ಕೊವಿಡ್ ನಂತರ ನಾಗರೀಕ ಸಮಾಜದ ಪಾತ್ರಹೆಚ್ಚಿದೆ-ಡಾ. ಹರೀಶ್ ರಾಮಸ್ವಾಮಿ 

Spread the love

ಕೊವಿಡ್ ನಂತರ ನಾಗರೀಕ ಸಮಾಜದ ಪಾತ್ರಹೆಚ್ಚಿದೆ-ಡಾ. ಹರೀಶ್ ರಾಮಸ್ವಾಮಿ 

ಮಂಗಳೂರು : ಉತ್ತಮ ನಾಗರೀಕ ಸಮಾಜ ಕೊವಿಡ್ ನಚಿತರದ ನಮ್ಮ ಬೆಳವಣಿಗೆಯಲ್ಲಿ ಮೂಲಭೂತ ಅವಶ್ಯಕತೆಯಾಗಿರಲಿದೆ, ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ರಾಜಕೀಯ ಶಾಸû್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾದ್ಯಾಪಕ ಡಾ. ಹರೀಶ್ ರಾಮಸ್ವಾಮಿ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಾಜಕೀಯಶಾಸ್ತ್ರ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಐಕ್ಯೂಎಸಿ ವಿಭಾಗಗಳು ಜಂಟಿಯಾಗಿ ಗುರುವಾರ ಆಯೋಜಿಸಿದ್ದ ನಾಗರೀಕ ಸಮಾಜ ಮತ್ತು ಸರಕಾರದ ನಡುವಿನ ನಂಟು ಎಂಬ ರಾಷ್ಟ್ರ ಮಟ್ಟದ ವೆಬಿನಾರ್‍ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಜವಾಬಾರಿಯುತನ ನಾಗರೀಕ ಸಮಾಜ ಸರ್ಕಾರಕ್ಕೆ ತಲುಪಲಾಗದ ವಿಷಯಗಳನ್ನು ತಲುಪಬೇಕು. ಸಂಪನ್ಮೂಲದ ಸದ್ಭಳಕೆಗೆ ಸಹಾಯಕವಾಗಬೇಕು ಎಂದರು ಹೇಳಿದರು.

ಉದ್ಘಾಟನಾ ಭಾಷಣದಲ್ಲಿ ಮಂಗಳ್ರರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಇದು ಪ್ರಜಾಪ್ರಭುತ್ವದಲಿ ್ಲನಮ್ಮ ಪಾತ್ರದ ಕುರಿತು ಯೋಚಿಸುವ ಸಮಯ ಎಂದರು.

ಮಂಗಳ್ರರು ವಿಶ್ವವಿದ್ಯಾನಿಲಯದ ಕುಲಸಚಿವ ರಾಜು ಮೊಗವೀರ, ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ. ಎ, ರಾಜ್ಯಶಾಸû್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ ಪಂಡಿತ್, ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥೆ ಡಾ. ಶಾನಿ ಕೆ.ಆರ್, ಸಮಾಜಶಾಸû್ರ ವಿಭಾಗದ ಡಾ. ಗಾಯತ್ರಿ ಎನ್, ಐಕ್ಯೂಎಸಿ ಸಂಯೋಜಕ ಡಾ. ವೀರಭದ್ರಪ್ಪ ಉಪಸ್ಥಿತರಿದ್ದರು. ದೇಶದ ವಿವಿದೆಡೆಯಿಂದ 300 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.


Spread the love