ಕೋವಿಡ್ ಸಮಯದ ವಿದ್ಯುತ್ ಬಿಲ್ನ್ನು ಮನ್ನಾ ಮಾಡಲು ಕಾಂಗ್ರೆಸ್ ಆಗ್ರಹ – ಪಿ.ವಿ.ಮೋಹನ್

Spread the love

ಕೋವಿಡ್ ಸಮಯದ ವಿದ್ಯುತ್ ಬಿಲ್ನ್ನು ಮನ್ನಾ ಮಾಡಲು ಕಾಂಗ್ರೆಸ್ ಆಗ್ರಹ – ಪಿ.ವಿ.ಮೋಹನ್

ಮಂಗಳೂರು: ಕೊವಿಡ್ ಸಂಬಂದಿಸಿ, ಈ ಸಮಯದಲ್ಲಿ ಸಂಕಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ನೆರವನ್ನು ಹೊಸ ಪ್ಯಾಕೆಜ್ ನಲ್ಲಿ ನಿಗದಿಪಡಿಸಲಾಗಿದ್ದು, ಕೇಂದ್ರದ ಈ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ಮೊನ್ನೆ ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ. ಗ್ರಾಹಕರ ಬವಣೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದೆ. ಗ್ರಾಹಕರ ಹಿತ ದೃಷ್ಟಿಯನ್ನು ಯಿಟ್ಟುಕೊಂಡು ಅವರ ಆರ್ಥಿಕ ವ್ಯವಸ್ಥೆ ಯಲ್ಲಿ ಚೈತನ್ಯ ತರಲು ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಜೀವ ತುಂಬುವ ಪ್ರಯತ್ನ ವನ್ನು ಕೇಂದ್ರ ಸರ್ಕಾರವು ಮಾಡುತ್ತಿದೆ.. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿ ಲಾಕ್ ಡೌನ್ ನ ಕಂಗೆಟ್ಟ ಸಮಯದ ವಿದ್ಯುತ್ ಬಿಲ್ಲ್ ಸಂಪೂರ್ಣ ಮನ್ನಾ ಮಾಡಿ ಗ್ರಾಹಕರನ್ನು ಸಾಲದ ಹೊರೆಯಿಂದ ಮುಕ್ತ ಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷವು ಆಗ್ರಹ ಪಡಿಸುತ್ತದೆ.

ಕೇಂದ್ರ ಸರ್ಕಾರದ ಗ್ರಾಹಕರಿಗಾಗಿ ಮೀಸಲಿಟ್ಟ ಸೌಲಭ್ಯಗಳು ಕಾರ್ಯರೂಪದಲ್ಲಿ ಬರುವ ತನಕ ವಿದ್ಯುತ್ ಸರಬರಾಜು ಸಂಸ್ಥೆಗಳು ಗ್ರಾಹಕರಿಂದ ವಿದ್ಯುತ್ ಬಿಲ್ಲ್ ಅನ್ನು ವಸೂಲ್ ಮಾಡುವ ಯಾವುದೇ ರೀತಿಯ ಕ್ರಮವನ್ನು ಕೂಡಲೇ ನಿಲ್ಲಿಸಲು ಸೂಚನೆ ನೀಡಬೇಕೆಂದು ಸರ್ಕಾರ ವನ್ನು ಕಾಂಗ್ರೆಸ್ ಪಕ್ಷವು ಒತ್ತಾಯ ಪಡಿಸುತ್ತದೆ.

ಇವತ್ತು ಗ್ರಾಹಕರು ತೀರಾ ಕಷ್ಟ ದಲ್ಲಿ ಇದ್ದಾರೆ. ದಾರಿ ಕಾಣದ ಸ್ಥಿತಿಯಲ್ಲಿ ಇದ್ದಾರೆ. 50 ದಿನಗಳ ಕಾಲ ಕೆಲಸ ಇಲ್ಲದೆ, ಉದ್ಯೋಗ ಇಲ್ಲದೆ _ ವ್ಯಾಪಾರ ವಹಿವಾಟು ನಡೆಸದೆ ಮನೆಯಲ್ಲಿ ಕುಳಿತು ಇದ್ದರು.ಮನೆಯಲ್ಲಿ ಎಲ್ಲರೂ ಸೇರಿ ಬೇಸಿಗೆಯ ಸುಡು ಬಿಸಿಲನಲ್ಲಿ ಕಾಲ ಕಳೆದರು. ಇಡೀ ಸಮಾಜವೇ ಬಿಕ್ಕಟ್ಟಿನತ್ತು. ಇಂತಹ ಸಂದರ್ಭವನ್ನು ಜನರು ಕಂಡಿಲ್ಲದಿರುವಾಗ ಗ್ರಾಹಕರ ರಕ್ಷಣೆ ಮಾಡುವುದು ಪ್ರಜಾಪ್ರಭುತ್ವದ ಲ್ಲಿ ಸರ್ಕಾರದ ದೊಡ್ಡ ಮತ್ತು ಪ್ರಮುಖ ಹೊಣೆಗಾರಿಕೆಯಾಗಿದೆ. ಅದನ್ನು ಬಿಟ್ಟು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ( ಎಸ್ಕಾಂ) ಸಂಕಷ್ಟದ ಕಾಲದಲ್ಲಿಗ್ರಾಹಕರ ಹತ್ತಿರ ಸರಾಸರಿ ಬಳಕೆ ಅಧಾರದ ಮೇಲೆ ವಿದ್ಯುತ್ ಬಿಲ್ಲ್ ಅನ್ನು ವಸೂಲಿ ಮಾಡಲು ಪ್ರಯತ್ನ ಮಾಡುವುದು , ಶಿಕ್ಷಣ ಸಂಸ್ಥೆಗಳು, ಸಣ್ಣ ಕೈಗಾರಿಕೆಗಳು, ಸಣ್ಣಉದ್ದಿಮೆ ದಾರರು ಲಾಕ್ ಡೌನ್ ಸಮಯದಲ್ಲಿ ಸಂಪೂರ್ಣ ವಾಗಿ ಮುಚ್ಚಿಕೊಂಡಿರುವಾಗ ಅದಕ್ಕೂ ಸರಾಸರಿ ಅಧಾರದ ಮೇಲೆ ಬಿಲ್ಲ್ ಮಾಡುವ ಕೃತ್ಯವು ಅವೈಜ್ಞಾನಿಕ ಮತ್ತು ಅಮಾನುಷ ವಾದದು. ಪದ್ದತಿ. ಇದು ಗ್ರಾಹಕರ ಗಾಯದ ಮೇಲೆ ಬರೆ ಎಳೆಯುವ ಕ್ರಮ ವಾಗಿದೆ. ಈ ಸಂದರ್ಭದಲ್ಲಿ ಸರಕಾರವು ಮದ್ಯ ಪ್ರವೇಶ ಮಾಡುವುದನ್ನು ಬಿಟ್ಟು ಜಾಣ ಮೌನ ತೋರಿಸಿರುವುದು ಸರಕಾರದ ಇಬ್ಬಂದಿತನವಾಗಿದೆ.ಇದನ್ನು ಕಾಂಗ್ರೆಸ್ ಪಕ್ಷ ವು ಖಂಡಿಸುತ್ತದೆ.

