ಚಿಕಿತ್ಸೆಗಾಗಿ ಬಾಲಕಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ 50 ಸಾ.ರೂ ನೆರವು

Spread the love

ಚಿಕಿತ್ಸೆಗಾಗಿ ಬಾಲಕಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ 50 ಸಾ.ರೂ ನೆರವು

ಪಣಂಬೂರು: ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಬೇಕಾದ ನಾವು ಇತರರಿಗೂ ಕಷ್ಟದ ಸಮಯದಲ್ಲಿ ಸ್ಪಂದನೆ, ಸಹಾಯ ಒದಗಿಸಿದಾಗ ಬದುಕು ಸಾರ್ಥಕ ಎನಿಸುತ್ತದೆ ಈ ನಿಟ್ಟಿನಲ್ಲಿ ಬಿರುವೆರ್ ಕುಡ್ಲ ಕಳೆದ ಹಲವು ವರ್ಷಗಳಿಂದ ಬಡ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ವತಿಯಿಂದ ಏಕರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಸುನಿಲ್ ಶೋಭಾ ದಂಪತಿಯ ಪುತ್ರಿಯ ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಧನ ಸಹಾಯ ವಿತರಿಸಿ ಅವರು ಮಾತನಾಡಿದರು. ಇಂದು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ದುರ್ಬಲರಿದ್ದಾರೆ.ಇವರ ಸೇವೆ ಮಾಡಿದರೆ ದೇವರ ಸೇವೆ ಸಮಾಜ. ಬಿರುವೆರ್ ಕುಡ್ಲ ಕಳೆದ ಮೂರು ವರ್ಷಗಳಲ್ಲಿ ಜಾತಿ ಮತ ನೋಡದೆ ಎಲ್ಲರೂ ಸಹಾಯ ಹಸ್ತ ಚಾಚಿದೆ. ಸರಿಸುಮಾರು 60 ಲಕ್ಷ ರೂ.ನಷ್ಟು ಧನ ಸಹಾಯ ವಿತರಿಸಿದ್ದು ಸಣ್ಣ ಸಾಧನೆಯಲ್ಲ. ಬಹು ಪರಿಶ್ರಮದ ಕೆಲಸ. ಇವರ ಜತೆ ಇರುವ ದಾನಿಗಳು, ಬಿರುವೆರ್ ಕುಡ್ಲ ಸಂಘಟನೆಯ ಸದಸ್ಯರು ಅಭಿನಂದನಾರ್ಹರು ಎಂದರು. ಐಡಿಎ ರಾಜ್ಯ ಸಮಿತಿ ಪ್ರತಿನಿಧಿ ಸದಸ್ಯ ಡಾ.ಶಿವಶರಣ್ ಶೆಟ್ಟಿ,ರಣ್‍ದೀಪ್ ಕಾಂಚನ್,ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ,ಪ್ರಮೋದ್ ಬಳ್ಳಾಲ್ ಬಾಗ್,ಉದ್ಯಮಿ ಸದಾನಂದ ಪೂಜಾರಿ,ಚಾರ್ವಾಕ ಮಹೇಶ್ ಶೆಟ್ಟಿ ಮುಂಬೈ, ವೆಂಕಟೇಶ್ ಭಂಡಾರಿ,ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್,ಅಭಿಷೇಕ್ ಅಮೀನ್,ರಾಧಾಕೃಷ್ಣ ಕದ್ರಿ,ರಾಕೇಶ್ ಕೋಟ್ಯಾನ್,ತುಕಾರಾಮ್ ಶೆಟ್ಟಿ ಎಕ್ಕೂರು,ಮನೋಜ್ ಸರಿಪಲ್ಲ,ವಿನ್ನು ಶೆಟ್ಟಿ ತಲಪಾಡಿ,ಲೋಕೇಶ್ ಶೆಟ್ಟಿ,ಲತೇಶ್ ಪೂಜಾರಿ ಬಳ್ಳಾಲ್ ಬಾಗ್,ಸುಹಾನ್ ಪೂಜಾರಿ,ರಾಕೇಶ್ ಚಿಲಿಂಬಿ,ಕಿಶೋರ್ ಬಾಬು ಕೋಡಿಕಲ್, ಅನಿಲ್ ಬೋಳೂರು ,ಮಹೇಶ್ ಅಮೀನ್ ಅಶೋಕ್ ನಗರ,ದಿನಿಲ್ ಪೂಜಾರಿ ಬಳ್ಳಾಲ್ ಬಾಗ್,ರಿನಿತ್ ರಾಜ್ ಅಶೋಕ್ ನಗರ,ಸುನೀಲ್ ಶೆಟ್ಟಿ,ರತನ್,ರೋಶನ್ ಪೂಜಾರಿ ಬಳ್ಳಾಲ್ ಬಾಗ್,ರಾಜೇಶ್ ಪೂಜಾರಿ,ಯೋಗೀಶ್ ಪೂಜಾರಿ ಶಕ್ತಿನಗರ,ಯತೀಶ್ ಬಳ್ಳಾಲ್ ಬಾಗ್,ವಿಘ್ನೇಶ್ ಚಿಲಿಂಬಿ,ದೀಪಕ್ ಪೂಜಾರಿ,ಮನೀಶ್ ಚಿಲಿಂಬಿ,ಲೋಹಿತ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್ ಮಾಡಿ: ಆರು ವರ್ಷದ ತೇಜಸ್ವಿನಿ ಇತರ ಮಕ್ಕಳಂತೆ ಆಟವಾಡಿಕೊಂಡಿರ ಬೇಕಾದ ಪುಟ್ಟ ಕಂದಮ್ಮ.ಆದರೆ ಇಂದು ನಡೆದಾಟಡಲೂ ಶಕ್ತಿಯಿಲ್ಲದೆ ತಾಯಿ ಆಸರೆಯಲ್ಲಿಯೇ ಪ್ರತಿ ಕ್ಷಣ ಇರ ಬೇಕಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ಬಾಲಕಿಯ ಪೋಷಕರು ಮುಂದಾಗಿದ್ದು 3 ಲಕ್ಷ ರೂ ವೆಚ್ಚ ತಗುಲಲಿದೆ.


Spread the love