ಗೋ ಕಳ್ಳತನ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂಜಾವೇ ಗಂಗೊಳ್ಳಿ ಘಟಕದಿಂದ ಪೊಲೀಸರಿಗೆ ಮನವಿ

Spread the love

ಗೋ ಕಳ್ಳತನ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂಜಾವೇ ಗಂಗೊಳ್ಳಿ ಘಟಕದಿಂದ ಪೊಲೀಸರಿಗೆ ಮನವಿ

ಗಂಗೊಳ್ಳಿ : ಗಂಗೊಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಗೋ ಕಳ್ಳತನದ ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಆಗ್ರಹಿಸಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷರಿಗೆ ಮನವಿ ಸಲ್ಲಿಸಿದೆ.

ಕಳೆದ ಹಲವಾರು ಗಂಗೊಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ವ್ಯಾಪಕವಾಗಿ ನಡೆಯುತ್ತಿದೆ. ಅದು ಇತ್ತೀಚಿನ ದಿನದಲ್ಲಿ ತುಂಬಾ ಹೆಚ್ಚಾಗಿದ್ದು, ಮಂಗಳವಾರ ಮಧ್ಯರಾತ್ರಿ ಗಂಗೊಳ್ಳಿಯ ಬಂದರು ಹಾಗೂ ಮ್ಯಾಂಗನೀಸ್ ರೋಡಿನ ಅಂಗನವಾಡಿ ಕೇಂದ್ರದ ಬಳಿ ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಜಾನುವಾರುಗಳನ್ನು ಸುಸಜ್ಜಿತರಾಗಿ ವಾಹನದಲ್ಲಿ ಬಂದ ವೃತ್ತಿನಿರತ ಗೋಕಳ್ಳರು ಜಾನುವಾರುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಗಂಗೊಳ್ಳಿ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಗೋಕಳ್ಳತನವು ನಿರಂತರವಾಗಿ ನಡೆಯುತ್ತಿದೆ ಅಲ್ಲದೆ ಮನೆ ಮನೆಯಲ್ಲೂ ಅಕ್ರಮವಾದಂತಹ ಕಸಾಯಿಖಾನೆ ನಿರಂತರವಾಗಿ ಕಾರ್ಯಚರಿಸುತ್ತಿದೆ.

ಗೋ ಕಳ್ಳರ ಜಾಲವು ಇತ್ತೀಚಿನ ದಿನದಲ್ಲಿ ವಿಸ್ತಾರವಾಗಿ ಕಾರ್ಯಚರಿಸುತ್ತಿದ್ದು ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಸಮಾಜದ ಶಾಂತಿಭಂಗದ ಮೊಕದ್ದಮೆಗಳು ಕೂಡಾ ದಾಖಲಾಗಿರುತ್ತದೆ. ಗೋಕಳ್ಳತನದ ಜಾಲವು ಅಂತರ್ ಜಿಲ್ಲಾ ಮುಖಿಯಾಗಿ ಪ್ರತಿನಿತ್ಯವು ಕಾರ್ಯಚರಿಸುತ್ತಿರುವುದು ಮಾಧ್ಯಮಗಳ ಮೂಲಕ ಜಗಜ್ಜಾಹಿರಾಗಿದೆ. ಅಕ್ರಮ ಗೋ ಸಾಗಾಟ ಹಾಗೂ ಗೋ ಕಳ್ಳತನ ಮತ್ತು ಅಕ್ರಮ ಕಸಾಯಿಖಾನೆಯಿಂದಾಗಿ ಮತ್ತೆ ಮತ್ತೆ ಗಂಗೊಳ್ಳಿಯ ಭಾಗದಲ್ಲಿ ಗಲಭೆಗಳು ನಡೆದಿರುತ್ತದೆ.

ಆದ್ದರಿಂದ ಅತೀ ಶೀಘದಲ್ಲಿ ಗಂಗೊಳ್ಳಿಗೆ ಬಂದಂತಹ ಜಾನುವರು ಕಳ್ಳರನ್ನು ಹಾಗೂ ಅಕ್ರಮ ಕಸಾಯಿಖಾನೆ ನಡೆಸುತ್ತಿರುವವರನ್ನು ಬಂಧಿಸಿ ಕಾನೂನಿನ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯನ್ನು ಸಲ್ಲಿಸಲಾಗಿದೆ.

ಮನವಿ ಸ್ವೀಕರಿಸಿದ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಭೀಮಾಶಂಕರ ಎಸ್ ರಾತ್ರಿ ವೇಳೆ ಜಾನುವರು ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಕ್ರಮ ಕಸಾಯಿಖಾನೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕೂಡ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾದ್ಯಕ್ಷ ವಾಸುದೇವ ದೇವಾಡಿಗ, ಹಿಂಜಾವೇ ಬೈಂದೂರು ತಾಲೂಕು ಸಂಯೋಜಕ ರತ್ನಾಕರ ಗಾಣಿಗ, ಹಿಂಜಾವೇ ಬೈಂದೂರು ತಾಲೂಕು ಕಾರ್ಯದರ್ಶಿ ನವೀನ್ ದೊಡ್ಡಹಿತ್ಲು ಹಿಂಜಾವೇ ಗಂಗೊಳ್ಳಿ ಘಟಕದ ಕಾರ್ಯದರ್ಶಿ ಯಶವಂತ ಖಾರ್ವಿ, ರಾಘವೇಂದ್ರ ಗಾಣಿಗ, ಗಂಗೊಳ್ಳಿ ಗ್ರಾಪಂ ಸದಸ್ಯ ಪ್ರಶಾಂತ ಖಾರ್ವಿ, ವಿವೇಕ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.


Spread the love