ಕೊರೊನ ಸಮುದಾಯಕ್ಕೆ ಹರಡಲು ಬಿಜೆಪಿ ಯೇ ಕಾರಣ – ಪಿ. ವಿ. ಮೋಹನ್
ಮಂಗಳೂರು: ಜಿಲ್ಲಾಡಳಿತ ಘೋಷಿಸಿದ ಕಡಿಮೆ ಅವದಿಯ ಲಾಕ್ ಡೌನ್ ನಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಇದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾದ್ಯವಿಲ್ಲ. ಸರ್ಕಾರದ ವೈಫಲ್ಯ ವನ್ನು ಮುಚ್ಚುವ ತೇಪೆ ಹಚ್ಚುವ ಕ್ರಮ ಇದಾಗಿದೆ. ಜಿಲ್ಲಾದ್ಯಾಂತ ಕೊರೊನಾ ಹರಡಿದೆ. ಸಮುದಾಯದಲ್ಲಿ ಪಸರಿಸಿಕೊಂಡಿದೆ. ಇಂತಹ ಆತಂಕದ ಗಂಭೀರ ಪರಿಸ್ಥಿತಿಗೆ ಜಿಲ್ಲೆಯ ಬಿಜೆಪಿಯ ದುರ್ಬಲ ರಾಜಕೀಯ ನಾಯಕತ್ವವೇ ಕಾರಣವೆಂದು ಕಾಂಗ್ರೆಸ್ ಪಕ್ಷ ವು ಆಪಾದನೆ ಮಾಡುತ್ತದೆ.
ಪ್ರಾರಂಭದಲ್ಲಿಯೇ ಬಂಟ್ವಾಳ ತಾಲ್ಲೂಕಿನ ಕಾಣಿಸಿಕೊಂಡ ಕೊರೊನಾ ಸೋಂಕಿನ ನೈಜ ಮೂಲವನ್ನು ಕಂಡುಹಿಡಿಯಲು ತನಿಖೆಗೆ ಕಾಂಗ್ರೆಸ್ ಪಕ್ಷ ವು ಒತ್ತಾಯ ಮಾಡಿದೆ. ಪ್ರಾಥಮಿಕ ಹಂತದಲ್ಲಯೇ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವುದಕ್ಕೆ ಹೆಚ್ಚು ಒತ್ತು ಜಿಲ್ಲಾಡಳಿತ ಕೊಡಬೇಕಾಗಿತ್ತು. ಆದರ ಬದಲು ಕಾಂಗ್ರೆಸ್ಸ್ ಪಕ್ಷ ವು ಸಹಕರಿಸುತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷವು ಜನರ ಗಮನವನ್ನು ಬೇರೆ ಕಡೆ ಸೆಳೆಯುವ ರಾಜಕೀಯ ವನ್ನು ಮಾಡಿತು. ಉಸ್ತುವಾರಿ ಸಚಿವರು ಮತ್ತು ಸಂಸದರು ಸೇರಿ ಬಂಟ್ವಾಳದ ಕೊರೊನಾ ಕೇಸ್ ಬಗೆ ತನಿಖೆಗೆ ಆದೇಶ ನೀಡಿ ಜನರ ಕಣ್ಣು ಒರೆಸುವ ತಂತ್ರ ಮಾಡಿದರು. ಎರಡು ತಿಂಗಳಾದರೂ ಇನ್ನೂ ತನಿಖೆಯು ಪೂರ್ತಿ ಗೊಂಡಿಲ್ಲ.ತದನಂತರ ಟ್ರಾವೆಲ್ ಹಿಸ್ಟರಿ ಇಲ್ಲದ ಕೊರೊನಾ ಸೋಂಕಿನ ಕೇಸೊಂದನ್ನು ಎಕ್ಕೂರಿನಲ್ಲಿ ,ಅಲ್ಲಿಯ ಜನರೇ ಪತ್ತೆಹಚ್ಚಿ ಕೊಟ್ಟರು. ನೂರಾರು ಜನರ ಸಂಪರ್ಕದಲ್ಲಿ ಇದ್ದ ಈ ಪ್ರಕರಣದ ಮೂಲ ಇನ್ನೂ ಪತ್ತೆಯಾಗಿಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದ ಸ್ಥಳೀಯರಿಂದಲೇ ಸೋಂಕು ಹರಡುತ್ತಿದ್ದು
ಮೂರನೇ ಹಂತದ ಅಪಾಯ ಸ್ಥಿತಿ ಗೆ ಜಿಲ್ಲೆ ಬಂದಿದೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ, ಉದಾಸೀನತೆ ಮತ್ತು ಕಾರ್ಯಕ್ಷಮತೆಯ ಕೊರತೆ ಕಾರಣ. ಲಾಕ್ ಡೌನ್ ಅವದಿಯಲ್ಲಿ ತಪಾಸಣೆ , ಸೋಂಕಿತರ ಸಂಪರ್ಕ ಹೊಂದಿದವರ ಪತ್ತೆ ಮತ್ತು ಕ್ವಾರಂ ಟೈನ್ ಗೆ ಅಗತ್ಯವಿರುವ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಕಾಂಗ್ರೆಸ್ ಪಕ್ಷ ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್ ಅವರು ಒತ್ತಾಯ ಮಾಡಿದರು.
