ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು , ಕೇರಳದ ಲಾಬಿಗೆ ಮಣಿದ ದಕ್ಷಿಣ ರೈಲ್ವೇಯ ಅಧಿಕಾರಿಗಳು

Spread the love

ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು , ಕೇರಳದ ಲಾಬಿಗೆ ಮಣಿದ ದಕ್ಷಿಣ ರೈಲ್ವೇಯ ಅಧಿಕಾರಿಗಳು

ಮಂಗಳೂರು ನಿಲ್ದಾಣ ದಲ್ಲಿ 2 ಹೆಚ್ಚುವರಿ ಪ್ಲಾಟ್ಫಾರ್ಮ್ಗಳು ಸೇರ್ಪಡೆ ಯೇನೋ ಇದೆ ಬೆಂಗಳೂರು, ಮುಂಬಯಿಯ ರೈಲುಗಳು ಇಲ್ಲಿಗೆ ವಿಸ್ತರಣೆಯಾಗದ ಕಾರಣ ರಾಜ್ಯದ ಹಿತಾಸಕ್ತಿಯನ್ನು ದಕ್ಷಿಣ ರೈಲ್ವೇ ಮತ್ತೆ ಅವಗಣಿ ಸಿದೆ ಎಂಬ ಸಂದೇಹ ಉದ್ಭವಿಸಿದೆ. ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರು ಸೆಂಟ್ರಲ್ ನಿಲ್ದಾಣದ ನಂ. 4 ಮತ್ತು 5 ಪ್ಲಾಟ್‌ಫಾರ್ಮ್ ಗಳು ಪೂರ್ಣಗೊಂಡಾಗ ಈ 18 ಬೆಂಗಳೂರು, ಮುಂಬಯಿಯ ರೈಲುಗಳು ವಿಸ್ತರಣೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು.

ರೈಲ್ವೇ ಯಾತ್ರಿ ಸಂಘಟನೆಗಳು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ದಕ್ಷಿಣ ರೈಲ್ವೇ ಅಧಿಕಾರಿಗಳು ರೈಲ್ವೇ ಮಂಡಳಿಗೆ ಈ ರೈಲನ್ನು ವಿಸ್ತರಿಸುವಂತೆ 2024ರ ಫೆ. 27ರಂದು ಪತ್ರ ಬರೆದಿ ದ್ದರು. ಸಂಸದ ಕ್ಯಾ । ಬ್ರಿಜೇಶ್ ಚೌಟ ಕೆಲವು ತಿಂಗಳ ಹಿಂದೆ ರೈಲ್ವೇ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಸದ್ಯ ಯಶವಂತಪುರ- ಮಂಗಳೂರು ಜಂಕ್ಷನ್-ಯಶವಂತಪುರ ಮಧ್ಯೆ ವಾರಕ್ಕೆ ಮೂರು ಬಾರಿ ಸಂಚರಿಸುವ ನಂ. 16575/76 ಗೋಮಟೇಶ್ವರ ಎಕ್ಸ್‌ಪ್ರೆಸ್ ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದರು. ಆದರೆ ಜೂನ್ 3 ರಂದು ಇದೇ ಅಧಿಕಾರಿಗಳು, ವಿಸ್ತರಣೆಯ ಪ್ರಸ್ತಾವನೆ ಯನ್ನು ರದ್ದುಪಡಿಸುವಂತೆ ದಕ್ಷಿಣ ರೈಲ್ವೇ ಮಂಡಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.

ಕಾರಣವೇನು? ಫೆಬ್ರವರಿಯಲ್ಲಿ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆಗೊಂಡ ಆಗಿನ ಕಾಸರಗೋಡು – ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿಗೆ ವಿಸ್ತರಿಸಿರುವುದು ಹಾಗೂ ಮುಂದಿನ ದಿನಗಳಲ್ಲಿ ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವುದರಿಂದ ಗೋಮಟೇಶ್ವರ ವಿಸ್ತರಣೆ ಅಸಾಧ್ಯ ಎಂಬುದು ಅಧಿಕಾರಿಗಳ ವಾದ.


Spread the love
Subscribe
Notify of

0 Comments
Inline Feedbacks
View all comments