ಕೊರೋನಾ ಬಿಕ್ಕಟ್ಟು: ಬೆಂಗಳೂರಿನಲ್ಲಿ ಕ್ರೈಸ್ತ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಮನವಿ

Spread the love

ಕೊರೋನಾ ಬಿಕ್ಕಟ್ಟು: ಬೆಂಗಳೂರಿನಲ್ಲಿ ಕ್ರೈಸ್ತ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಕೊರೋನಾ ಬಿಕ್ಕಟ್ಟು ಹಾಗೂ ಬೆಂಗಳೂರಿನಲ್ಲಿ ಕ್ರೈಸ್ತ ಆಸ್ಪತ್ರೆಗಳು ಎದುರಿಸುತ್ತಿರುವ ಕಷ್ಟಗಳು ಮತ್ತು ಸವಾಲುಗಳ ಬಗ್ಗೆ ಬೆಂಗಳೂರು ಮಹಾಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ ಪೀಟರ್ ಮಚಾದೊ ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಮನವಿಯ ಪೂರ್ಣ ಪಾಠ ಇಂತಿದೆ

ನಿಮ್ಮ ಸ್ಫೂರ್ತಿಧಾಯಕ ನಾಯಕತ್ವದಲ್ಲಿ ಕರ್ನಾಟಕ ಸರ್ಕಾರ ಕೊರೊನಾ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿರು ವುದನ್ನು ಕಂಡು ಹೃದಯ ತುಂಬಿ ಬರುತ್ತದೆ. ಈ ಸವಾಲಿನ ಸಂದರ್ಭದಲ್ಲಿ ನಿಮ್ಮ ದಿಟ್ಟ ನಾಯಕತ್ವಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಕೊರೋನಾ ವೈರಾಣುವಿನ ಹಬ್ಬುವುದನ್ನು ತಡೆಗಟ್ಟಲು ಸಮಯೋಚಿತವಾಗಿ ಅಗತ್ಯ ಕಾರ್ಯಗಳನ್ನು ಕೈಗೊಂಡ ರಾಜ್ಯ ಸರ್ಕಾರ ಮತ್ತು ಅದರ ನಾಗರಿಕ ಹಾಗೂ ಆರೋಗ್ಯ ಇಲಾಖೆ ಸಂಸ್ಥೆಗಳಿಗೆ ನಾವು ವಂದಿಸುತ್ತೇವೆ.

ಈ ಸಾಂಕ್ರಾಮಿಕ ಪಿಡುಗನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನ ಜೊತೆಗೂಡಿ ಕ್ರೈಸ್ತ ಮಿಷನ್ ಆಸ್ಪತ್ರೆಗಳು ತಮ್ಮೆಲ್ಲಾ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಬೆಂಗಳೂರು ಮತ್ತು ಕರ್ನಾಟಕ ಸರಕಾರ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಲಾಭರಹಿತ ಸೇವಾ ವಲಯದ ಸರ್ಕಾರದೊಂದಿಗೆ ಸೇರಿ ಕೋವಿಡ್ 19 ಸಾಂಕ್ರಮಿಕ ರೋಗದ ವಿರುದ್ಧ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ಎಎಸ್ಟಿ) ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುನರುಚ್ಚರಿಸುತ್ತದೆ.

