ಗೋವುಗಳನ್ನು ಸಾಗಿಸುವಾಗ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹ
ಮಂಗಳೂರು: ಜೋಕಟ್ಟೆಯಲ್ಲಿ ಗೋವುಗಳನ್ನು ಸಾಗಾಟ ಮಾಡುವಾಗ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿ ಸಮಾಜದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಲು ಹುನ್ನಾರ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳೂರು ನಗರ ಕಮೀಷನರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜೂನ್ 4 ರಂದು ಪಣಂಬೂರು ಠಾಣಾ ವ್ಯಾಫ್ತಿಯ ಜೋಕಟ್ಟೆಯ ಬಳಿ 23 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೂಡಿ ಹಾಕಿದ್ದನ್ನು ಪಣಂಬೂರು ಠಾಣೆಯ ಪೊಲೀಸರು ಪತ್ತೆ ಹಚ್ಚಿ, ಮಹಮ್ಮದ್ ಹನೀಫ್ ಗುಡ್ಡೆಮನೆ ಸಹಿತ ಹಲವು ಆರೋಪಿಗಳನ್ನು ಬಂಧೀಸಿದ್ದರು. ವಶಪಡಿಸಿದ ಗೋವುಗಳನ್ನು ಪಣಂಬೂರು ಪೊಲೀಸರು ಪಜೀರು ಗೋವನಿತಾಶ್ರಯ ಗೋಶಾಲೆಯ ಅಧಿನಕ್ಕೆ ಕೋಟ್ಟಿದ್ದರು. ಜೂನ್ 21 ರಂದು ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳಾದ ಮಹಮ್ಮದ್ ಹನೀಫ್ ಗುಡ್ಡೆಮನೆ ಸಹಿತ 25 ಜನ ಪಜೀರು ಗೋಶಾಲೆಯಿಂದ ಗೋವುಗಳನ್ನು ಬಿಡಿಸಿಕೊಂಡು ಹೋಗಿ ಜೋಕಟ್ಟೆಯಲ್ಲಿ ಜನರನ್ನು ಸೇರಿಸಿ ಪಟಾಕಿ ಸಿಡಿಸಿ, ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸಿದ್ದಾರೆ ಅಲ್ಲದೆ ಸಮಾಜದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಜೋಕಟ್ಟೆಯಲ್ಲಿ ಗೋವುಗಳನ್ನು ವಾಪಾಸು ಕೊಂಡೊಗಬೇಕಾದರೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಈ ಕೃತ್ಯವನ್ನು ನೋಡಿದಾಗ ಗೋವುಗಳನ್ನು ಸಾಕಲು ಕೊಂಡೊಯ್ಯಲಾಗುತ್ತದೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದು ಮತ್ತು 23 ಗೋವುಗಳನ್ನು ಅಕ್ರಮ ಕಸಾಯಿಖಾನೆಯಲ್ಲಿ ಹತ್ಯೆ ಮಾಡಲು ಕೊಂಡೊಯ್ಯಲಾಗಿರಬಹುದು ಎಂಬ ಸಂಶಯವಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣೀಸಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿ ಚಿತ್ರೀಕರಿಸಿದ ವೀಡಿಯೋ ದಾಖಲೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಗೋವುಗಳನ್ನು ವಾಪಾಸು ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ, ಸಮಾಜದಲ್ಲಿ ಅಶಾಂತಿ ನಿರ್ಮಿಸಲು ಹುನ್ನಾರ ನಡೆಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಒತ್ತಾಯಿಸಿದೆ.
ನಿಯೋಗದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಗೋಪಾಲ್ ಕುತ್ತಾರ್, ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶೇಣವ, ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಗೋ ರಕ್ಷ ಪ್ರಮುಖ್ ಪ್ರದೀಪ್ ಪಂಪ್ ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣಱ ಕುತ್ತಾರ್, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಗೋರಕ್ಷ ಪ್ರಮುಖ್ ಗುರುಪ್ರಸಾದ್ ಉಪಸ್ಥಿತರಿದ್ದರು.