‘ಕ್ಷಮತಾ ಅಕಾಡೆಮಿ’ -2017 3 ನೇ ಶಿಬಿರದ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತದೆ. “ಕ್ಷಮತಾ ಅಕಾಡೆಮಿ” 3 ನೇ ಶಿಬಿರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಬ್ಯಾಂಕ ಆಫ್ ಮಹಾರಾಷ್ಟ್ರ ನಿವೃತ್ತ ಚೆಯರ್‍ಮೆನ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಎಲೆನ್ ಸಿ. ಎ. ಪಿರೆರಾ ಹಾಗೂ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ. ಬಿ. ಖಾರ್ವಿ ಭಾಗವಹಿಸಿದರು. ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ವಿಲಿಯಂ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶಿಬಿರಾರ್ಥಿಗಳನ್ನು ಉದ್ದೇಶಿಸಿ “ಕ್ಷಮತಾ” ಶಿಬಿರದ ಸದುಪಯೋಗ ಹಾಗೂ ಕಾರ್ಯನಿರ್ವಹಣೆ ಮತ್ತು ಸಂವಹನ ನೈಪುಣ್ಯ ವಿವಿಧ ವಿಷಯಗಳಲ್ಲಿ ತಿಳುವಳಿಕೆ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಂದೆ ತನ್ನ ಜೀವನದಲ್ಲಿ ಅತ್ಯುತ್ತಮ ಕಾರ್ಯಸಾಧನೆ ಮಾಡಬೇಕು ಎಂದು ಹೇಳಿದರು. ಶಿಬಿರಾರ್ಥಿಗಳು ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು ನಡೆದ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.