ಕೊಣಾಜೆ ಪೊಲೀಸ್ ಠಾಣೆಯ “ ಪಾರ್ಟ್ ಟೈಮ್ ಜಾಬ್” ಸೈಬರ್ ಕ್ರೈಮ್ ಪ್ರಕರಣದ ಆರೋಪಿಗಳ ದಸ್ತಗಿರಿ

Spread the love

ಕೊಣಾಜೆ ಪೊಲೀಸ್ ಠಾಣೆಯ “ಪಾರ್ಟ್ ಟೈಮ್ ಜಾಬ್” ಸೈಬರ್ ಕ್ರೈಮ್ ಪ್ರಕರಣದ ಆರೋಪಿಗಳ ದಸ್ತಗಿರಿ

ದಿನಾಂಕ 21.07.2024 ರಂದು ಪಾರ್ಟ ಟೈಮ್ ಜಾಬ್ ನ ಬಗ್ಗೆ ಪಿರ್ಯಾದಿದಾರರ ಪೋನ್ ನಂಬ್ರಗೆ ವಾಟ್ಸಾಪ್ ಮೆಸೇಜ್ ಬಂದಿರುತ್ತದೆ. ಸದ್ರಿ ವಾಟ್ಸಾಪ್ ಮೆಸೇಜ್ ನಲ್ಲಿ ಟೆಲಿಗ್ರಾಮ್ App ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಟೆಲಿಗ್ರಾಮ್ App ನ್ನು ಓಪನ್ ಮಾಡಿದಾಗ ಟೆಲಿಗ್ರಾಮ್ ನಲ್ಲಿ ಪಾರ್ಟ ಟೈಮ್ ಜಾಬ್ ಏನೆಂದು ಕೇಳಿದಾಗ ಅವರಿಗೆ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಕ್ರೀನ್ ಶಾಟ್ ಕಳುಹಿಸಲು ಹೇಳಿದ್ದು ಪಿರ್ಯಾದಿದಾರರು ಅವರಿಗೆ ಸ್ಕ್ರೀನ್ ಶಾಟ್ ನ್ನು ಕಳುಹಿಸಿದ ತಕ್ಷಣ ಅವರ ಬ್ಯಾಂಕ್ ನ ಖಾತೆಗೆ RS 130/- ನ್ನು ಹಾಕಿರುತ್ತಾರೆ. ನಂತರ ಪಿರ್ಯಾದಿದಾರರು ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ನ್ನು ಕಳುಹಿಸಿದ್ದು, ಸದ್ರಿ ಲಿಂಕ್ ನ್ನು ಪಿರ್ಯಾದಿದಾರರು ಓಪನ್ ಮಾಡಿದಾಗ ಆರೋಪಿಗಳು 1000/- ಮೊತ್ತವನ್ನು ಹಾಕಲು ಹೇಳಿ ಹಾಗೇಯೆ ಅದರಂತೆ ಪಿರ್ಯಾದಿದಾರರು ತಮ್ಮ ಬ್ಯಾಂಕ್ ನ ಆಕೌಂಟ್ನಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ಪಿರ್ಯಾದಿದಾರರನ್ನು ಹೆಚ್ಚು ಹಣವನ್ನು ಕೋಡುವುದಾಗಿ ನಂಬಿಸಿ ಮೋಸಮಾಡಿ ಒಟ್ಟು ರೂ 28,18,065/- ವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುತ್ತಾರೆ . ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿರುತ್ತದೆ.

