ಕ್ಯಾನ್ಸರ್ ನಿಂದ ಉಳಿದುಕೊಂಡವರ ದಿನ ದಂದು 20 ವರ್ಷ ವಯಸ್ಸಿನ ಧೈರ್ಯಶೈಲಿ ಯುವಕನನ್ನು ಸನ್ಮಾನಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ

Spread the love

 ಕ್ಯಾನ್ಸರ್ ನಿಂದ ಉಳಿದುಕೊಂಡವರ ದಿನ ದಂದು 20 ವರ್ಷ ವಯಸ್ಸಿನ ಧೈರ್ಯಶೈಲಿ ಯುವಕನನ್ನು ಸನ್ಮಾನಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ

ಪತ್ರಕರ್ತನಾಗುವ ಆಕಾಂಕ್ಷೆ ಹೊಂದಿರುವ 20 ವರ್ಷ ವಯಸ್ಸಿನ ಯುವಕನೊಬ್ಬ ಅಪರೂಪದ ರೀತಿಯ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಿದ ಸ್ಫೂರ್ತಿದಾಯಕ ಕಥೆ

ಬೆಂಗಳೂರು: ಭಾರತದ ಮುಂಚೂಣಿಯ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಕ್ಯಾನ್ಸರ್‍ನಿಂದ ಉಳಿದುಕೊಂಡವರ ದಿನ(ಕ್ಯಾನ್ಸರ್ ಸರ್ವೈವರ್‍ಶಿಪ್ ಡೇ)ದಂದು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಸಿದ 20 ವರ್ಷ ವಯಸ್ಸಿನ ಧೈರ್ಯಶಾಲಿ ಯುವಕನನ್ನು ಸನ್ಮಾನಿಸಿದೆ. ಈ ದಿನದಂದು ಮಣಿಪಾಲ್ ಆಸ್ಪತ್ರೆ ಇಂತಹ ಯುವ ಹೋರಾಟಗಾರರ ಶೌರ್ಯ ಮತ್ತು ಪ್ರೇರಣೆಗಳನ್ನು ಶ್ಲಾಘಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವ ಈ ಯುವಕ ಭವಿಷ್ಯದಲ್ಲಿ ಪತ್ರಕರ್ತನಾಗುವ ಆಶಯ ಹೊಂದಿದ್ದು, ತೀವ್ರ ರೀತಿಯ ಧೈರ್ಯ ಮತ್ತು ದೃಢ ನಿಶ್ಚಯವನ್ನು ಪ್ರದರ್ಶಿಸಿ, ಮಾನವರ ಸಡಿಲತೆ ಮತ್ತು ಅದಮ್ಯ ಚೇತನದ ಶಕ್ತಿ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಗೆಲ್ಲಲು ಜನರಿಗೆ ನೆರವಾಗಬಹುದು ಎಂದು ನಿರೂಪಿಸಿದ್ದಾರೆ.

