ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸೋಣ – ಪ್ರಮೋದ್ ಮಧ್ವರಾಜ್
ಬ್ರಹ್ಮಾವರ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆ ಶನಿವಾರ ಬ್ಲಾಕ್ ಕಚೇರಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯವಾಗಿ ಆಯ್ಕೆ ಆಗುವ ಸಮರ್ಥ ವ್ಯಕ್ತಿಗಳನ್ನೇ ಅಭ್ಯರ್ಥಿಗಳನ್ನಾಗಿ ಮಾಡಬೇಕೇ ಹೊರತು ಪಕ್ಷದ ಮುಖಂಡರು ಆಯ್ಕೆ ಮಾಡುವಂತಾಗಬಾರದು. ಯುವ ಅಭ್ಯರ್ಥಿಗಳಿಗೆ ಈ ಬಾರಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಚುನಾವಣೆ ಜನರ ತೀರ್ಮಾನ. ಗೆದ್ದವರು ಮಾತ್ರ ನಾಯಕರಲ್ಲ. ಸೋತವರೂ ಕೂಡಾ ನಾಯಕರು ಎಂದ ಅವರು ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಆದರೆ ಈಗ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಬಿಡುಗಡೆ ಆಗುತ್ತಿಲ್ಲದಿರುವುದು ದುರದೃಷ್ಟಕರ ಎಂದರು.
ರಾಜಕೀಯದಲ್ಲಿ ನೋವನ್ನು ಅನುಭವಿಸಿದವರಿಗೆ ಯಶಸ್ಸು ಸಿಗುತ್ತಿದೆ. ಪಕ್ಷಗಳಲ್ಲಿ ಪಕ್ಷಾಂತರ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಅದು ಅವರವರ ನಿಲುವಿಗೆ ಬಿಟ್ಟಿದ್ದು. ಇದನ್ನೆಲ್ಲಾ ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದ್ದು ಕಾರ್ಯಕರ್ತರು ಎಂದು ಹೇಳಿದರು.
ತನ್ನ ಅವಧಿಯಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಅನುದಾನ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕಾಗಿದೆ. ತಾನು ಕೂಡ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಸ್ತುವಾರಿಗಳನ್ನು ನೇಮಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಜನತೆ ಬೇಸತ್ತಿದ್ದು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದರು.
ಸಭೆಯಲ್ಲಿ ಕೆಪಿಸಿಸಿ ವಕ್ತಾರಾದ ಪುರುಷೋತ್ತಮ್ ಚಿತ್ರಪಾಡಿ, ನಾಯಕರಾದ ಯತೀಶ್ ಕರ್ಕೇರಾ, ರಮೇಶ್ ಕಾಂಚನ್, ವೆರೋನಿಕಾ ಕರ್ನೆಲಿಯೊ, ಮುರಳಿ ಶೆಟ್ಟಿ, ದಿನಕರ ಹೇರೂರು, ಹರೀಶ್ ಶೆಟ್ಟಿ, ಡಾ ಸುನೀತಾ ಶೆಟ್ಟಿ, ರಮೇಶ್ ಶೆಟ್ಟಿ ಹಾವಂಜೆ, ವಿಜಯ ಹೆಗ್ಡೆ, ಗೋಪಿ ನಾಯಕ್, ರಾಜೇಶ್ ಕುಮ್ರಗೋಡು, ಅಶೋಕ್ ಶೆ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್, ವಿಘ್ನೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸೂರ್ಯ ಸಾಲಿಯಾನ್ ಸರಸ್ವತಿ, ನಿತ್ಯಾನಂದ ಕೆಮ್ಮಣ್ಣು, ನಿತ್ಯಾನಂದ ಬಿ ಆರ್, ಸಂಪತ್ , ತಾಜುದ್ದೀನ್, ಬ್ಯಾಪ್ಟಿಸ್ಟ್, ಸತೀಶ್ ಕಲ್ಯಾಣಪುರ, ಮೆಲ್ವಿನ್, ಹಮೀದ್, ರೆಹಮಾನ್, ಪ್ರಶಾಂತ್ ಸುವರ್ಣ, ಸತೀಶ್, ಫ್ರ್ಯಾಂಕಿ, ಕುಮಾರ್, ದಿನೇಶ್ ಪೂಜಾರಿ, ಸದಾಶಿವ ನಾಯಕ್, ರಮೇಶ್ ಕರ್ಕೇರ, ನರಸಿಂಹ ಪೂಜಾರಿ, ಉಮೇಶ್ ಶೆಟ್ಟಿ, ಶೀನ ಪೂಜಾರಿ, ಅಲ್ತಾಫ್, ಶ್ರೀನಿವಾಸ್ ಗುಲ್ವಾಡಿ, ಉಪೇಂದ್ರ ಗಾಣಿಗ, ಉಮೇಶ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.