ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಗಿಡಗಳ ಬೀಜಗಳನ್ನು ನೀಡಿದ ಯುವಕನ ಸೆರೆ

Spread the love

ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಗಿಡಗಳ ಬೀಜಗಳನ್ನು ನೀಡಿದ ಯುವಕನ ಸೆರೆ

ಮಂಗಳೂರು: ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಬೀಜಗಳನ್ನು ನೀಡಿದ ಯುವಕನ್ನು ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತನನ್ನು ಬಿಕರ್ನಕಟ್ಟೆ ನಿವಾಸಿ ರಕ್ಷಿತ್ ಶೆಟ್ಟಿ (21) ಎಂದು ಗುರುತಿಸಲಾಗಿದೆ.

ಇಕೋನಾಮಿಕ್ & ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಸಂತೋಷ್ ನಗರದ ಜೋಶ್ವಾ ಡಿಸೋಜಾ ಎಂಬಾತನಿಗೆ ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಗಿಡಗಳ ಬೀಜಗಳನ್ನು ನೀಡಿದ್ದು ರಕ್ಷಿತ್ ಶೆಟ್ಟಿ ನೀಡಿದ್ದು, ಈತನನ್ನು ಮಂಗಳವಾರ ನಗರದ ಎಸ್ ಡಿ ಎಂ ಕಾಲೇಜ್ ಬಳಿಯಿಂದ ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಪೋಲಿಸ್ ಆಯುಕ್ತಾರದ ಟಿ ಸುರೇಶ್ ಅವರ ಆದೇಶದಂತೆ ಕಾನೂನು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಅವರ ನಿರ್ದೇಶನದಂತೆ ವೆಲೆಂಟೈನ್ ಡಿಸೋಜಾ ಎಸಿಪಿ ಸಿಸಿಆರ್ ಬಿ ರವರ ಮಾರ್ಗದರ್ಶನದಲ್ಲಿ ಪಿಐ ಮಹಮ್ಮದ್ ಷರೀಫ್, ಪಿಎಸ್ ಐ ಲತಾ ಕೆ ಎನ್ ಮತ್ತು ಸಿಬಂದಿಗಳಾದ ಜಗದೀಶ್ ಶಾಜು ನಾಯರ್, ಕಿಶೋರ್ ಪೂಜಾರಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love