ಚುನಾವಣಾ ಪ್ರಚಾರಕ್ಕೆ ಸುವಿಧಾದಲ್ಲಿ ಅನುಮತಿ ಅಗತ್ಯ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Spread the love

ಚುನಾವಣಾ ಪ್ರಚಾರಕ್ಕೆ ಸುವಿಧಾದಲ್ಲಿ ಅನುಮತಿ ಅಗತ್ಯ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

ಉಡುಪಿ: 15-ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಗೆ ಸಂಬಂದಿಸಿದಂತೆ ರಾಜಕೀಯ ಪ್ರಚಾರಕ್ಕೆ ಪೂರಕವಾದ ಅನುಮತಿಗಾಗಿ ಅರ್ಜಿಯನ್ನು ಸುವಿಧಾ ಮೂಲಕವೇ ಸಲ್ಲಿಸಿ, ಪಡೆಯಬಹುದಾಗಿದೆ

ಮಾನ್ಯತೆ ಪಡೆದ ರಾಜಕೀಯ ಪಕ್ಷದ ಪ್ರಚಾರದ ಪ್ರಚಾರ ಸಾಮಗ್ರಿಗಳನ್ನು ಸಾಗಿಸಲು ವಾಹನ ಅನುಮತಿ, ಪಕ್ಷ ವೀಡಿಯೊ ವ್ಯಾನ್ ಅನುಮತಿ , ಸ್ಟಾರ್ ಪ್ರಚಾರಕರು ಮತ್ತು ಮಾನ್ಯತೆ ಪಡೆದ ಪಕ್ಷದ ಪದಾಧಿಕಾರಿಗಳಿಗೆ ವಾಹನ ಅನುಮತಿಯನ್ನು ನೀಡುವ ಅಧಿಕಾರವನ್ನು ಮುಖ್ಯ ಚುನಾವಣಾಧಿಕಾರಿಗೆ ನೀಡಲಿದ್ದಾರೆ.

ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಅರ್ಜಿ, ವಾಹನ ಪರವಾನಗಿಗಾಗಿ (ಜಿಲ್ಲೆಗಳ ಮಧ್ಯೆ), ಮಾನ್ಯತೆ ಪಡೆದ ರಾಜಕೀಯ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ವಾಹನ ಅನುಮತಿ, ಏರ್ ಬಲೂನ್ಗಳಿಗೆ ಅರ್ಜಿ ಹಾಗೂ ವೀಡಿಯೊ ವ್ಯಾನ್ಗಳಿಗಾಗಿ ಅನುಮತಿ ನೀಡಲು ಜಿಲ್ಲಾ ಚುನಾವಣಾಧಿಕಾರಿಗಳು ನೀಡಲಿದ್ದಾರೆ.

