ಕೋವಿಡ್ ನಿಯಂತ್ರಣಕ್ಕೆ ನಿಯಮಗಳನ್ನು ಪಾಲಿಸಿ : ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯಲ್ಲಿಕೋವಿಡ್ 19 (ಕೊರೋನ ವೈರಾಣು ಕಾಯಿಲೆ 2019 )ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಹೇರುವುದು ಮತ್ತು ಕಂಟೈನ್ ಮೆಂಟ್ ಹೊರವಲಯಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಅವಶ್ಯಕವೆಂದು ಕಂಡುಬಂದಿದ್ದು ಅದರಂತೆ ಉಡುಪಿ ಜಿಲ್ಲೆಯಾದ್ಯಂತ ದಿನಾಂಕ 22.07.2020 ರಿಂದ ಅನ್ವಯವಾಗುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶಗಳನ್ನು ಹೊರಡಿಸಿದ್ದಾರೆ.
ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಇರುತ್ತದೆ.
ವೈದ್ಯಕೀಯತುರ್ತು ಸೇವೆಗಳು ಮತ್ತು ಅವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಳನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಇವುಗಳ ಹೊರತು ಕಂಟೈನ್ ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.
ಕಂಟೈನ್ ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಹೊರತು ಪಡಿಸಿ ಎಲ್ಲಾ ಚಟುವಟಿಕೆಗಳನ್ನು ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಲ ಕಾಲಕ್ಕೆ ಹೊರಡಿಸಿದ ,ಸೂಚನೆಗಳು ಮತ್ತು ಕಾರ್ಯಾಚರಣೆಯ ಕಾರ್ಯ ವಿದಾನಗಳ ಷರತ್ತುಗಳೊಂದಿಗೆ ನಡೆಸಲು ಅನುಮತಿಸಲಾಗಿದೆ.
ಮುಂದಿನ ಭಾನುವಾರಗಳು ಅಂದರೆ ದಿನಾಂಕ 31.07.2020 ರವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣ ದಿನದ ಲಾಕ್ಡೌನ್ ಇರತಕ್ಕದ್ದು. ಅದರೆ ಅಗತ್ಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಭಂಧವಿರುವುದಿಲ್ಲ. ಪೆಟ್ರೋಲ್ ಪಂಪ್/ಮೆಡಿಕಲ್ /ಕ್ಲಿನಿಕಲ್ ಲ್ಯಾಬ್ /ಆಸ್ವತ್ರೆ /ಹಾಲು /ದಿನಪತ್ರಿಕೆ ಮಾರಾಟಕ್ಕೆ ನಿರ್ಬಂಧವಿರುವುದಿಲ್ಲ. ಹೊಟೇಲ್ ಗಳಿಂದ ಪಾರ್ಸೆಲ್ಗಳಿಗೆ, ಪುಡ್ ಡೆಲಿವರಿಗೆ ಅವಕಾಶವಿದೆ.
ದಿನಾಂಕ 15.07.2020ರ ಸಂಜೆ 8.00 ರಿಂದ 29.07.2020 ರ ವರೆಗೆ 14 ದಿನಗಳವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗಿದ್ದು ,ಅದನ್ನು ಈಗ ತೆರವುಗೊಳಿಸಲಾಗಿದೆ. ಆದರೆ ಗಡಿಯಲ್ಲಿ ಚೆಕ್ ಪೋಸ್ಟ್ ಗಳು ಮುಂದುವರಿಯಲಿದ್ದು ಅನಗತ್ಯವಾಗಿ ಜಿಲ್ಲೆಗೆ ಬರುವವರಿಗೆ ಅವಕಾಶ ಇರುವುದಿಲ್ಲ. ಅಗತ್ಯ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರು ಈ ಬಗ್ಗೆ ಅಗತ್ಯ ದಾಖಲೆಗಳನ್ನು ಇರಿಸಿಕೊಂಡು ಅದನ್ನು ಚೆಕ್ ಪೋಸ್ಟ್ಗಳಲ್ಲಿ ಪರಿಶೀಲನೆಗೆ ಒದಗಿಸಬೇಕು. ಸಾರ್ವಜನಿಕ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು. ಮತ್ತು ಎಲ್ಲಾ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು. ಉಲ್ಲಂಘನೆಗಾಗಿ ನಿಗದಿತ ಅಧಿಕಾರಿಗಳು ನಿಗದಿಪಡಿಸಿದ ದಂಡವನ್ನು ವಿಧಿಸುವುದು. ಕಾನೂನುಕ್ರಮ ವಹಿಸುವುದು.
ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು ,ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳ ಗಳಲ್ಲಿ ಉಗಿಯುದನ್ನು ನಿರ್ಬಂಧಿಸಿದೆ. ಹಾಗೂ ಇದರ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡವನ್ನು ವಿಧಿಸುವುದು.
ಉಲ್ಲೇಖ(4) ರ ಸರ್ಕಾರಿ ಆದೇಶದಂತೆ ಅನ್ ಲಾಕ್ -2.0 ಮಾರ್ಗಸೂಚಿಗಳಿಗೆ ಮಾರ್ಪಾಡು ಮಾಡಲಾಗಿದ್ದು ಅದರಂತೆ ಜಿಲ್ಲೆಯಲ್ಲಿ ರಾತ್ರಿ ಕಪ್ರ್ಯೂ ರಾತ್ರಿ 9.00 ಘಂಟೆಯಿಂದ ಬೆಳಿಗ್ಗÉ 5.00 ಘಂಟೆಯವರಗೆ ಜಾರಿಯಲ್ಲಿರುತ್ತದೆ. ಹಾಗೂ ಭಾನುವಾರದ ಲಾಕ್ಡೌನ್ ಪ್ರಸ್ತುತ ಚಾಲ್ತಿಯಲ್ಲಿರುವಂತೆ ಪ್ರತಿ ಭಾನುವಾರ ಲಾಕ್ಡೌನ್ ಮುಂದುವರಿಯಲಿದೆ. ಉಳಿದಂತೆ ಉಲ್ಲೇಖ(5) ರ ನಡವಳಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ
ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಆisಚಿsಣeಡಿ ಒಚಿಟಿಚಿgemeಟಿಣ ಂಛಿಣ 2005 , ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತುIPಅ ಸೆಕ್ಷನ್ 188 ಪ್ರಕಾರಕ್ರಮ ಕೈಗೊಳ್ಳಲಾಗುವುದು.ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.