ಈ ಬಗ್ಗೆ ತನಿಖೆ ನಡೆಸಿದ ಪಿಐ ರಾಜೇಂದ್ರ ಬಿ ಕೊಣಾಜೆ ಠಾಣೆ, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಇತರ ಮಾಹಿತಿಗಳ ಆದಾರದ ಮೇಲೆ ಮೈಸೂರು ಉದಯಗಿರಿ ಮೂಲದ ನಾಲ್ಕು ಆರೋಪಿಗಳು ಮತ್ತು ಬೆಂಗಳೂರು ನೀಲಸಂದ್ರ ಮೂಲದ ಒರ್ವ ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ. ಈ ಪ್ರಕರಣದ ಬಗ್ಗೆ ವಿಚಾರಿಸಿದಾಗ ಆರೋಪಿ ಶುಯೇಬ್ ಎಂಬಾತನಿಗೆ ದಸ್ತಗಿರ್ ಎಂಬಾತನ ಪರಿಚಯವಾಗಿದ್ದು, ಆತನು ಆರೋಪಿ ಶುಯೇಬ್ ನಲ್ಲಿ ತನಗೆ ಬ್ಯಾಂಕ್ ಆಕೌಂಟ್ (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್ ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ಗಳನ್ನು ಮಾಡಿಸಿಕೊಡು, ನಿನಗೆ ಬ್ಯಾಂಕ್ ಲೋನ್ ಮಾಡಿಕೊಡುತ್ತೇನೆ ಅಲ್ಲದೇ ಒಂದು ಬ್ಯಾಂಕ್ ಆಕೌಂಟ್ ಗೆ 10,000/- ವನ್ನು ನೀಡುವುದಾಗಿ ತಿಳಿಸಿರುತ್ತಾನೆ. ಅದರಂತೆ ಶುಯೇಬ್ ನು 2 ಮೈಸೂರು ರಾಜೇಂದ್ರ ನಗರ ಶಾಖೆಯ ಕರ್ನಾಟಕ ಬ್ಯಾಂಕ ಮತ್ತು ಎನ್ ಆರ್ ಮೊಹಲ್ಲಾ ಶಾಖೆಯ ಕೆನರಾ ಬ್ಯಾಂಕ್ ಆಕೌಂಟ್ ಗಳನ್ನು (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್ ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ದಸ್ತಗೀರಿಗೆ ನೀಡಿದ್ದು, 20,000/- ಕೊಟ್ಟಿರುತ್ತಾನೆ. ಈ ಮಧ್ಯೆ ಶುಯೇಬ್ ಗೆ ಏರಟೆಲ್ ಕಂಪನಿಯಲ್ಲಿ ಪ್ರೋಡೆಕ್ಟ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಮೆಹಮೂದ್, ಎಂಬಾತನ ಪರಿಚಯ ಆಗಿದ್ದು, ಸೈಯ್ಯದ್ ಮೆಹಮೂದ್ ನಿಂದ ಸಿಮ್ ಗಳನ್ನು ಖರೀದಿಸಿದ್ದಲ್ಲದೇ ಶುಯೇಬ್ ನ ಸೂಚನೆಯಂತೆ ಆತನು ಹೇಳಿದ ವ್ಯಕ್ತಿಗಳಿಗೆ ಸೈಯ್ಯದ್ ಮೆಹಮೂದ್ ಸಿಮ್ ಗಳನ್ನು ಕೊಟ್ಟಿರುತ್ತಾನೆ.