20 ವರ್ಷ ವಯಸ್ಸಿನ ಅನಿರುದ್ಧ್ ಅತ್ಯಂತ ಅಪರೂಪದ ರೀತಿಯ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದು, ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 2019ರಲ್ಲಿ ಅವರಿಗೆ ಶ್ವಾಸಕೋಶದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿರುದ್ಧ್ ಒಣಕೆಮ್ಮಿನ ದೂರಿನೊಂದಿಗೆ ಮುಂದಿನ ವೈದ್ಯಕೀಯ ತನಿಖೆಗಳಿಗಾಗಿ ಆಸ್ಪತ್ರೆಗೆ ಬಂದಿದ್ದರು. ಮುಂದಿನ ತನಿಖೆಗಳಲ್ಲಿ ಆತನ ಶ್ವಾಸಕೋಶದಲ್ಲಿ ಗಡ್ಡೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಜೊತೆಗೆ ಅವರು ಇತ್ತೀಚೆಗೆ 9ಕಿಲೋ ತೂಕ ಕಳೆದುಕೊಂಡಿದ್ದರಲ್ಲದೆ, ತೀವ್ರ ರೀತಿಯ ಸುಸ್ತು ಅನುಭವಿಸಿದ್ದರು. ಅವರಿಗೆ ಶ್ವಾಸಕೋಶದಲ್ಲಿ ಕ್ಯಾನ್ಸರ್ ಇರುವುದನ್ನು ಈ ಲಕ್ಷಣಗಳು ಸೂಚಿಸಿದ್ದವು. ಅವರಿಗೆ ಪ್ಲ್ಯೂರೊ-ಪಲ್ಮನರಿ ಬ್ಲಾಸ್ಟೋಮಾ ಎಂಬ ರೀತಿಯ ಕ್ಯಾನ್ಸರ್ ಇದೆ ಎಂದು ರೋಗನಿರ್ಣಯ ಕೈಗೊಳ್ಳಲಾಗಿತ್ತು. ಇದು ಅತ್ಯಂತ ವಿರಳವಾದ ಕ್ಯಾನ್ಸರ್ ಆಗಿದ್ದು, ಎದೆಭಾಗದಲ್ಲಿ ನಿರ್ದಿಷ್ಟವಾಗಿ ಶ್ವಾಸಕೋಶಗಳಲ್ಲಿ ಅಥವಾ ಶ್ವಾಸಕೋಶಗಳ ಹೊರಪದರದಲ್ಲಿ ಕಂಡುಬರುತ್ತದೆ. ಮಣಿಪಾಲ್ ಆಸ್ಪತ್ರೆಯ ವೈದ್ಯರು ಅನಿರುದ್ಧ್‍ಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕೈಗೊಂಡಿದ್ದರು.

`ಯಾವುದೇ ಕ್ಯಾನ್ಸರ್ ಮನುಷ್ಯನ ಮನಃಶಕ್ತಿಯನ್ನು ಹಾಗೂ ಉಳಿದುಕೊಳ್ಳಬೇಕೆನ್ನುವ ಶಕ್ತಿಯನ್ನು ಮುರಿಯುವಷ್ಟು ದೃಢವಾಗಿರುವುದಿಲ್ಲ. ಕ್ಯಾನ್ಸರ್ ಅನ್ನು ಸೋಲಿಸುವಲ್ಲಿ ಅನಿರುದ್ಧ್‍ಗೆ ಅವರ ಸಕಾರಾತ್ಮಕ ಮನೋಭಾವ ನೆರವಾಗಿದೆ. ಯುವ ಅನಿರುದ್ಧ್‍ನ ಸಕಾರಾತ್ಮಕ ಚೈತನ್ಯ ಮತ್ತು ಇಚ್ಛಾಶಕ್ತಿ ಜೊತೆಗೆ ಕ್ಯಾನ್ಸರ್‍ನಿಂದ ಉಳಿದುಕೊಂಡವರ ಸಮೂಹದ(ಕ್ಯಾನ್ಸರ್ ಸರ್ವೈವರ್ಸ್ ಗ್ರೂಪ್) ಬೆಂಬಲ ಹಾಗೂ ಕ್ಯಾನ್ಸರ್ ರೋಗ ತಜ್ಞರ ತಂಡ ಪೂರೈಸಿದ ಚಿಕಿತ್ಸೆಗಳು ಕ್ಯಾನ್ಸರ್ ರೋಗವನ್ನು ಸೋಲಿಸುವಲ್ಲಿ ಅವರಿಗೆ ನೆರವಾಗಿದ್ದವು. ಅವರು ಖಂಡಿತವಾಗಿ ವಿಜೇತರಾಗಿ ಹೊರಹೊಮ್ಮುವುದಲ್ಲದೆ, ಶೀಘ್ರದಲ್ಲಿ ಕ್ಯಾನ್ಸರ್ ಪದವೀಧರರಾಗುತ್ತಾರೆ’’ ಎಂದು ಮಣಿಪಾಲ್ ಆಸ್ಪತ್ರೆಯ ಮಣಿಪಾಲ್ ಕಾಂಪ್ರೆಹೆನ್ಸಿವ್ ಕ್ಯಾನ್ಸರ್ ಕೇರ್‍ನ ಚೇರ್ಮನ್ ಡಾ. ಸೋಮಶೇಖರ್ ಹೇಳಿದರು.

ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಕ್ಯಾನ್ಸರ್ ರೋಗತಜ್ಞ ಡಾ. ಅಮಿತ್ ರೌಥನ್ ಅವರು ಮಾತನಾಡಿ, “ಈ ರೀತಿಯ ಕ್ಯಾನ್ಸರ್ ಅತ್ಯಂತ ಅಪರೂಪದ್ದಾಗಿದೆ. ಇದಕ್ಕೆ ಆಕ್ರಮಣಕಾರಿ ರೀತಿಯಲ್ಲಿ ಕಿಮೋಥೆರಪಿ ಚಿಕಿತ್ಸೆಯನ್ನು ಹಲವಾರು ಆವರ್ತನಗಳಲ್ಲಿ ನೀಡುವ ಅಗತ್ಯವಿರುತ್ತದೆ. ಅವರು ಈ ಆವರ್ತನಗಳನ್ನು ಅತ್ಯಂತ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದು, ತಮ್ಮ ಮಧ್ಯಂತರ ಸ್ಕ್ಯಾನ್‍ಗಳಲ್ಲಿ ಸುಧಾರಣೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಅವರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವ ಭರವಸೆಯನ್ನು ನಾವು ಹೊಂದಿದ್ದೇವೆ. ಜೊತೆಗೆ ಅದೇ ಸಕಾರಾತ್ಮಕ ಮತ್ತು ಹರ್ಷಚಿತ್ತದೊಂದಿಗೆ ಜೀವನದಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ’’ ಎಂದರು.

ತಮ್ಮ ಅಷ್ಟೇನೂ ಸುಲಭವಲ್ಲದ ಅನುಭವವನ್ನು ಹಂಚಿಕೊಂಡು ಅನಿರುದ್ಧ್ ಅವರು ಮಾತನಾಡಿ, “ನನಗೆ ಕ್ಯಾನ್ಸರ್ ಇದೆ ಎಂದು ಮೊದಲು ತಿಳಿದು ಬಂದಾಗ ನನಗೇನಾಗಿದೆ ಎಂದು ಗ್ರಹಿಸಲು ಸಾಧ್ಯವಾಗಲಿಲ್ಲ. ಅದು ನನಗೆ ಅರ್ಥವಾಗಲು ಕೆಲವು ಸಮಯ ಹಿಡಿಯಿತು. ಈ ಸಂದರ್ಭದಲ್ಲಿ ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರು ಬಹಳ ಬೆಂಬಲ ನೀಡಿದ್ದರು. ಜೊತೆಗೆ ಮಣಿಪಾಲ್ ಆಸ್ಪತ್ರೆಯಲ್ಲಿನ ಸಲಹಾ ತಜ್ಞರು ಮತ್ತು ವೈದ್ಯರು ಸತತವಾಗಿ ನನಗೆ ಎಲ್ಲಾ ಮಾಹಿತಿ ನೀಡುವ ಖಾತ್ರಿ ಮಾಡಿಕೊಂಡಿದ್ದರಲ್ಲದೆ, ಈ ಅವಧಿಯಲ್ಲಿ ಸಂಪೂರ್ಣ ಬೆಂಬಲ ನೀಡಿದ್ದರು’’ ಎಂದರು.

`ಕಿಮೋಥೆರಪಿ ಚಿಕಿತ್ಸೆ ಪಡೆಯುವಾಗ ನನ್ನ ಭಾವನೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿತ್ತು. ನಾನು ಕಾಲೇಜಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ನನ್ನನ್ನು ನಾನು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರೇರಣೆ ತುಂಬಿಕೊಂಡು ಮುಂದುವರಿಯುತ್ತಾ ಕ್ಯಾನ್ಸರ್ ವಿರುದ್ಧ ಹೋರಾಡಬೇಕಾಗಿತ್ತು. ನಾನು ನಾಲ್ಕು ಕಿಮೋಥೆರಪಿ ಚಿಕಿತ್ಸಾ ಆವರ್ತನಗಳನ್ನು ಪೂರ್ಣಗೊಳಿಸಿದ್ದೇನೆ. ಇನ್ನು ಕೆಲವು ಆವರ್ತನಗಳು ಉಳಿದಿವೆ. ಈ ಅವಧಿಯಲ್ಲಿ ನಾನು ಸಕಾರಾತ್ಮಕವಾಗಿ ಇರುವಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಬೃಹತ್ ಪಾತ್ರವನ್ನು ವಹಿಸಿದ್ದಾರೆ ಎಂದು ನಾನು ನಂಬಿದ್ದೇನೆ’’ ಎಂದರು.