ಜುಲೈ 31, 2020 ರಂದು ನಾನು ಕ್ರೈಸ್ತ ಆಸ್ಪತ್ರೆಗಳ ಸಭೆಯನ್ನು ಆಯೋಜಿಸಿದ್ದಾರೆ. ಹಲವು ಆಸ್ಪತ್ರೆಗಳ ಪೈಕಿ ಕೆಲವು ಪ್ರಧಾನ ಆಸ್ಪತ್ರೆಗಳೊಂದಿಗೆ ಸಮಾಲೋಚನೆ ನಡೆಸಿದ. ನಿಮಗೆ ತಿಳಿದಿರುವಂತೆ ಕ್ರೈಸ್ತ ಆಸ್ಪತ್ರೆಗಳ ಬಡವರಿಗೆ ಹಾಗೂ ಸವಲತ್ತುಗಳಿಲ್ಲ ದವರಿಗೆ ಚಿಕಿತ್ಸೆ ನೀಡುವುದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಈ ವಿಷಮ ಪರಿಸ್ಥಿತಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಹಾಗೂ ಅದಕ್ಕೆ ಚಿಕಿತ್ಸೆ ನೀಡುವಲ್ಲಿ ನಾವು ಸದಾ ಸನ್ನದ್ಧರಾಗಿದ್ದೆವು ಮತ್ತು ಈ ಸಮಯದಲ್ಲಿ ನಮ್ಮ ಆಸ್ಪತ್ರೆಗಳಿಗೆ ಬಂದ ನೂರಾರು ಕೋವಿಡ್ ರೋಗಿಗಳಿಗೆ ನಾವು ಚಿಕಿತ್ಸೆಯನ್ನು ನೀಡುತ್ತಲೇ ಇದ್ದೇವೆ. ಈ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ನತದೃಷ್ಟ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹಾಗೂ ಆಸ್ಪತ್ರೆಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಕಷ್ಟಗಳು ಹಾಗೂ ಸವಾಲುಗಳು ಕುರಿತು ಚರ್ಚಿಸಲಾಯಿತು. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸಲು ನೀವು ಸಂತೋಷದಿಂದ ಸಿದ್ಧರಾಗಿದ್ದರು ಸಹ ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಕಾರ್ಯಸಾಧ್ಯತೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಇಲ್ಲದ ರೋಗಿಗಳ ಭೇಟಿ: ಆಸ್ಪತ್ರೆಗಳಿಗೆ ಕೊರೋನಾ ಇಲ್ಲದ ರೋಗಿಗಳ ಬೇಟಿಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ ನಮ್ಮ ಆಸ್ಪತ್ರೆಗಳ ಆದಾಯದಲ್ಲಿ ಅತೀವ ಇಳಿಕೆಯಾಗಿದೆ. ನಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳವನ್ನು ನೀಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಿಮ್ಮ ಆಸ್ಪತ್ರೆಗಳು ಹಣಕಾಸಿನ ಸಂಕಷ್ಟದಲ್ಲಿದ್ದು, ನಮಗೆ ಅತೀವ ನಷ್ಟವಾಗಿದೆ. ಈ ನಿಟ್ಟಿನಲ್ಲಿ ನಾವು ಮುಂದೆ ಕಾರ್ಯನಿರ್ವಹಿಸುತ್ತದೆ ಇಲ್ಲವೋ ಎಂಬ ಸಂಶಯ ಉಂಟಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಡವರಿಗೆ, ಸವಲತ್ತು ಇಲ್ಲದವರಿಗೆ ನೀಡುತ್ತಿದ್ದ ಮಾನವೀಯ ಚಿಕಿತ್ಸೆ ಸಾಧ್ಯವಾಗುವುದಿಲ್ಲ ಎಂದು ಹೇಳಲು ವಿಷಾಧಿಸುತ್ತೇವೆ. ಸರ್ಕಾರಿ ಕೋಟಾದ ರೋಗಿಗಳಿಗೆ ನೀಡಿದ ಚಿಕಿತ್ಸೆಗೆ ನಮಗೆ ಸರ್ಕಾರದಿಂದ ಬರಬೇಕಿದ್ದ ಹಣ ಸಹ ಅದನ್ನು ಹಿಂತಿರುಗಿ ಬಂದಿಲ್ಲವಾದ್ದರಿಂದ ಇದು ನಮ್ಮನ್ನು ಇನ್ನಷ್ಟು ವಿಷಮ ಸ್ಥಿತಿ ತಳ್ಳುತ್ತದೆ.

2. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ ಎಸ್ಟಿ) ಮರುಪಾವತಿ: ಈಗ ನಮಗೆ ಕಷ್ಟವಾಗಿರುವುದು ಸಿಬ್ಬಂದಿಗಳಿಗೆ ಸಂಬಳ ನೀಡುವುದು ಮತ್ತು ನಮ್ಮ ದೈನಂದಿನ ಆಸ್ಪತ್ರೆಯ ಆಡಳಿತವನ್ನು ನಡೆಸುವುದು. ಹಣ ಮರುಪಾವತಿಯಲ್ಲಿ ತಡವಾದರೆ ಸಿಬ್ಬಂದಿಗೆ ಸಂಬಳ తోడెలు ಆಸ್ಪತ್ರೆ ಅಶಕ್ತವಾಗುತ್ತದೆ. ಹೀಗಾದರೆ ನಾವು ನಮ್ಮ ಸೇವೆಯನ್ನು ಮುಂದುವರೆಸಲು ಆಗುವುದಿಲ್ಲ. ದಯವಿಟ್ಟು ಸಂಬಂಧಪಟ್ಟ ಇಲಾಖೆಗೆ ಆದ್ಯತೆಯ ಮೇರೆಗೆ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಲು ವಿನಂತಿ. ಎಸ್ ಎಸ್ಟಿ ಹಣ ಪಾವತಿ ಪ್ರಕ್ರಿಯೆ ಬಹಳ ನಿಧಾನ ಹಾಗೂ ತೊಡಕಿನಿಂದ ಕೂಡಿದ್ದಾಗಿದ್ದು ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ನಮ್ಮ ಕೋವಿಡ್ ಯೋಧರುಗಳು ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿಗೆ ಸಮಯಕ್ಕೆ ತಕ್ಕಂತೆ ಸಂಬಳ ನೀಡಲುಆಗುತ್ತಿಲ್ಲ. ಮಾನವ ಸಂಪನ್ಮೂಲದ ಕೊರತೆ, ಕೆಲಸದ ಅವಧಿ ವಿಸ್ತರಣೆ, ವಿಶ್ರಾಂತಿಇಲ್ಲದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಇವೆಲ್ಲವೂ ನಮ್ಮ ಆಸ್ಪತ್ರೆಗಳಿಗೆ ಸಮಸ್ಯೆಗಳಾಗಿವೆ. ಈ ಪರಿಸ್ಥಿತಿ ಮುಂದುವರೆದರೆ ನಿಮ್ಮ ಲಾಭರಹಿತ ಕ್ರೈಸ್ತ ಆಸ್ಪತ್ರೆಗಳು ಅನುಕೂಲ ಇಲ್ಲದವರಿಗೆ, ದಿಕ್ಕಿಲ್ಲದವರಿಗೆ ಸೇವೆ ಮಾಡಲು ನಮ್ಮಿಂದಾಗುವುದಿಲ್ಲ.

3. ನಮ್ಮ ಆಸ್ಪತ್ರೆಗಳ ಶೇ 50% ಹಾಸಿಗೆಗಳು ಸರ್ಕಾರಕ್ಕೆ ನೀಡುವುದು: ಸರ್ಕಾರವು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಹಾಸಿಗೆಗಳ ಶೇ.50% ಅನ್ನು ಕೋವಿಡ್ ರೋಗಿಗಳಿಗೆ ಸರ್ಕಾರಕ್ಕೆ ಬಿಟ್ಟುಕೊಡಲು ಆದೇಶಿಸಿದೆ. ಆಸ್ಪತ್ರೆಯಲ್ಲಿರುವ ಒಟ್ಟು ಹಾಸಿಗೆಗಳನ್ನು ಲೆಕ್ಕಮಾಡಿ, ಸರ್ಕಾರ ಅವಶ್ಯಕ, ಕೋವಿಡ್ ರಹಿತ – ಮಕ್ಕಳು, ಗರ್ಭಿಣಿಯರು, ಕ್ಯಾನ್ಸರ್, ಡಯಾಲಿಸಿಸ್, ಸುಟ್ಟ ಗಾಯಗಳು ಮತ್ತು ಮನೋವೈದ್ಯಕೀಯ ರೋಗಿಗಳಿಗಾಗಿ ಮೀಸಲಿಡುವಂತೆ ಸೂಚಿಸಿದೆ.

ಈ ಸೇವೆಗಳ ಹಾಸಿಗೆಗಳು ಸಹ ಸರ್ಕಾರ ಶೇ 50% ಮಾರ್ಗಸೂಚಿಯಲ್ಲಿ ಸೇರಿದ್ದಾರೆ ಖಂಡಿತ ಕೋವಿಡ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ವಿಷಯದ ಕುರಿತು ಈಗಾಗಲೇ ಮಾತುಕತೆ ನಡೆದಿದೆ ಎಂದು ತಿಳಿದಿದ್ದರೂ ಸಹ, ನಮಗೆ ಇನ್ನಷ್ಟೇ ಸಕಾರಾತ್ಮಕ ಪ್ರತಿಕ್ರಿಯೆ ಬರಬೇಕಿದೆ. ಇದು ಸುಸ್ಥಿರತೆಯನ್ನು ಮೀರುವ ಸಂಭವವಿರುವುದರಿಂದ ಎಲ್ಲಾ ವಿಭಾಗಗಳಲ್ಲಿ ಶೇ.50% ಹಾಸಿಗೆಗಳನ್ನು ಮೀಸಲಿಡಬೇಕು ಎಂದಿರುವುದನ್ನು ಮರುಪರಿಶೀಲಿಸಿ, ಇದನ್ನು ಕೈಬಿಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.

