ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

ಮಂಗಳೂರು: ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರು ಕಾವೂರು ನಿವಾಸಿ ನಿಲೇಶ್ (21) ಎಂದು ಗುರುತಿಸಲಾಗಿದೆ.

ಶನಿವಾರ ಪೋಲಿಸ್ ನಿರೀಕ್ಷಕ ಮಹಮ್ಮದ್ ಶರೀಫ್ ಅವರಿಗೆ ಬಂದ ಖಚಿತ ಮಾಹಿತಿಯಂತೆ ತನ್ನ ಸಿಬಂದಿಗಳೊಂದಿಗೆ ಮಂಗಳೂರು ಮರಕಡದ ಯುವಕ ಮಂಡಲದ ಬಳಿಯಿರುವ ಸಾರ್ವಜನಿಕ ಗಣೇಶೋತ್ಸವ ಮೈದಾನದ ಸ್ಟೇಜಿನ ಬಳಿಯಲ್ಲಿ ಕೈಯಲ್ಲಿ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ವಸ್ತುವನ್ನು ಹಿಡಿದು ನಿಂತಿದ್ದ ಆರೋಪಿ ನಿಲೇಶನನ್ನು ಹಿಡಿದು ವಿಚಾರಿಸಿದಾಗ, ಆತನ ಕೈಯಲ್ಲಿರುವ ಪ್ಲಾಸ್ಟಿಕ್ ಕವರಿನ ಒಳಗೆ ಇರುವ ವಸ್ತುವಿನ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಚಿಕ್ಕಮಗಳೂರಿನಿಂದ ಚಿಕ್ಕ ಚಿಕ್ಕ 18 ಪ್ಯಾಕೆಟುಗಳಲ್ಲಿ ಗಾಂಜಾ ತಂದಿದ್ದು, ಆತನ ವಶದಲ್ಲಿದ್ದ ಸುಮಾರು 311 ಗ್ರಾಂ ಗಾಂಜಾವನ್ನು ಸ್ವಾಧಿನ ಪಡಿಸಿದ್ದು, ಅದರ ಅಂದಾಜು ಮೌಲ್ಯ ರೂ 8500 ಆಗಬಹುದು ಅಲ್ಲದೆ ಗಾಂಜಾ ಮಾರಾಟ ಮಾಡಿದ ಹಣ ರೂ 500 ಮತ್ತು ಕೃತ್ಯಕ್ಕೆ ಉಪಯೋಗಿಸಿದ ರೂ 1000 ಬೆಲೆಯ ಮೊಬೈಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಆಯುಕ್ತರಾದ ಟಿ ಸುರೇಶ್ ಅವರ ಆದೇಶದಂತೆ, ಉಪ ಪೋಲಿಸ್ ಆಯಕ್ತ ಹನುಮಂತರಾಯ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಇಕೊನಾಮಿಕ್ & ನಾರ್ಕೋಟಿಕ್ ಕ್ರೈಂ ಪೋಲಿಸ್ ಠಾಣಾ ಪೋಲಿಸ್ ನಿರೀಕ್ಷಕರಾದ ಮಹಮ್ಮದ್ ಷರೀಫ್, ಸಿಬಂದಿಗಳಾದ ಶಾಜು ನಾಯರ್, ಲಕ್ಷ್ಮೀಶ, ಜಗದೀಶ್, ಕಿಶೋರ್ ಪೂಜಾರಿ ಹಾಗೂ ಭಾಸ್ಕರ್ ಅವರು ಭಾಗವಹಿಸಿದ್ದರು.


Spread the love