ಚರಣ್ ಕೊಲೆ ಪ್ರಕರಣ; 5 ಮಂದಿ ಆರೋಪಿಗಳ ದಸ್ತಗಿರಿ
ಮಂಗಳೂರು: ವಾಮಂಜೂರಿನಲ್ಲಿ ಹಾಡು ಹಗಲೇ ರೌಡಿ ಶೀಟರ್ ಚರಣ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಮೂಡುಶೆಡ್ಡೆ ಶಿವನಗರ ನಿವಾಸಿ ಮೊಹಮ್ಮದ್ ರಿಜ್ವಾನ್ (28), ವಾಮಂಜೂರು ಕೆಲೆರೈ ಕೋಡಿ ನಿವಾಸಿ ಮೊಹಮ್ಮದ್ ರಹೀಫ್ (19), ಮೂಡುಶೆಡ್ಡ ನಿವಾಸಿಗಳಾದ ಮೊಹಮ್ಮದ್ ಶಾರೂಕ್ (20), ಮೊಹಮ್ಮದ್ ಮುಸ್ತಾಫ (19) ಹಾಗೂ ಗುರುಪುರ ನಿವಾಸಿ ನವಾಜ್ (23) ಎಂದು ಗುರುತಿಸಲಾಗಿದೆ.
ಅಗೋಸ್ತ್ 19 ರಂದು ಚರಣ್ ಎಂಬಾತನು ತನ್ನ ಪತ್ನಿ ಹಾಗೂ ಮಗುವಿನ ಜೊತೆ ವಾಮಂಜೂರಿನ ಸಂತೋಷ್ ಎಂಬವರ ಕೆಎ-19-ಎಎ-6471 ನೇ ರಿಕ್ಷಾದಲ್ಲಿ ಕಾವೂರು ಪೊಲೀಸ್ ಠಾಣೆಗೆಂದು ಹೋಗುತ್ತಾ ವಾಮಂಜೂರು ಜಂಕ್ಷನ್ ಬಳಿಯ ಆಳ್ವಾರಿಸ್ ಪೆಟ್ರೋಲ್ ಬಂಕ್ ನ ಎದುರುಗಡೆ ತಲುಪುತಿದ್ದಂತೆ ಕೆಎ-19 ಎಮ್‌ಎಫ್-5840 ನೇ ಕಪ್ಪು ಬಣ್ಣದ ಬೊಲೆರೋ ಜೀಪನ್ನು ರಿಜ್ವಾನ್ ಎಂಬವನು ಚಲಾಯಿಸಿಕೊಂಡು ಬಂದು ಚರಣ್ ಎಂಬಾತನು ಪ್ರಯಾಣಿಸುತ್ತಿದ್ದ ರಿಕ್ಷಾದ ಬಳಿ ಧಾವಿಸಿಕೊಂಡು ಬಂದಾಗ, ಚರಣ್ನು ರಿಕ್ಷಾದಿಂದ ಹಾರಿ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋಗುವಷ್ಟರಲ್ಲಿ ಆತನನ್ನು ಓಡಿಸಿಕೊಂಡು ಬಂದ ರಿಜ್ವಾನ್ ಮತ್ತು ಇತರರು ಅವರ ಕೈಯಲ್ಲಿದ್ದ ತಲವಾರಿನಿಂದ ಯದ್ವಾ ತದ್ವಾ ಕಡಿದ ಪರಿಣಾಮ ಚರಣ್ ಎಂಬಾತನಿಗೆ ಗಂಭಿರ ಸ್ವರೂಪದ ಗಾಯಗಳಾಗಿದ್ದು, ನಂತರ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು.
ಪ್ರಕರಣದ ಜಾಡು ಹತ್ತಿದ ಪೋಲಿಸರು ಅಗೋಸ್ತ್ 23 ರಂದು ಬೆಳಗ್ಗೆ ಪಾಣೆಮಂಗಳೂರು ಹಳೆ ಟೋಲ್ ಗೇಟ್ ಬಳಿಯಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಗಳ ಪೈಕಿ ಮೊಹಮ್ಮದ್ ರಿಝ್ವಾನ್ ಮತ್ತು ಮೃತ ಚರಣ್ ಎಂಬಾತನಿಗೆ ಹಳೇ ದ್ವೇಷ ವಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಳೇ ದ್ವೇಷದ ಹಿನ್ನೆಲೆಯಲ್ಲಿ ಚರಣ್ ಎಂಬಾತನನ್ನು ಮೊಹಮ್ಮದ್ ರಿಝ್ವಾನ್ ಇತರ ಆರೋಪಿಗಳ ಜೊತೆ ಸೇರಿ ಕೊಲೆ ನಡೆಸಿರುವುದಾಗಿದೆ. ಆರೋಪಿ ಮೊಹಮ್ಮದ್ ರಿಜ್ವಾನ್ ಎಂಬಾತನ ವಿರುದ್ಧ ಹಿಂದೆ ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ. ಮೊಹಮ್ಮದ್ ರಯೀಫ್ ಎಂಬಾತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಮಹೇಂದ್ರ ಬೊಲೆರೋ ಕಾರು ಹಾಗೂ ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.