ಕೊವೀಡ್-19 ರಿಂದ ಮೃತ ರಾದ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುವಲ್ಲಿ ದಕ ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ – ಐವನ್

Spread the love

ಕೊವೀಡ್-19 ರಿಂದ ಮೃತ ರಾದ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುವಲ್ಲಿ ದಕ ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ – ಐವನ್

ಮಂಗಳೂರು: ಮೃತ ಕೊವಿಡ್ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಮಾಡಲು ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ ಸಂಗತಿ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೊವಿಡ್ ಪೀಡಿತಗೊಳಗಾಗಿ ಮೃತರಾದಗ ನಿಯಮದ ಅನ್ವಯ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ವಿಫಲಗೊಂಡಿರುವುದು ಸ್ಪಷ್ಟವಾಗಿದ್ದು, ಈ ಬಗ್ಗೆ ಸ್ಪಷ್ಟ ನಿಲುವು ತಳೆಯದೇ ಇರಲು ತೊಂದರೆಗಳನ್ನು ಕೂಡಲೇ ವಿವರಿಸಬೇಕು. ಯಾವ ಉದ್ದೇಶಕ್ಕಾಗಿ ಅಂತ್ಯಕ್ರಿಯೆ ನಡೆಸಲು ತಡ ರಾತ್ರಿಯವರೆಗೆ ಹೋರಾಟ ನಡೆಸಿದ್ದಿರಿ? ಯಾವ ಕಾನೂನಿನ ತೊಡಕು ಇತ್ತು? ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು.

ಇದೊಂದು ರೀತಿಯಲ್ಲಿ ಮೃತರಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಮೃತ ದೇಹವನ್ನು ಸುಡಲು ಜಾಗವನ್ನು ನೀಡಲು ಯಾರ ಪರವಾನಿಗೆಬೇಕು, ಅಡ್ಡಿ ಪಡಿಸುವವರು ಯಾವ ಉದ್ದೇಶಕ್ಕಾಗಿ ರಾಜಕಾರಣ ಮಾಡುತ್ತಾರೆ ಕ್ರಮ ಕೈಗೊಳ್ಳಲು ವಿಫಲರಾದ ಜಿಲ್ಲಾಡಳಿತ ಯಾವ ರೀತಿಯ ಆಡಳಿತ ನಡೆಸುತ್ತಿದೆ ಎಂಬುದನ್ನು ಎತ್ತಿತೋರಿಸುತ್ತದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಪ್ರಶ್ನಿಸಿದ್ದಾರೆ.


Spread the love