ವಿದ್ಯುತ್ ದರವನ್ನು ಅನ್ನು ಸರಬರಾಜು ಸಂಸ್ಥೆಗಳು ಜನರ ಮೇಲೆ ಪ್ರತಿವರ್ಷ ಒಂದಲ್ಲ ಒಂದು ರೀತಿಯಲ್ಲಿ ಏರಿಸುತ್ತಾ ಬಂದಿದೆ. ರಾಜ್ಯದ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸಂಸ್ಥೆಗಳು ಜನರನ್ನು ಲೂಟಿ ಮಾಡುತ್ತಾಇವೆ. ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ಜತೆ, ಅದರ ಮಾಲೀಕರ ಜತೆ ಕೈ ಜೋಡಿಸಿದೆ. ಗ್ರಾಹಕರ ಹಿತರಕ್ಷಣೆಯನ್ನು ಸರ್ಕಾರವು ಮರೆತಿದೆ ಎಂಬ ಠಿeಡಿಛಿeಠಿಣioಟಿ ಸಾರ್ವಜನಿಕರ ನಡುವೆ ಇದೆ. ಜನರಿಗೆ ಕೋವಿಡ್ ಸಮಯದಲ್ಲಿ ಸಿಗಬೇಕಾದ ಆರ್ಥಿಕ ಪ್ಯಾಕೆಜ್ ನ ಸೌಲಭ್ಯಗಳನ್ನು ಲಭಿಸುವ ಗ್ಯಾರಂಟಿ ಏನಿದೆ? ಯಾರು ಇದನ್ನು ಮಾಡ ಬೇಕಾದವರು? ಇವತ್ತು

ಕರ್ನಾಟಕದ ವಿದ್ಯುತ್ ಸರಬರಾಜು ಸಂಸ್ಥೆಗಳು ಖಾಸಗಿ ವಿದ್ಯುತ್ ಪೂರೈಕೆ ಕಂಪೆನಿಗಳ ಜೇಬಿನಲ್ಲಿದೆ. ಈಗಾಗಲೇ 10,000 ಕೋಟಿ ರೂಪಾಯಿ ಗಿಂತ ಹೆಚ್ಚು ಮೊತ್ತವನ್ನು ವಿದ್ಯುತ್ ಸರಬರಾಜು ಸಂಸ್ಥೆಗಳು ಖಾಸಗಿ ವಿದ್ಯುತ್ ಶಕ್ತಿ ಉತ್ಪಾದನಾ ಘಟಕಗಳಿಗೆ ಕೊಡಲು ಬಾಕಿ ಇದೆ. ದೇಶದಲ್ಲಿಯೇ 92, 693 ಕೋಟಿ ರೂಪಾಯಿ ಯನ್ನು ದೇಶದ ವಿವಿಧ ವಿದ್ಯುತ್ ಸರಬರಾಜು ಸಂಸ್ಥೆಗಳು ಖಾಸಗಿ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರಗಳಿಗೆ ಕೊಡಲು ಬಾಕಿ ಇದೆ. ದೇಶದಲ್ಲಿ 40 ಅತೀ ದೊಡ್ಡ ವಿದ್ಯುತ್ ಶಕ್ತಿ ಉತ್ಪಾದನಾ ಘಟಕಗಳು ಖಾಸಗಿ ವಲಯದಲ್ಲಿ ಇವೆ. ಅಂಬಾನಿ, ಅದಾನಿ, ಜಿಂದಾಲ್, ಮಿತ್ತಲ್, ಟಾಟಾ ರಂತಹ ಘಟಾನುಘಟಿಗಳ ಬಾರಿ ಪವರ್ ಲಾಬಿ ಇದೆ. ಕರ್ನಾಟಕ ರಾಜ್ಯದಲ್ಲಿ ಅದಾನಿ ವಿದ್ಯುತ್ ಕಂಪೆನಿಯು ಸರ್ಕಾರವನ್ನು ಅಲುಗಾಡಿಸುವಷ್ಟು ದೈತ್ಯಾಕಾರದಲ್ಲಿ ಇದೀಗ ಬೆಳೆದಿದೆ. ಇಡೀ ದೇಶದಲ್ಲಿ ಖಾಸಗಿ ಕ್ಷೇತ್ರದಲ್ಲಿ ಅತೀ ಹೆಚ್ಚು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಏಕೈಕ ಕಂಪೆನಿ ಇದಾಗಿದೆ. 10,440 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಕರ್ನಾಟಕದಲ್ಲಿ ವಿದ್ಯುತ್ ಶಕ್ತಿ ಇಲಾಖೆ, ವಿದ್ಯುತ್ ಸರಬರಾಜು ಸಂಸ್ಥೆಗಳು ಎಲ್ಲವೂ ಖಾಸಗಿ ವಿದ್ಯುತ್ ಕಂಪೆನಿಗಳನ್ನು, ಅದರ ಮಾಲೀಕರ ಕೈಗಳನ್ನು ಗಟ್ಟಿ ಮಾಡುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದೆ ಹೊರತು ಗ್ರಾಹಕರಿಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡುತ್ತಾ ಇಲ್ಲ.

