ಗ್ರಾಮ ವಿಕಾಸ ಯೋಜನೆ – ಹಾರಾಡಿ ಬೈಕಾಡಿಗೆ ಸಚಿವ ಮಧ್ವರಾಜ್ ಪ್ರಶಂಸೆ

Spread the love

ಗ್ರಾಮ ವಿಕಾಸ ಯೋಜನೆ – ಹಾರಾಡಿ ಬೈಕಾಡಿಗೆ ಸಚಿವ ಮಧ್ವರಾಜ್ ಪ್ರಶಂಸೆ
ಉಡುಪಿ : ಗ್ರಾಮ ವಿಕಾಸ ಯೋಜನೆಯ ಅನುಷ್ಠಾನದಲ್ಲಿ ಹಾರಾಡಿ ಬೈಕಾಡಿ ಗ್ರಾಮದಲ್ಲಿ 59,94,000 ರೂ.ಗಳನ್ನು ಖರ್ಚು ಮಾಡಿದ್ದು, ಆರು ಕಾಮಗಾರಿಗಳು ಸಂಪೂರ್ಣಗೊಂಡಿವೆ. ಯೋಜನೆಯ ಅನುಷ್ಠಾನದಲ್ಲಿ ಮುತುವರ್ಜಿ ವಹಿಸಿ ಸಾಧನೆ ತೋರಿದ ಹಾರಾಡಿ ಬೈಕಾಡಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅಭಿನಂದನೆ ಸಲ್ಲಿಸಿದರು.

ಉಡುಪಿ ತಾಲೂಕು ಪಂಚಾಯತ್‍ನ ಸಭಾಂಗಣದಲ್ಲಿ ಆಯೋಜಿಸಲಾದ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

meeting

ಮೂಲಸೌಕರ್ಯ ಅಭಿವೃಧ್ಧಿ, ನೀರು ಸಂರಕ್ಷಣೆ, ವೈಯಕ್ತಿಕ ಕಾಮಗಾರಿ, ಸೋಲಾರ್, ತರಬೇತಿ ಆಯೋಜನೆಗೆ ಗ್ರಾಮವೊಂದಕ್ಕೆ 70 ಲಕ್ಷ ರೂ. ಅನುದಾನ ಈ ಯೋಜನೆಯಡಿ ದೊರೆತಿದ್ದು, ಕಡೆಕಾರು, ತೆಂಕನಿಡಿಯೂರಿನ ಕೆಳಾರ್ಕಳಬೆಟ್ಟು, ಪೆಜೆಮಂಗೂರು ಗ್ರಾಮಗಳು ಯೋಜನೆಯಡಿ ಆಯ್ಕೆಯಾಗಿವೆ. ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಇಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ.

ಜಿಲ್ಲಾ ಪಂಚಾಯತ್‍ನ ಸದಸ್ಯರಾದ ಜನಾರ್ಧನ ತೋನ್ಸೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು. ಪಂಚಾಯತ್ ಪಿಡಿಒ ಮತ್ತು ಕೆಆರ್‍ಐಡಿಯ ಇಂಜಿನಿಯರ್‍ಗಳು ಸಭೆಯಲ್ಲಿದ್ದರು.


Spread the love