ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು:ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ.

ಬಂದಿತರನ್ನು ತಿರುವನಂತಪುರ ನಿವಾಸಿ ರಾಜೀವ ಎಪಿ (48) ಮತ್ತು ಬಂಟ್ವಾಳ ನಿವಾಸಿ ಅಬ್ದುಲ್ ರಹೀಂ (26) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆಪಾಧಿತ ಶಾಫಿ @ ಕಲಂದರ ಶಾಫಿ ಎಂಬಾತನು ತಪ್ಪಿಸಿ ಪರಾರಿಯಾಗಿರುತ್ತಾನೆ.

ಸಪ್ಟೆಂಬರ್ 8 ರಂದು ಕೆ. ಆರ್ ನಾಯ್ಕ್ ಪೊಲೀಸ್ ನಿರೀಕ್ಷಕರು ಕಾವೂರು ಪೊಲೀಸ್ ಠಾಣೆ ರವರಿಗೆ ಬಂದ ಮಾಹಿತಿಯಂತೆ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆಪಾಧಿತರುಗಳನ್ನು ಮತ್ತು ಈ ಕೆಳಕಾಣಿಸಿದ ಸೊತ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ವಶಪಡಿಸಿಕೊಂಡ ಸ್ವತ್ತುಗಳ ವಿವರಗಳು:- 42 ಕೆ.ಜಿ ಗಾಂಜಾ -ಮೌಲ್ಯ ರೂ 7,56,000/-, ಕೆ ಎ 21 ಬಿ 5916 ನೇ ನಂಬ್ರದ ಆಟೋ ರಿಕ್ಷಾ -1, ಮೌಲ್ಯ 80,000/-, ಕೆಎ 19 ಇಜೆ 7484 ನೇ ನಂಬ್ರದ ಯಮಹಾ ಎಫ್ಝಡ್ ಬೈಕ್ -1, ಮೌಲ್ಯ-40,000/- ರೂ ಸ್ಯಾಮ್ ಸಾಂಗ್ ಮೊಬೈಲ್ -1 ಮೌಲ್ಯ ರೂ 2000/- ರೂ , ಜಿ 5 ಕಂಪೆನಿ ಮೊಬೈಲ್ -1, ಮೌಲ್ಯ ರೂ 500/- ರೂ , ಗಾಂಜಾ ಕಟ್ಟುಗಳನ್ನು ತುಂಬಿಸಿದ್ದ ಲಗೇಜ್ ಬ್ಯಾಗ್ ಗಳು-4. ಮೇಲಿನ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ- 8,78,500/ ರೂ ಎಂದು ಅಂದಾಜಿಸಲಾಗಿದೆ.

ಈ ಕಾರ್ಯಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಸುರೇಶ್ ಟಿ ಆರ್, ಡಿ.ಸಿ.ಪಿ (ಅಪರಾಧ & ಸಂಚಾರ) ಉಮಾಪ್ರಶಾಂತ್, ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ರಾಜೇಂದ್ರ ಡಿ. ಎಸ್ ರವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೆ. ಆರ್ ನಾಯ್ಕ್ ರವರು ಸಿಬ್ಬಂದಿಗಳಾದ ಕಾವೂರು ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಹೆಚ್ ವಿ, ಹೆಚ್.ಸಿ ಗಳಾದ ರಾಜಶೇಖರ್ ಗೌಡ, ಪ್ರಮೋದ್ ಎ. ಎಸ್, ದುಗರ್ಾಪ್ರಸಾದ್ ಶೆಟ್ಟಿ, ವಿಶ್ವನಾಥ, ಪಿಸಿ ಗಳಾದ ವಿನಯ್ ಕುಮಾರ್ ಹೆಚ್ ಕೆ, ರಶೀದ್ ಶೇಖ, ಸಿಖಂದರ್ ಚಿಂಚಲಿ, ಎ.ಹೆಚ್.ಸಿ ಇಬ್ರಾಹಿಂ ರವರೊಂದಿಗೆ ನಡೆಸಿರುತ್ತಾರೆ.


Spread the love