ಮನೆ-ಮನೆಗೆ ಪ್ರಚಾರಕ್ಕಾಗಿ ಅರ್ಜಿ, ಧ್ವನಿವರ್ಧಕ ಪರವಾನಗಿಗಾಗಿ, ಪಕ್ಷದ ತಾತ್ಕಾಲಿಕ ಕಛೇರಿಯನ್ನು ತೆರೆಯಲು, ಕರಪತ್ರ ವಿತರಣೆಗಾಗಿ, ಲೌಡ್ ಸ್ಪೀಕರ್ನೊಂದಿಗೆ ಸಭೆ ನಡೆಸಲು ಮತ್ತು ಲೌಡ್ ಸ್ಪೀಕರ್ ಇಲ್ಲದೆ ಸಭೆ ನಡೆಸಲು, ಸ್ಟ್ರೀಟ್ ಕಾರ್ನರ್ ಮೀಟಿಂಗ್ಗೆ ಲೌಡ್ ಸ್ಪೀಕರ್ ಬಳಸಲು, ಮೆರವಣಿಗೆಯಲ್ಲಿ ನಡೆಸಲು, ಲೌಡ್ ಸ್ಪೀಕರ್ ಬಳಕೆ, ಬ್ಯಾನರ್ ಮತ್ತು ಧ್ವಜಗಳನ್ನು ಪ್ರದರ್ಶಿಸಲು, ಧ್ವನಿವರ್ಧಕದೊಂದಿಗೆ ವಾಹನ ಪರವಾನಗಿ ಪಡೆಯಲು, ಪಕ್ಷ/ಪಕ್ಷದ ಕಾರ್ಯಕರ್ತರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಾಹನ ಪಡೆಯಲು, ವಾಹನ ಪರವಾನಗಿಗಾಗಿ, ಅಭ್ಯರ್ಥಿಗೆ ಸಂಪೂರ್ಣ ಅಸೆಂಬ್ಲಿ ಪ್ರದೇಶಕ್ಕಾಗಿ ಒಂದು ವಾಹನದ ಪರವಾನಿಗೆಗೆ, ಅಭ್ಯರ್ಥಿ ಚುನಾವಣಾ ಏಜೆಂಟ್ಗಾಗಿ ಸಂಪೂರ್ಣ ಅಸೆಂಬ್ಲಿ ಪ್ರದೇಶಕ್ಕೆ ತೆರಳಲು ಒಂದು ವಾಹನಕ್ಕಾಗಿ ಅನುಮತಿ, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನಕ್ಕಾಗಿ ಅನುಮತಿ ಪಡೆಯಲು, ರೋಸ್ಟ್ರಮ್/ಬ್ಯಾರಿಕೇಡ್ ನಿರ್ಮಾಣಕ್ಕಾಗಿ, ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ಪ್ರಚಾರ/ಪ್ರಚಾರ ಸಾಮಗ್ರಿಗಳನ್ನು ಸಾಗಿಸಲು ವಾಹನ ಅನುಮತಿ, ಪೋಸ್ಟರ್, ಹೋರ್ಡಿಂಗ್ ಮತ್ತು ಯುನಿಪೋಲ್ ಅನ್ನು ಪ್ರದರ್ಶಿಸಲು ಅರ್ಜಿ, ಸಂಪೂರ್ಣ ಪಿಸಿ ಗಾಗಿ ಒಂದು ವಾಹನ, ಸೇರಿದಂತೆ ಮತ್ತಿತರರ ಅನುಮತಿಯನ್ನು ನೀಡುವ ಅಧಿಕಾರವನ್ನು ರಿಟರ್ನಿಂಗ್ ಆಫೀಸರ್/ಸಹಾಯಕ ರಿಟರ್ನಿಂಗ್ ಆಫೀಸರ್ ನೀಡಿದೆ.

ಜಾತ್ರೆ, ಹಬ್ಬ, ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅನುಮತಿಗಳನ್ನು ಸಂಬಂಧ ಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಬೈಂದೂರು ವಿಧಾನಸಭಾ ಕ್ಷೇತ್ರದ ಮಂಜುನಾಥ್, ಕಂಟ್ರೋಲ್ ರೂಮ್ ನಂಬರ್ 18004252099, ಕುಂದಾಪುರ ವಿಧಾನಸಭಾ ಕ್ಷೇತ್ರದ ರಶ್ಮಿ ಎಸ್ ಆರ್. ಮೊ.ನಂ:9620002000, ಉಡುಪಿ ವಿಧಾನಸಭಾ ಕ್ಷೇತ್ರದ ಶಿವಪ್ರಸಾದ್ ಗಾಂವ್ಕರ್ ಮೊ.ನಂ:0820-2530100, ಕಾಪು ವಿಧಾನಸಭಾ ಕ್ಷೇತ್ರದ ಜಯಾ ಮಾಧವ್ ದೂ.ಸಂಖ್ಯೆ: 0820-2541555 ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಡಾ. ಔದ್ರಾಮ್ ದೂ.ಸಂಖ್ಯೆ: 08258-200118 ಕಛೇರಿಯಲ್ಲಿ SINGLE WINDOW ಕಮಿಟಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ. ಇವುಗಳಿಗೆ SUVIDHA ಅನ್ವಯಿಸುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love