ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ 7 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕ್ಯಾಲಿಕಟ್, ಕೇರಳದ ಮೊಹಮ್ಮದ್ ಸಿನಾನ್.ಪಿ. (21), ತ್ರಿಶ್ಯೂರ್ ನಿವಾಸಿ ಹಫೀಝ್ ಅಮೀನ್, ಕಣ್ಣೂರು ನಿವಾಸಿ ಜುಹೈರ್.ಕೆ.ಪಿ., ಕ್ಯಾಲಿಕಟ್ ನಿವಾಸಿ ಆದರ್ಶ್ (20), ಕೋಝಿಕ್ಕೋಡ್ ನಿವಾಸಿಗಳಾದ ಮೊಹಮ್ಮದ್ ನಿಹಾಲ್.ಆರ್.ಕೆ., ಬಿಶ್ರುಲ್ ಹಫೀ (20) ಮತ್ತು ಜಾಕೀರ್ ಅಲಿ.ಪಿ. ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಯವರು ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳಿಂದ ಒಟ್ಟು 1 ಕಿಲೋ 103 ಗ್ರಾಂ ತೂಕದ ಗಾಂಜಾ, ಬುಲೆಟ್ ಬೈಕ್ , ಮೊಬೈಲ್ ಗಳು, ನಗದು ವಶಪಡಿಸಿಕೊಂಡಿದ್ದಾರೆ.
ಈ ಮೇಲಿನ ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ಮೊ.ನಂ. 99/2019 ಕಲಂ 8(ಸಿ), 20(b)(ii)B ಎನ್.ಡಿ.ಪಿ.ಎಸ್.ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಗಳೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಇವರುಗಳು ಮೆಡಿಕಲ್ ಕಾಲೇಜ್ ಮತ್ತಿತರ ಕಾಲೇಜ್ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರಾಗಿರುತ್ತಾರೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಡಾ: ಪಿ.ಎಸ್.ಹರ್ಷ, ಐ.ಪಿ.ಎಸ್. ರವರ ನಿರ್ದೇಶನದಂತೆ ಮಾನ್ಯರಾದ ಶ್ರೀ ಅರುಣಾಂಗ್ಶು ಗಿರಿ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಶ್ರೀ ಲಕ್ಷ್ಮೀಗಣೇಶ (ಡಿ.ಸಿ.ಪಿ ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಟಿ.ಕೋದಂಡರಾಮ ರವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಗಳಾದ ಮನೋಹರ ಸಿಹೆಚ್್ಸಿ 1112, ರಂಜಿತ್ ಸಿಪಿಸಿ 386, ಪ್ರಶಾಂತ್ ಸಿಪಿಸಿ 561, ಲಿಂಗರಾಜ್, ಸಿಪಿಸಿ 553, ಅಕ್ಬರ್ ಸಿಪಿಸಿ 2412 ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಸಹಕರಿಸಿರುತ್ತಾರೆ