Spread the love
ಗುರುಪೂರ್ಣಿಮೆ ಪ್ರಯುಕ್ತ ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ ಸಚಿವೆ ಉಮಾಭಾರತಿ
ಉಡುಪಿ: ಕೇಂದ್ರದ ನೀರಾವರಿ ಹಾಗೂ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆಯ ಸಚಿವೆ ಉಮಾ ಭಾರತಿಯವರು ಗುರುಪೂರ್ಣಿಮೆಯ ಪ್ರಯುಕ್ತ ತಮ್ಮ ಗುರುಗಳಾದ ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಭಾನುವಾರ ಉಡುಪಿಗೆ ಆಗಮಿಸಿ ಅವರು ತಮ್ಮ ಗುರುಗಳಾದ ಪೇಜಾವರ ಸ್ವಾಮೀಜಿಯವರೊಂದಿಗೆ ಕೃಷ್ಣ ಮಠದ ದರ್ಶನ ಮಾಡಿದ ಬಳಿಕ ಪೇಜಾವರ ಸ್ವಾಮೀಜಿಯರಿಗೆ ಪಾದಪೂಜೆ ಹಾಗೂ ಆರತಿ ಎತ್ತಿ ಗುರುಪೂರ್ಣಿಮೆ ಪ್ರಯುಕ್ತ ಗೌರವ ಸಮರ್ಪಿಸಿದರು.
Spread the love