ಗಂಗೊಳ್ಳಿ ಶ್ರೀ ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು – ಅರ್ಚಕ ಬಂಧನ

Spread the love

ಶ್ರೀ ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು

ಲಕ್ಷಾಂತರ ಮೌಲ್ಯದ ದೇವರ ಮೂರ್ತಿಯ ಚಿನ್ನಾಭರಣ ಕದ್ದ ದೇಗುಲದ ಅರ್ಚಕ

ಚಿನ್ನಾಭರಣ ತೆಗೆದು ನಕಲಿ ಚಿನ್ನಾಭರಣ ಹಾಕಿ ವಂಚಿಸಿದ ಅರ್ಚಕ ಬಂಧನ

ಕುಂದಾಪುರ: ಗಂಗೊಳ್ಳಿಯ ಖಾರ್ವಿಕೇರಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ದೇವಸ್ಥಾನದ ದೇವರಿಗೆ ಹಾಕಲಾದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪೂಜೆ ಮಾಡುವ ಅರ್ಚಕರೇ ಕದ್ದಿರುವ ಘಟನೆ ನಡೆದಿದೆ.

ದೇವಸ್ಥಾನದಲ್ಲಿ ಕಳೆದ ಮೇ ನಿಂದ ಪೂಜೆ ಮಾಡುತ್ತಿದ್ದ ಅರ್ಚಕ ನರಸಿಂಹ ದೇವರ ಚಿನ್ನಾಭರಣ ಕದ್ದ ಆರೋಪಿ.

ಭಕ್ತರು ಹಾಗೂ ಆಡಳಿತ ಮಂಡಳಿಯವರು ದೇವರಿಗೆ ಸಮರ್ಪಿಸಿದ 264 ಗ್ರಾಂ. ತೂಕದ ಚಿನ್ನಾಭರಣಗಳನ್ನು ಅರ್ಚಕ ತೆಗೆದು, ವೈಯಕ್ತಿಕವಾಗಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ. ಕಳವಾದ ಚಿನ್ನಾಭರಣದ ಮೌಲ್ಯ 21.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕೆಲ ಚಿನ್ನಾಭರಣಗಳನ್ನು ತೆಗೆದು, ಅದರ ಬದಲು ನಕಲಿ ಚಿನ್ನಾಭರಣ ಹಾಕಿದ್ದು, ಶನಿವಾರ ನವರಾತ್ರಿ ಹಿನ್ನೆಲೆಯಲ್ಲಿ ಸಮಿತಿಯವರು ದೇವರ ಮೂರ್ತಿ, ಆಭರಣಗಳನ್ನು ಸ್ವಚ್ಚ ಮಾಡಬೇಕು, ತೆಗೆದು ಕೊಡಿ ಎಂದು ಅರ್ಚಕರಿಗೆ ಕೇಳುವಾಗ ಈ ವಿಚಾರ ಬೆಳಕಿಗೆ ಬಂದಿದೆ.

ದೇವಸ್ಥಾನದ ಅರ್ಚಕ ಆರೋಪಿ ನರಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿಯೇ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಡಿ ಶಂಕರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments