೆಹಾಸಿದ ಟರ್ಪಾಲ್, ಮೋಬೈಲ್ ಪೋನ್ ಮತ್ತು ಒಂದು ಸ್ಕೂಟರ್ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ ಸುಮಾರು 63750/- ಆಗಿರುತ್ತದೆ.
ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್(ಐ.ಪಿ.ಎಸ್) ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರುಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕ್, ಕೊಣಾಜೆ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ವಿನೋದ್, ಎಎಸ್ಐ ಸಂಜೀವ್ ಸಿಬ್ಬಂದಿಗಳಾದ, ಹೆಚ್ಸಿ 2117 ಗಣೇಶ್, ಮಹೆಚ್ಸಿ 760 ರೇಷ್ಮಾ, ಪಿಸಿ 765 ಸಂತೋಷ್ ಕೆ.ಸಿ, ಪಿಸಿ 3204 ಸುರೇಶ್ ತಳವಾರ್, ಪಿಸಿ 3305 ಪ್ರಶಾಂತ್ ರವರೊಂದಿಗೆ ಕಾರ್ಯಚರಣೆ ನಡೆಸಿರುತ್ತಾರೆ.