ಚಿಕ್ಕಮಗಳೂರು ದತ್ತ ಪೀಠದಲ್ಲಿಯ ಸಂಪೂರ್ಣ ಹಿಂದೂ ಪೀಠಕ್ಕಾಗಿ ನಡೆಯುವ ದತ್ತ ಮಾಲಾ ಅಭಿಯಾನ
ಮಂಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ದತ್ತ ಪೀಠ ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ನಿರಂತರ 20 ವರ್ಷಗಳಿಂದ ಶ್ರೀರಾಮ ಸೇನಾ ಸಂಘರ್ಷ, ಹೋರಾಟ ರಥಯಾತ್ರೆ, ಶೋಭಾಯಾತ್ರೆ,ಕಾನೂನು ಹೋರಾಟ, ಧರ್ಮ ಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನ ನಡೆಯುತ್ತಲೇ ಇದೆ.
ಪ್ರತಿವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ -2024 ನವೆಂಬರ್ 4 ರಿಂದ ನವೆಂಬರ್ 10 ರ ವರೆಗೆ ನಡೆಯಲಿದ್ದು . ನವೆಂಬರ್ 4- ಮಾಲಾ ಧಾರಣ ,ನವೆಂಬರ್ 7- ದತ್ತ ದೀಪೋತ್ಸವ ನಡೆಯಲಿದೆ
ನವೆಂಬರ್ ೨- ಪಡಿ ಸಂಗ್ರಹ ( ಭೀಕ್ಷಾಟನೆ ) ನವೆಂಬರ್ 10- ಚಿಕ್ಕಮಗಳೂರಲ್ಲಿ ಧರ್ಮ ಸಭೆ, ಶೋಭಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆ ನಡೆಯಲಿದೆ .ಈ ರೀತಿ ಕಾರ್ಯಕ್ರಮ ಆಯೋಜನೆಯಾಗಿದ್ದು ನವೆಂಬರ್ 10 ಕ್ಕೆ ಜರುಗುವ ಧರ್ಮ ಸಭೆಗೆ ಮುಖ್ಯ ಅತಿಥಿಯಾಗಿ ಹಿಂದೂ ಸಿಂಹಿಣಿ, ಪ್ರಖರ ಹಿಂದೂವಾದಿ, ಹೈದ್ರಾಬಾದ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಓವೈಸಿ ವಿರುದ್ಧ ತೊಡೆ ತಟ್ಟಿದ್ದ ಶ್ರೀಮತಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ, ಹಿಂದೂರಾದಿ ಶ್ರೀ ಸಿ. ಟಿ. ರವಿ, ಮಾಜಿ ಸಂಸದ, ಲೇಖಕ, ಅಪ್ಪಟ ಹಿಂದುವಾದಿ ಪ್ರತಾಪ್ ಸಿಂಹ ಧರ್ಮ ಸಭೆಯಲ್ಲಿ ಭಾಗವಹಿಸಲಿದ್ದು ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದ್ ಮುತಾಲಿಕರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ. ಎಂದು ಶ್ರೀ ರಾಮ ಸೇನೆಯ ಮುಖಂಡ ಆನಂದ್ ಶೆಟ್ಟಿ ಅಡ್ಯಾರ್ ತಿಳಿಸಿದರು