ಈ ಸಮಯದಲ್ಲಿ ಶುಯೇಬ್ ನು ಸೈಯ್ಯದ್ ಮೆಹಮೂದ್ ನಲ್ಲಿ ದಸ್ತಗೀರ್ ಎಂಬಾತನು ಲೋನ್ ಮಾಡಿಕೊಡುವ ವಿಚಾರವನ್ನು ತಿಳಿಸಿ, ಒಂದು ಬ್ಯಾಂಕ್ ಆಕೌಂಟ್ ನ್ನು ಕೊಟ್ಟರೆ ರೂ 10,000/- ವನ್ನು ನೀಡುತ್ತಾನೆ. ಅದರಂತೆ ಸೈಯ್ಯದ್ ಮೆಹಮೂದ್ ನು ಎರಡು ಬ್ಯಾಂಕ್ ಆಕೌಂಟ್ (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್ ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ನ್ನು ಶುಯೇಬ್ ಗೆ ಕೊಟ್ಟಿದ್ದು, ಸೈಯ್ಯದ್ ಮೆಹಮೂದ್ ನಿಗೆ ರೂ 20,000/- ವನ್ನು ನೀಡಿರುತ್ತಾನೆ. ನಂತರ ಶುಯೇಬ್ ಆತನ ಪರಿಚಯದ ಮೊಹ್ಸೀನ್ ಅಹಮ್ಮದ್ ಖಾನ್ ಎಂಬಾತನಿಗೆ ಕೂಡ ಲೋನ್ ಮಾಡಿಕೊಡುವ ವಿಚಾರ ತಿಳಿಸಿ ಒಂದು ಬ್ಯಾಂಕ್ ಆಕೌಂಟ್ ನ್ನು ಕೊಟ್ಟರೆ 10,000/- ನೀಡುವುದಾಗಿ ತಿಳಿಸಿದಂತೆ ಮೊಹ್ಸೀನ್ ಅಹಮ್ಮದ್ ಖಾನ್ 2 ಆಕೌಂಟ್ (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್ ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ನ್ನು ನೀಡಿ ರೂ 20,000/- ವನ್ನು ಪಡೆದುಕೊಂಡಿರುತ್ತಾನೆ. ಸೈಯ್ಯದ್ ಮೆಹಮೂದ್ ನು ತನ್ನ ಪರಿಚಯದ ಮೊಹಮ್ಮದ್ ಶಾರೀಕ್ ಅಹಮ್ಮದ್ ಎಂಬಾತನಲ್ಲಿ ಶುಯೇಬ್ ಎಂಬಾತನು ಲೋನ್ ಮಾಡಿಕೊಡುವ ಹಾಗೂ ಆಕೌಂಟ್ ನ್ನು ನೀಡಿದರೆ 10,000/- ಹಣವನ್ನು ನೀಡುವ ವಿಚಾರವನ್ನು ತಿಳಿಸಿದಂತೆ ಮೊಹಮ್ಮದ್ ಶಾರೀಕ್ ಅಹಮ್ಮದ್ ನು ಸುಹೈಲ್ ಎಂಬಾತನಿಗೆ ವಿಚಾರ ತಿಳಿಸಿ 1 ಆಕೌಂಟ್ ನ್ನು(ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್ ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ನ್ನು ಸೈಯ್ಯದ್ ಮೆಹಮೂದ್ ಎಂಬವರಿಗೆ ನೀಡಿರುತ್ತಾನೆ ಮತ್ತು ಬೆಂಗಳೂರು ಮೂಲದ ಆರೋಪಿ ಮೊಹಮ್ಮದ್ ಅಜಂ 3000/- ರೂ ಗೆ ಬೆಂಗಳೂರಿನ ಎಂಜಿ ರೋಡು ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಖಾತೆ ಮಾಡಿ ಇನ್ನೂರ್ವ ಆರೋಪಿಗೆ ಮಾರಾಟಮಾಡಿರುತ್ತಾನೆ.

ಈ ರೀತಿ ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಬ್ಯಾಂಕ ಖಾತೆಯನ್ನು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಇದೆ ರೀತಿ ಮೈಸೂರಿನ ನೆಹರುನಗರ, ಶಾಂತಿನಗರ, ರಾಜೀವ ನಗರ, ಹಾಗೂ ಬೆಂಗಳೂರಿನ ನೀಲಸಂದ್ರ ಹಾಗೂ ಹಲವಡೆ ಸೈಬರ್ ಮೋಸದ ಅಪರಾಧಕ್ಕೆ ಹೆಚ್ಚಿನ ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಹಣಕ್ಕೆ ಮಾರಾಟ ಮಾಡಿರುವುದು ಆರೋಪಿಗಳ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್(ಐ.ಪಿ.ಎಸ್) ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರುಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕ್ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ಬಿ, ಪಿಎಸ್ಐ ಪುನೀತ್ ಗಾಂವ್ಕರ್ , ಪಿಎಸ್ಐ ಅಶೋಕ ಹಾಗೂ ಕೊಣಾಜೆ ಠಾಣಾ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.


Spread the love