ಗ್ರಾಹಕರಿಗೆ ಯುನಿಟ್ ಗೆ 3.50 ರೂಪಾಯಿ ಯಿಂದ 4.50 ರೂಪಾಯಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯ ವಿದ್ದರೂ, ಕರ್ನಾಟಕದ ವಿದ್ಯುತ್ ಸರಬರಾಜು ಸಂಸ್ಥೆಗಳು ಯುನಿಟ್ ಗೆ 6 ರೂಪಾಯಿ ಯಿಂದ 7.80 ರೂಪಾಯಿ ವೆಚ್ಚದ ವಿದ್ಯುತ್ ನೀಡುವ ಮೂಲಕ ಗ್ರಾಹಕರನ್ನು ಶೋಷಣೆ ಮಾಡುತ್ತಿದೆ. ಮಧ್ಯಂತರ ಅವಧಿ ಖರೀದಿ ನೆಪದಲ್ಲಿ ಹೆಚ್ಚು ಬೆಲೆಗೆ ವಿದ್ಯುತ್ ಅನ್ನು ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಗಳಿಂದ ಖರೀದಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ವನ್ನು ಮಾಡುತ್ತಾ ಬಂದಿದೆ. ಈ ರೀತಿಯ ಭ್ರಷ್ಟಾಚಾರದಿಂದ ಯಾವಾಗಲೂ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ನಷ್ಟ ವನ್ನು ತೋರಿಸುತ್ತದೆ.

ದೆಹಲಿ ಸರ್ಕಾರ ವು 100 ಯುನಿಟ್ ತನಕ ವಿದ್ಯುತ್ತನ್ನು ಜನರಿಗೆ ಮುಕ್ತವಾಗಿ ಸರಬರಾಜು ಮಾಡುತ್ತದೆ. 200 ರಿಂದ 400 ಯುನಿಟ್ ತನಕ ಯುನಿಟ್ ಗೆ ರುಪಾಯಿ2.50 ಹಾಗೆ ದರವನ್ನು ನಿಗದಿ ಮಾಡಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಕರ್ನಾಟಕದಲ್ಲಿರುವ ಹಾಗೆ ದೊಡ್ಡ ಪ್ರಮಾಣದ ಆಣೆಕಟ್ಟುಗಳಾಗಲಿ, ಖಾಸಗಿ ವಿದ್ಯುತ್ ಶಕ್ತಿ ಉತ್ಪಾದನಾ ಘಟಕಗಳಾಗಲಿ ಇಲ್ಲ.ಆದರೂ ದೆಹಲಿ ಸರಕಾರಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಕೊಡಲು ಸಾದ್ಯವಾಗುತ್ತದಯಾದರೆ ನಮ್ಮ ರಾಜ್ಯ ಸರ್ಕಾರ ಯಾಕೆ ಸಾದ್ಯ ವಾಗುದಿಲ್ಲ? ನಮ್ಮ ನೆರೆಹೊರೆಯ ರಾಜ್ಯ ತಮಿಳುನಾಡಿನಲ್ಲಿ ವಿದ್ಯುತ್ ದರವು ನಮ್ಮ ರಾಜ್ಯಕ್ಕಿಂತ ಕಡಿಮೆ ಇದೆ. ಅಲ್ಲಿ ನೀರಿಗಾಗಿ ಜನರು ಪರದಾಡುತ್ತಾರೆ. ಅಪರೂಪವಾಗಿ ಮಳೆಯನ್ನು ಕಾಣುವಂತಹ ಪರಿಸ್ಥಿತಿಯಲ್ಲಿ ಕೂಡ ಜನರ ಅನುಕೂಲತೆ ನೋಡುತ್ತದೆ. ರಾಜ್ಯದ ಸ್ವಾಮ್ಯದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದಿದರೂ 30 ರಿಂದ 40 ಶೇಕಡಾ ದಷ್ಟು ಸಾಮರ್ಥ್ಯ ದಿಂದ ಮಾತ್ರ ಕೆಲಸ ಮಾಡುತ್ತದೆ. ಇದು ಯಾಕೆ? ಆದುದರಿಂದ ಸರ್ಕಾರದ ಮತ್ತು ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಗಳ ನಡುವೆ ಇರುವ ಖರೀದಿ ಒಪ್ಪಂದವನ್ನು ಬಹಿರಂಗ ಗೊಳಿಸಬೇಕು. ವಿದ್ಯುತ್ ಉತ್ಪಾದನೆ ಬೇಕಾದ ಕಲ್ಲಿದ್ದಲು, ಅದರ ಖರೀದಿ ದರ, ಗುಣಮಟ್ಟ, ದರವನ್ನು ನಿಗದಿಪಡಿಸಿದ ಕ್ರಮ, ವಿದ್ಯುತ್ ಸರಬರಾಜು ಮಾಡುವ ಉಪಕರಣಗಳ ವೆಚ್ಚ ಇತ್ಯಾದಿ ಗಳನ್ನು ಒಳಗೊಂಡ ಸಮಗ್ರವಾದ ಶ್ವೇತ ಪತ್ರವನ್ನು ಸರ್ಕಾರವು ತರಬೇಕೆಂದು ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ.

ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ನಷ್ಟ ಅನುಭವಿಸಿದೆ. ಅವುಗಳಿಗೆ ವಿದ್ಯುತ್ ಸರಬರಾಜು ಸಂಸ್ಥೆಗಳು ಹಣವನ್ನು ಕೊಡಲು ಬಾಕಿ ಇದೆ ಅಂತ ಗ್ರಾಹಕರಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯಗಳನ್ನು ನೀಡಿ ಅವರನ್ನು ಲಾಕ್ ಡೌನ್ ಸಮಯದಲ್ಲಿ ಆದ ಸಾಲವನ್ನು ಮನ್ನಾ ಮಾಡದೆ ಹೋದರೆ ದ್ರೋಹ ಬಗೆದಂತಾಗುತ್ತದೆ. ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಗಳು ಹೇಳುವ ನಷ್ಟ ವು ಕಾಲ್ಪನಿಕವಾದ ದು.ಟಿoಣioಟಿಚಿಟ. ಕಂಪೆನಿಗಳು ಕಲ್ಲಿದ್ದಲನ್ನು ಆಮದು ಮಾಡುದರಿಂದ ಹಿಡಿದು ವಿದ್ಯುತ್ ಅನ್ನು ಮಾರಾಟ ಮಾಡುವ ದರದಲ್ಲಿ ಕುಟಿಲ ತಂತ್ರದ ಮೂಲಕ ಎಲ್ಲಾ ರೀತಿಯ ಲಾಭವನ್ನು ಮೊದಲೇ ಪಡೆದಿರುತ್ತದೆ. ಇವತ್ತು ಗ್ರಾಹಕರು ಕಂಗಾಲಾಗಿದ್ದಾರೆ. ಅವರ ಯೋಗಕ್ಷೇಮ ಕ್ಕೆ ಆದ್ಯತೆ ನೀಡಿ, ಅವರನ್ನು ರಕ್ಷಿಸುವ ಬದಲು ವಿದ್ಯುತ್ ಉತ್ಪಾದಕರ ಸಾಲವನ್ನು ತೀರಿಸಲು ಪ್ರಯತ್ನಿಸಿದರೆ ಅದನ್ನು ತೀವ್ರವಾಗಿ ವಿರೋಧಿಸುತ್ತೆವೆ .


Spread the love