ಚಿನ್ನಾಭರಣ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

Spread the love

ಚಿನ್ನಾಭರಣ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

ಬಂಟ್ವಾಳ: ಭಟ್ಕಳದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಅನುಮಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೋಲಿಸರು ಬಂಧೀಸಿದ್ದಾರೆ.

ಜುಲೈ 26ರಂದು ಪ್ರಕರಣದ ಪಿರ್ಯಾದಿದಾರ ಪಿ ಎಸ್ ಐ ಚಂದ್ರಶೇಖರ್ ಹಚ್ ವಿ ರವರು ಬಾತ್ಮಿದಾರರಿಂದ ಬಂಟ್ವಾಳ ರೈಲ್ವೆ ನಿಲ್ದಾಣ ದ ದ್ವಾರದ ಬಳಿ ಓರ್ವ ವ್ಯಕ್ತಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಸಂಶಯ ವಾಗಿ ಸುತ್ತಾಡುದ್ದಾನೆಂದು ಬಂದ ಖಚಿತ ವರ್ತಮಾನದಂತೆ ಠಾಣೆಯಿಂದ ಅಪರಾಧ ಪತ್ತೆ ವಿಭಾಗದ ಪಿ ಎಸ್ ಐ ಹರೀಶ್ ಎಚ್ ಆರ್ ಮತ್ತು ಸಿಬ್ಬಂದಿಗಳೊಂದಿಗೆ ಬಂಟ್ವಾಳ ರೈಲ್ವೆ ನಿಲ್ದಾಣದ ದ್ವಾರದ ಬಳಿ ತಲುಪಿದಾಗ ಒರ್ವ ವ್ಯಕ್ತಿ ಪೊಲೀಸ್ ರನ್ನು ಕಂಡು ಆತನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದವನ್ನು ಹಿಡಿದುಕೊಂಡು ವಿಚಾರಿಸಿದಾಗ ಅವನ ಹೆಸರು ವಿಳಾಸದ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ನೀಡದೆ ಇದ್ದು ಈತನ ಕೈಯಲ್ಲಿ ಇದ್ದ ಬ್ಯಾಗ್ ನ್ನು ತೆರದು ನೋಡಲಾಗಿ ಬೆಳ್ಳಿಹಾಗೂ ಚಿನ್ನ ಆಭರಣಗಳು ಹಾಗೂ 52390 ರೂ ನಗದು ಹಣ ಕಂಡು ಬಂದಿದೆ

ಇವುಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ಯಾ ದಾಖಲಾತಿಯನ್ನು ನೀಡದೆ ನೀಡದಿದ್ದು ಆರೋಪಿತನನ್ನು ಇನ್ನು ಕೂಲಂಕುಶವಾಗಿ ವಿಚಾರಿಸಿದಾಗ ಆರೋಪಿತನು ಭಟ್ಕಳ ತಾಲೂಕು ಶಿರಾಲಿ ಎಂಬ ಮನೆಯಿಂದ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಹಾಗೂ ಈ ವಿಚಾರ ಕ್ಕೆ ಸಂಬಂಧಿಸಿದಂತೆ ಭಟ್ಕಳ ಗಾಮ್ರಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂಬ ವಿಚಾರ ತಿಳಿದು ಬಂದಿರುತ್ತ್ತದೆ. ಸದ್ರಿ ಆರೋಪಿ& ಆತನ ಬಳಿಯಿದ್ದ ಆಭರಣಗಳನ್ನು ಹಾಗೂ ನಗದು ಹಣವನ್ನು ಸ್ವಾದೀನ ಪಡಿಸಿ ಕೊಂಡಿದ್ದು ಬೆಳ್ಳಿಯ ತೂಕ:123.770 ಗ್ರಾಮ್ ಬೆಲೆ 5445 ರೂ , ಚಿನ್ನದ ತೂಕ 108,750 ಗ್ರಾಮ್ ಆಗಿದ್ದು ಮೌಲ್ಯ 3,05,043 ರೂ ಆಗಿರುತ್ತದೆ.

ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ 39.98ಗಾಂ ಚಿನ್ನಾಭಾರಣ ನಾನು ಅಡವಿರಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ .ಅದನ್ನು ಸಹ ಕೂಡಾ ವಶಕ್ಕೆ ಪಡೆಯಲಾಗಿರುತ್ತದೆ. ಒಟ್ಟು 4,75,021 ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ 52390 ರೂ ನಗದು ಹಣವನ್ನು ವಶಕ್ಕೆಪಡೆಯಲಾಗಿರುತ್ತದೆ
ಈ ಕಾರ್ಯಾಚರಣೆ ಯಲ್ಲಿ ASP ಋಷಿಕೇಶ ಸೊನವಾಣೆ ರವರುಗಳ ಸೂಕ್ತ ಸಲಹೆ ಸೂಚನೆ ಯಂತೆ,T.D ನಾಗರಾಜ್ ವೃತ್ತ ನಿರೀಕ್ಷರು ಬಂಟ್ವಾಳ ವೃತ್ತ, ಚಂದ್ರಶೇಖರ್ ಪಿ ಎಸ್ ಐ ಬಂಟ್ವಾಳ ನಗರ ಪೊಲೀಸ್ ಠಾಣೆ,ಹರೀಶ್ ಎಮ್ ಆರ್ (ಅಪರಾಧ ವಿಭಾಗ )Prob.PSI SOWMYA J ಸಿಬ್ಬಂದಿಯವರಾದ ASI ಸಂಜೀವ ಕೆ ,ಜಿನ್ನಪ್ಪಗೌಡ HC ಚೋಮಾ ಸುರೇಶ್ , PC ಉಮೇಶ್ ಹಿರೇಮಠ ,ಮಲ್ಲಿಕಸಾಬ, ಕುಮಾರ ಹ ಕುರಿ ,ಸದಾಶಿವ ದೊಡ ಪಾಲ್ಗೊಂಡಿರುತ್ತಾರೆ.


Spread the love