ಕೋಟ: ಸಾಲಿಗ್ರಾಮದಲ್ಲಿ ಅಪರಿಚಿತ ಕೊಳೆತ ಶವ ಪತ್ತೆ

Spread the love

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮೀನು ಮಾರುಕಟ್ಟೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ದಿಕ್ಕಿನಲ್ಲಿರುವ ತೆರೆದ ಬಾವಿಯೊಂದರಲ್ಲಿ ಬುಧವಾರದಂದು ಮುಂಜಾನೆ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಮೂರು ದಿನಗಳ ಹಿಂದೆ ಮಧ್ಯ ವಯಸ್ಸಿನ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಯನ್ನು ಗಮನಿಸದೆ ಬಿದ್ದಿರಬಹುದು ಶಂಕಿಸಲಾಗಿದೆ.

image008unidentified-body-saligrama20160504 image007unidentified-body-saligrama20160504 image004unidentified-body-saligrama20160504 image003unidentified-body-saligrama20160504 image002unidentified-body-saligrama20160504 image001unidentified-body-saligrama20160504

ಬುಧವಾರ ಬೆಳಿಗ್ಗೆ ಸಾಲಿಗ್ರಾಮ ಮೀನು ಮಾರುಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ ಟೈರ್ ರಿಸೋಲ್ ಅಂಗಡಿಯ ಬಳಿ, ಯಾವುದೇ ಕೆಲಸ ನಿಮಿತ್ತ ಬಂದವರೋರ್ವರು ಅಕಸ್ಮಿಕವಾಗಿ ಬಾವಿ ನೋಡಿದಾಗ ಗಂಡಸಿನ ಶವವೊಂದು ಮಕಾಡೆ ಮಲಗಿರುವುದನ್ನು ನೋಡಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಅಮೀನ್, ಅಚ್ಯುತ ಪೂಜಾರಿ ಮೊದಲಾದವರು ಆಗಮಿಸಿ ನೋಡಿ, ಕೋಟ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಸರಿಯಾದ ಆವರಣವಿಲ್ಲದೇ ನೀರು ತುಂಬುವ ಸಂಪಿನಂತೆ ಕಾಣುವ ಬಾವಿಯೊಳಗೆ ಇಳಿಯಲು ಅನುಭವಿಗಳು ಬಂದ ಬಳಿಕ ಕೋಟ ಪೊಲೀಸ್ ಠಾಣಾಧಿಕಾರಿ ಕಬ್ಬಾಳ್‍ರಾಜ್ ಸಮ್ಮುಖದಲ್ಲಿ ಹಗ್ಗ ಹಾಕಿ ಶವವನ್ನು ಮೇಲೆ ತೆಗೆಯಲಾಗಿದೆ.
ಶವವು ಸುಮಾರು 45 ವರ್ಷದ ಗಂಡಿಸಿನದ್ದಾಗಿದ್ದು, ಲುಂಗಿ ಶರ್ಟ್ ಧರಿಸಿದ್ದು, ಎರಡು ಮೂರು ದಿನಗಳ ಕಾಲ ಸ್ವಲ್ಪ ನೀರಿರುವ ಬಾವಿಯಲ್ಲಿ ಇದ್ದ ಕಾರಣ ಗುರುತಿಸಲಾಗದ ಸ್ಥಿತಿಗೆ ತಲುಪಿದೆ. ಕೋಟ ಪೊಲೀಸ್ ಸಿಬ್ಬಂದಿಗಳು ಮಹಜರ್ ಮಾಡಿದ ಬಳಿಕ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಸ ಸಾಗಿಸುವ ವಾಹನದ ಮೂಲಕ ಶವವನ್ನು ಬ್ರಹ್ಮಾವರ ಶೈತ್ಯಾಗಾರಕ್ಕೆ ಕೊಂಡೊಯ್ಯಲಾಯಿತು. ಮೇಲ್ನೋಟಕ್ಕೆ ಆಕಸ್ಮಿಕವಾಗಿ ರಾತ್ರಿ ವೇಳೆ ತಿಳಿಯದೆ ಬಾವಿಗೆ ಬಿದ್ದಂತೆ ಕಾಣುತ್ತಿದ್ದು, ಕೋಟ ಪೊಲೀಸ್‍ರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.


Spread the love