ಚಪ್ಪಾಳೆ ಗಿಟ್ಟಿಸಲು ಎಬಿವಿಪಿ ಮಾಡುವ ಆರೋಪಕ್ಕೆ ಪ್ರತಿಕ್ರಿಯಿಸಲ್ಲ : ಅಣ್ಣಾಮಲೈ
ಚಿಕ್ಕಮಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಕಾಲೇಜು ವಿದ್ಯಾರ್ಥಿ ಅಭಿಷೇಕ್ ಸಾವಿನ ಕುರಿತಾಗಿ ಎಬಿವಿಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ಕಾಂಗ್ರೆಸ್ ಎಜೆಂಟರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಕ್ಕೆ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅಣ್ಣಾಮಲೈ ಅವರು ಪ್ರತಿಭಟನಾ ಸಭೆಯಲ್ಲಿ ವಿನಯ್ ಬಿದರೆ ಅವರು ಪೋಲಿಸ್ ಇಲಾಖೆಗೆ ಸಂಬಂಧಿಸಿದ 2-3 ವಿಷಯಗಳನ್ನು ಪ್ರಸ್ತಾಪಿಸಿದ್ದು, ಎಸ್ಪಿಯವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು 2013 ಸಪ್ಟೆಂಬರ್ 4 ರಂದು ಸರ್ಕಾರಿ ನೌಕರಿಗೆ ಸೇರಿದ್ದು, ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿ ಯಾವುದೇ ಸಾರ್ವಜನಿಕರಿಗೆ, ಜಾತಿ ಧರ್ಮದವರಿಗೆ, ತೊಂದರೆಯಾಗದಂತೆ, ಮತ್ತು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ವಿನಯ್ ಬಿದರೆಯವರು ಒಂದು ಸಂಘಟನೆಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಿದ್ದು, ನಾನು ಎಲ್ಲಾ ಜಾತಿ ಹಾಗೂ ಧರ್ಮದವರಿಗೆ ಒಂದೇ ರೀತಿಯಲ್ಲಿ ಭೇಧಭಾವ ಇಲ್ಲದೆ ಸರ್ಕಾರಿ ಕೆಲಸ ನಿರ್ವಹಿಸಿಕೊಂಡು ಬಂದಿರುತ್ತೇನೆ.ಯಾರೋ ಒಬ್ಬರು ಒಂದು ಸಂಘಟನೆಗಾಗಿ ಮೀಸಲಿಟ್ಟವರ ಜೊತೆ ಚರ್ಚೆ ಮಾಡಲು ನನಗೆ ಅವಶ್ಯಕತೆ ಇರುವುದಿಲ್ಲ ನಾನು ದೇಶದಲ್ಲಿ 120 ಕೋಟಿ ಜನರಿಗಾಗಿ ಜಾತಿ ಮತ ಬಿಟ್ಟು ಸರ್ವಧರ್ಮ ಸಮಾನತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಅಲ್ಲದೆ ಬಿದರೆಯವರು ನಾನು ಹೆಣ್ಣು ಮಕ್ಕಳಿಗೆ ಅಗೌರವ ತೋರಿಸಿದ್ದೇನೆ ಎಂದು ಆರೋಪಿಸಿದ್ದು, ಹಾಗೆ ನಾನು ನಡೆದುಕೊಂಡಲ್ಲಿ ಆ ಹೆಣ್ಣು ಮಗಳೇ ಬಂದು ನನ್ನ ವಿರುದ್ದ ಆಪಾದನೇ ಮಾಡಿದರೆ ಅಥವಾ ಮಾಧ್ಯಮದ ಮುಂದೆ ಆಪಾದಿಸಿದರೆ ನಾನು ತಲೆ ಬಾಗುತ್ತೇನೆ. ಯಾರೋ ಒಬ್ಬರು ಜನ ಸಮಾಜದಲ್ಲಿ ಚಪ್ಪಾಳೆ ಗಿಟ್ಟಿಸಲು ನನ್ನ ವಿರುದ್ದ ಸಲ್ಲದ ಆರೋಪಿ ಮಾಡಿದರೆ ಅದಕ್ಕೆ ಪ್ರತಿಕ್ರಿಯೇ ನೀಡುವುದಿಲ್ಲ. ನಾನು ಯಾವಾಗಲೂ ಹೆಣ್ಣು ಮಕ್ಕಳು ಮತ್ತು ವಯಸ್ಸಾದವರಿಗೆ ಗೌರವ ನೀಡುತ್ತೇನೆ. ಸಭೆಯಲ್ಲಿ ಯಾರೂ ಬೇಕಾದರೂ ಜನರನ್ನು ಸೇರಿಸಬಹುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರನ್ನು ಸೇರಿಸಿದ್ದಾರೆ. ಜನರನ್ನು ಸೇರಿಸಲು ನಾನೊಬ್ಬ ರಾಜಕೀಯ ವ್ಯಕ್ತಿಯಲ್ಲಿ ನಾನೋಬ್ಬ ಸಾಮಾನ್ಯ ಮನುಷ್ಯ ಸರ್ಕಾರಕ್ಕಾಗಿ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ಎಬಿವಿಪಿ ಕಾರ್ಯಕರ್ತ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧೀಸಿ ಚಿಕ್ಕಮಗಳೂರು ಚಲೋ ಆಯೋಜಿಸಿದ ವೇಳೆ ವಿನಯ್ ಬಿದರೆ ಅಣ್ಣಾಮಲೈ ವಿರುದ್ದ ಆರೋಪ ಮಾಡಿದ್ದರು.