ಖಾಸಗಿ ಆಸ್ಪತ್ರೆಯಲ್ಲಿ ಕೂಡ ಉಚಿತ ಚಿಕಿತ್ಸೆ: ಕೋವಿಡ್-19 ಕಾಯಿಲೆಯು ಒಂದು ರಾಷ್ಟ್ರೀಯ ವಿಪತ್ತು ಎಂದು ಈಗಾಗಲೇ ಘೋಷಿಸಲಾಗಿದೆ.ಸರ್ಕಾರದ ವೈಫಲ್ಯಗಳಿಂದ, ಅವೈಜ್ಞಾನಿಕ ನೀತಿನಿಯಮಗಳಿಂದ ಜನರ ಮೇಲೆ ವ್ಯಾಪಕವಾಗಿ ಕೋವಿಡ್ ಹೇರಲ್ಪಟ್ಟಿದೆ ಎಂಬ ಭಾವನೆ ಜನತೆಯಲ್ಲಿ ಇದೆ. ಅದುದರಿಂದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಆರೋಗ್ಯವನ್ನು ಕಾಪಾಡುವುದು, ಜೀವ ವನ್ನು ಉಳಿಸುವುದು ಸರ್ಕಾರದ ಪರಮೋಚ್ಛ ಪ್ರಾಥಮಿಕ ಕರ್ತವ್ಯವಾಗಿದೆ.ಸರ್ಕಾರದ ಬಳಿ ಹಣಕಾಸಿನ ವ್ಯವಸ್ಥೆ ಇದೆ. ಪ್ರಧಾನ ಮಂತ್ರಿ ಕೇರ್ ಸ್ , ಮುಖ್ಯ ಮಂತ್ರಿ ಪರಿಹಾರ ನಿಧಿ ಸಾವಿರಾರು ಕೋಟಿ ಜಮಾ ಆಗಿದೆ. ಅದು ಅಲ್ಲದೆ ವಿಪತ್ತಿಗಾಗಿ ಮೀಸಲಿಟ್ಟ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ, ವಿಪತ್ತು ಪರಿಹಾರ ನಿಧಿ, ರಾಷ್ಟ್ರೀಯ ವಿಪತ್ತು ಆಕಸ್ಮಿಕ ನಿಧಿ, ಎಸ್ ಡಿ ಅರ್ ಎಮ್ ಎ ಯಲ್ಲಿ ಸುಮಾರು 4000ಕೋಟಿ ಇದೆ. ಕೇರಳ ಸರ್ಕಾರವು ಶೇಕಡ 35 ರಷ್ಟು ಹಣವನ್ನು ಕೊರೊನಾ ಚಿಕಿತ್ಸೆ ಗಾಗಿ ಈ ನಿಧಿಯಿಂದ ಬಳಸುತ್ತಿದೆ.ತಮಿಳು ನಾಡು ಸರ್ಕಾರ ವು ಕೂಡ ಬಳಸುತ್ತಿದೆ. ರಾಜ್ಯ ಸರ್ಕಾರವು ಕೋವಿಡ್ ರೋಗಿಗಳಿಗೆ ಮೀಸಲಾದ ಖಾಸಗಿ ಆಸ್ಪತ್ರೆ ಮತ್ತು ಹೋಟೆಲ್ ಮಾಲೀಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ದುಬಾರಿ ದರವನ್ನು ನಿಗದಿಪಡಿಸಿದೆ.ಅವರ ಜತೆ ಸೇರಿ ಜನತೆಯನ್ನು ಲೂಟಿ ಮಾಡುದನ್ನು ನಿಲ್ಲಿಸಿ ವಿಪತ್ತು ನಿರ್ವಹಣೆ ಗಾಗಿಟ್ಟ ಹಣವನ್ನು ಖಾಸಗಿ ಆಸ್ಪತ್ರೆ ಮತ್ತು ಹೋಟೆಲ್ ಗಳಲ್ಲಿ ದಾಖಲಾಗಿರುವ ಕೊರೊನಾ ರೋಗಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಮತ್ತು ಕ್ವಾರಂ ಟೈನ್ ನಲ್ಲಿ ಮೂಲ ಸೌಕರ್ಯಗಳ ಖರ್ಚಿಗಾಗಿ ಬಳಸಿ. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ಒಂದು ಪ್ರಮಾಣಿತ ಶಿಷ್ಟಾಚಾರ ವನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಪಕ್ಷವು ಆಗ್ರಹ ಪಡಿಸುತ್ತದೆ.