ಒಳ ಬರುವ ರೋಗಿಗಳು: ಬೇರೆ ಆಸ್ಪತ್ರೆಗಳಿಗೆ ಹೋಗಲು ನಿರಾಕರಿಸಿದ ದೊಡ್ಡ ಮಟ್ಟಿಗೆ ಸಂಖ್ಯೆಯ ಕೋವಿಡ್ ರೋಗಿಗಳು ನಮ್ಮ ಕ್ರೈಸ್ತ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಎಸ್ ಎಸ್ಟಿ ಅಡಿಯಲ್ಲಿ ಸೂಕ್ತ ರೋಗಿಗಳನ್ನು ಒಳಗೊಳ್ಳುವ ಎಸ್ ಎಸ್ಟಿ ಟ್ರಸ್ಟ್ ನಿರ್ದೇಶಕ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಕೋವಿಡ್ ರೋಗಿಗಳು ನೇರವಾಗಿ ಅಲ್ಲಿಗೆ ದೌಡಾಯಿಸುತ್ತಿದ್ದಾರೆ. ಇನ್ನುಳಿದ ಕ್ರೈಸ್ತ ಆಸ್ಪತ್ರೆಗಳಲ್ಲಿ ಇದೇ ಸ್ಥಿತಿ.

5. ಎರಡು ರೀತಿಯ ಸಮಸ್ಯೆ: ಶೇ.50% ಹಾಸಿಗೆಗಳು ಒತ್ತಟ್ಟಿಗಿರಲಿ, ಸರ್ಕಾರದ ಬೆಡ್ಗಳಿಗೆ ಬರುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿಯಾಗಿ ಆಸ್ಪತ್ರೆಗೆ ಬಂದು ದಾಖಲಾಗುವ ಕೋವಿಡ್ ರೋಗಿಗಳು ಸಂಪೂರ್ಣ ಚಿಕಿತ್ಸೆ ಪಡೆದುಕೊಂಡ ನಂತರ ಆಸ್ಪತ್ರೆಯ ಶುಲ್ಕವನ್ನು ಪಾವತಿಸುವುದಿಲ್ಲ. ಕೇಳಿದರೆ ಎಸ್ ಎಎಸ್ಟಿ ಅಡಿಯಲ್ಲಿ ಸರ್ಕಾರದಿಂದ ಪಡೆದುಕೊಳ್ಳಿ ಎಂದು ಹೇಳುತ್ತಾರೆ. ಡಿ ಸ್ಟಾರ್ಟ್ ಆಗುವ ಸಮಯದಲ್ಲಿ ಈ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವ ಅವರ ಸಂಬಂಧಿಗಳು ಕಾಣೆಯಾಗಿ ನಂತರ ಹಲವು ವ್ಯಕ್ತಿಗಳೊಂದಿಗೆ ಅಥವಾ ಕುಟುಂಬಸ್ಥರೊಂದಿಗೆ ಬಂದು ಸಿಬ್ಬಂದಿಗೆ ಬೆದರಿಕೆ ಹಾಕುತ್ತಾರೆ. ಮಾಹಿತಿಯನ್ನು ಕೊನೆಯ ಕ್ಷಣದಲ್ಲಿ ಎಸ್ಎಎಸ್ಟಿ ವೆಬ್ ಪೋರ್ಟಲ್ಗೆ ಭರ್ತಿಮಾಡುವುದಕ್ಕೆ ಹಲವಾರು ಪತ್ರ ವ್ಯವಹಾರ ಮತ್ತು ಡಾಕ್ಯುಮೆಂಟೇಶನ್ ಪ್ರಕ್ರಿಯೆ ಇರುವುದರಿಂದ ಇದು ಸುಲಭ ಸಾಧ್ಯವಾಗುತ್ತಿಲ್ಲ.

ಮೇಲಿನ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ, ಸುಗಮ ಕಾರ್ಯನಿರ್ವಹಣೆಗೆ ನೆರವಾಗಲು ತಮ್ಮಲ್ಲಿ ನಾನು ವಿನಮ್ರವಾಗಿ ಬೇಡಿಕೊಳ್ಳುತ್ತಿದ್ದೇನೆ. ಆರೋಗ್ಯವನ್ನು ಲೆಕ್ಕಿಸದೆ ನೀವು ಮಾಡುತ್ತಿರುವ ಜನ ಸೇವೆಗೆ ತಮ್ಮನ್ನು ಶ್ಲಾಘಿಸುತ್ತಾರೆ, ನಿಮ್ಮ ದಿಟ್ಟ ನಾಯಕತ್ವದಲ್ಲಿ ನಮ್ಮ ವಿಶ್ವಾಸವನ್ನಿರಿಸುತ್ತೇವೆ. ನೀವು ಆದಷ್ಟು ಬೇಗ ಗುಣಮುಖರಾಗಲೆಂದು ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದು ಮನವಿಯಲ್ಲಿ ಧರ್ಮಾಧ್ಯಕ್ಷರು ಕೋರಿದ್ದಾರೆ.


Spread the love