ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 5 ಲಕ್ಷ ಮೊತ್ತದ ನೆರವು ಸಂಗ್ರಹ

Spread the love

ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 5 ಲಕ್ಷ ಮೊತ್ತದ ನೆರವು ಸಂಗ್ರಹ

ಉಡುಪಿ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಸ್ಥಳೀಯ ಸಹ್ರದಯಿ ದಾನಿಗಳಿಂದ ಉತ್ತರ ಕರ್ನಾಟಕ ಜಿಲ್ಲೆ ಹಾಗೂ ಕರಾವಳಿ ಭಾಗದಲ್ಲಿ ನೆರೆ ಹಾವಳಿಯಿಂದಾಗಿ ಆದ ನಿರಾಶ್ರಿತ ಬಡ ಕುಟುಂಬಗಳಿಗೆ ವಸ್ತು ರೂಪದಲ್ಲಿ- 6 ಸಾವಿರ ಕೆ.ಜಿ ಸೋನಾ ಮಸೂರಿ ಅಕ್ಕಿ ಹಾಗೂ ಇತರ ಸಾಮಗ್ರಿಗಳಾದ ದಿನಬಳಕೆಯ ವಸ್ತುಗಳು ಆದ ಬಟ್ಟೆ, ಬೇಳೆಕಾಳು, ಸೋಪು, ಕುಡಿಯುವ ನೀರು, ಸ್ಯಾನಿಟರಿ ಪ್ಯಾಡ್, ಪೇಸ್ಟ್, ಮೇಣದ ಬತ್ತಿಗಳು, ಬಿಸ್ಕತ್ತುಗಳು, ಊಟದ ತಟ್ಟೆ, ಹಾಸಿಗೆ ಮತ್ತು ಚಾಪೆ, ಟಾರ್ಪಲ್, ಛತ್ರಿ, ಚಪಾತಿ ಮತ್ತು ಪರೋಟ ಸರಿಸುಮಾರು 5 ಲಕ್ಷ ಮೊತ್ತದ ದಿನಬಳಕೆ ವಸ್ತುಗಳನ್ನು ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್ ಇವರ ನೇತೃತ್ವದಲ್ಲಿ ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಹಯೋಗದೊಂದಿಗೆ ಇಂದು ಬ್ಲಾಕ್ ಕಚೇರಿ ಇಂದಿರಾ ಭವನದಲ್ಲಿ ಬಡ ನಿರಾಶ್ರಿತ ಫಲಾನುಭವಿಗಳಿಗೆ ವಸ್ತುರೂಪದ ದೇಣಿಗೆಗಳನ್ನು ಕೊಡುವ ಕಾರ್ಯಕ್ರಮಕ್ಕೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕುಂದಾಪುರ ಬ್ಲಾಕ್ ನ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಕೋಟ, ಉದ್ಯಮಿಗಳಾದ ದಿವಾಕರ್ ಶೆಟ್ಟಿ ಬೆಂಗಳೂರು, ರಾಜಾರಾಮ್ ಸಾಸ್ತಾನ, ರಮಾನಂದ ಶೆಟ್ಟಿ ಬಾರ್ಕೂರು, ಮೊಸಸ್ ರೋಡಿಗ್ರಸ್, ಐರೋಡಿ ಗ್ರಾಮ ಪಂಚಾಯಿ ಸದಸ್ಯರಾದ ಆನಂದ ಗಾಣಿಗ, ಫ್ಲೋರಿನಾ, ಸುರೇಶ್ ಶೆಟ್ಟಿ ಸಾಸ್ತಾನ, ಸಾಸ್ತಾನ ಸಿ.ಎ ಬ್ಯಾಂಕ್ ಡೈರೆಕ್ಟರ್ ಡೆರಿಕ್ ಡಿಸೋಜ ಸಾಸ್ತಾನ, ಮೀನಾಕ್ಷಿ, ಶಂಕರ ಬಂಗೇರ ಕೋಡಿ ಕನ್ಯಾಣ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಗಣೇಶ್ ಬಡಾಹೊಳಿ, ಸುರೇಶ ಶೆಟ್ಟಿ ಕಾವಡಿ, ಎಂ.ಎಸ್ ಸಂಜೀವ, ಸುರೇಶ್ ಅಡಿಗ, ಮೊಹಮ್ಮದ್ ಅಮೀರ್ ಮಧುವನ, ಶ್ರೀನಿವಾಸ್ ವಡ್ಡರ್ಸೆ, ಕೋಟಿ ಪೂಜಾರಿ, ಬಾಲಕೃಷ್ಣ ಪೂಜಾರಿ ಸಾಸ್ತಾನ, ಮಂಜುನಾಥ್ ಪೂಜಾರಿ, ರಮಾನಂದ ಶೆಟ್ಟಿ ಬಾರ್ಕೂರು, ಮಹಾಬಲ ಮಡಿವಾಳ, ಬಸವ ಪೂಜಾರಿ ಸಾಸ್ತಾನ, ಶ್ರೀನಿವಾಸ ಶೆಟ್ಟಿಗಾರ್, ರೇಖಾ ಸುವರ್ಣ, ಮಹೇಶ್ ಪೂಜಾರಿ ಕೋಡಿ ,ವಿನಯ ಯಡ್ತಾಡಿ, ರತ್ನಾಕರ ಶ್ರೀಯಾನ್ ಪಡುಕೆರೆ, ಕೃಷ್ಣ ಪಿ.ಎಂ, ಗೋಪಾಲ್ ಬಂಗೇರ, ದಿನೇಶ್ ಬಂಗೇರ ಗುಂಡ್ಮಿ, ಶೇಖರ್ ಪೂಜಾರಿ ತೆಕ್ಕಟ್ಟೆ, ಕೃಷ್ಣ ಪೂಜಾರಿ ಕುಂದಾಪುರ, ಇಶ್ಚಿತ್ ಶೆಟ್ಟಿ ಕುಂದಾಪುರ, ನಟರಾಜ್ ಹೊಳ್ಳ, ವೈ.ಬಿ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ ಚಂದ್ರ ಆಚಾರ್ ಕೋಟ ಸ್ವಾಗತಿಸಿ, ಗಣೇಶ್ ಕೆ. ನೆಲ್ಲಿಬೆಟ್ಟು ಧನ್ಯವಾದವಿತ್ತರು.


Spread the love