ಮಣಿಪಾಲ್ ಆಸ್ಪತ್ರೆ ಕುರಿತು :-
ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಆದ್ಯಪ್ರವರ್ತಕರಾದ ಮಣಿಪಾಲ್ ಆಸ್ಪತ್ರೆ ಭಾರತದಲ್ಲಿ ಅತ್ಯಂತ ದೊಡ್ಡದಾದ ಆಸ್ಪತ್ರೆಗಳ ಜಾಲವಾಗಿದ್ದು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕೈಗೆಟುಕುವ ರೀತಿಯಲ್ಲಿ ಮೂರನೇ ಉನ್ನತ ಹಂತದ ಬಹುವಿಶೇಷತೆಯ ಆರೋಗ್ಯ ಶುಶ್ರೂಷೆ ಚೌಕಟ್ಟನ್ನು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು ತನ್ನ ಎಲ್ಲಾ ಬಹುವಿಶೇಷತೆಯ ಪೂರೈಕೆ ಶ್ರೇಣಿಯ ಮೂಲಕ ಈ ಕ್ರಮವನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ಈ ಸೇವೆಯನ್ನು ಗೃಹ ಆರೈಕೆಗೆ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಮುಖ ನಾಲ್ಕನೇ ಉನ್ನತ ಹಂತದ ಆರೈಕೆಯ ಸೌಲಭ್ಯವನ್ನು ಸಂಸ್ಥೆ ಹೊಂದಿದ್ದು 7 ಮೂರನೇ ಉನ್ನತ ಹಂತದ ಆರೈಕೆಯ, 5 ಎರಡನೇ ಹಂತದ ಆರೈಕೆಯ ಮತ್ತು 2 ಪ್ರಾಥಮಿಕ ಹಂತದ ಆರೈಕೆಯ ಕ್ಲಿನಿಕ್‍ಗಳನ್ನು ಭಾರತ ಮತ್ತು ವಿದೇಶದಾದ್ಯಂತ ಸಂಸ್ಥೆ ಹೊಂದಿದ್ದು ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿ 15 ಆಸ್ಪತ್ರೆಗಳಲ್ಲಿ 5,900ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಣಿಪಾಲ್ ಆಸ್ಪತ್ರೆ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆಯುವ ಆರೈಕೆಯನ್ನು ವಿಶ್ವದ ಎಲ್ಲೆಡೆಯ ರೋಗಿಗಳಿಗೆ ನೀಡುತ್ತಿದೆ. ನೈಜೀರಿಯಾದ ಲಾಗೋಸ್‍ನಲ್ಲಿ ಮಣಿಪಾಲ್ ಆಸ್ಪತ್ರೆ ಒಂದು ಡೇ ಕೇರ್ ಕ್ಲಿನಿಕ್ ಹೊಂದಿದೆ. ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಲ್ಲಿ ನೀತಿಯ ಮಟ್ಟಕ್ಕಾಗಿ ಎಎಎಚ್‍ಆರ್‍ಪಿಪಿ ಸಂಸ್ಥೆ ಮಾನ್ಯತೆ ಪಡೆದ ಪ್ರಥಮ ಆಸ್ಪತ್ರೆ ಎಂಬ ಗೌರವ ಮಣಿಪಾಲ್ ಆಸ್ಪತ್ರೆಯದ್ದಾಗಿದೆ. ಸಂಸ್ಥೆ ಎನ್‍ಎಬಿಎಲ್, ಎನ್‍ಎಬಿಎಚ್ ಮತ್ತು ಐಎಸ್‍ಒ ಪ್ರಾಮಾಣೀಕರಣವನ್ನೂ ಹೊಂದಿದೆ. ಮಣಿಪಾಲ್ ಆಸ್ಪತ್ರೆ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಕಂಪನಿಯಾಗಿದೆ. ಗ್ರಾಹಕ ಸಮೀಕ್ಷೆಯ ಪ್ರಕಾರ ರೋಗಿಗಳಿಂದ ಅತ್ಯಂತ ಹೆಚ್ಚಿನ ಶಿಫಾರಸು ಪಡೆಯುತ್ತಿರುವ ಆಸ್ಪತ್ರೆಯೂ ಆಗಿದೆ.


Spread the love