ಚೈತನ್ಯ ವಿಶೇಷ ಮಕ್ಕಳೊಂದಿಗೆ ನೆಹರೂ ಜನ್ಮದಿನ ಸಂಭ್ರಮಿಸಿದ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ

Spread the love

ಚೈತನ್ಯ ವಿಶೇಷ ಮಕ್ಕಳೊಂದಿಗೆ ನೆಹರೂ ಜನ್ಮದಿನ ಸಂಭ್ರಮಿಸಿದ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ

ಕುಂದಾಪುರ: ಇಂದಿನ ಸಮಾಜದಲ್ಲಿ ಯಾರು ಬುದ್ದಿಮಾಂದ್ಯರು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ನಿಜವಾಗಿಯೂ ಹೇಳಬೇಕೆಂದರೆ ಈ ಮಕ್ಕಳು ನಮಗಿಂತ ಹೆಚ್ಚು ಉತ್ತಮರು. ನಮ್ಮ ಮನಸಲ್ಲಿ ವೈಶಮ್ಯ, ಆಸೆಗಳಿವೆ. ನಾವು ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಮನಸ್ಸಿಗಿಂತ ನೂರು ಪಾಲು ಈ ಮಕ್ಕಳ ಮನಸ್ಸು ಶುದ್ದವಿದೆ. ಚೈತನ್ಯ ವಿಶೇಷ ಶಾಲೆಯಲ್ಲಿ ಆಚರಿಸಿದ ಮಕ್ಕಳ ದಿನಾಚರಣೆ ನನ್ನ ಜೀವನದಲ್ಲಿ ಮರೆಯಲಾಗದ ದಿನ. ಇದೊಂದು ಅರ್ಥಪೂರ್ಣವಾದ ಮಕ್ಕಳ ದಿನಾಚರಣೆ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ) ಕಾರ್ಯದರ್ಶಿ, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಬಿ.ಎಂ. ಸಂದೀಪ್ ಹೇಳಿದರು.

ಅವರು ಬುಧವಾರ ಕುಂದಾಪುರದ ಚೈತನ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ ಹಾಗೂ ಕುಂದಾಪುರನ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ ಆಯೋಜಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶೇಷ ಚೇತನರು ದೇವರ ಮಕ್ಕಳು. ಅವರಲ್ಲಿರುವ ಮುಗ್ಧತೆ, ಸ್ವಚ್ಛಂದ ಮನಸ್ಸು ನಮ್ಮಲ್ಲಿ ಇರುವುದಿಲ್ಲ. ವಿಶೇಷ ಮಕ್ಕಳನ್ನು ಆರೈಕೆ ಮಾಡುತ್ತಿರುವ ಇಂತಹ ಶಾಲೆಗಳ ಶಿಕ್ಷಕರ ಕಾರ್ಯ ಶ್ಲಾಘನೀಯ. ಜವಾಹರಲಾಲ್ ನೆಹರೂವರು ಗಾಂಧೀಜಿಯೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿವರು. ಬಳಿಕ 17 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಈ ದೇಶವನ್ನು ಮನ್ನಡೆಸಿದವರು. ಬಹಳಷ್ಟು ಕಠಿಣ ಪರಿಸ್ಥಿತಿಯಲ್ಲೂ ಈ ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟವರು ಎಂದರು.

ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಮಾತನಾಡಿದರು. ಇದೇ ವೇಳೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ರಾಜ್ಯ ಸಂಚಾಲಕ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ದಿನಾಚರಣೆಯಾದ ನ.14ರಂದೇ ಹುಟ್ಟಿದ ಇಲ್ಲಿನ ವಿದ್ಯಾರ್ಥಿ ಅಭಯ್ ಹುಟ್ಟುಹಬ್ಬವನ್ನು ಪೋಷಕರೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಇದಕ್ಕೂ ಮೊದಲು ವಿಶೇಷಚೇತನ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಂಘಟನೆಯ ಸಹ ಸಂಯೋಜಕರಾದ ಮೇರಿ, ವಾಣಿ ಶೆಟ್ಟಿ, ಗೌರವ ಸಲಹೆಗಾರರಾದ ಡಾ| ಸುನೀತಾ ಶೆಟ್ಟಿ, ಚೈತನ್ಯ ಶಾಲೆಯ ಆಡಳಿತ ವರ್ಗದ ಸುಜಾತಾ, ಶೋಭಾ, ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಸಂಘಟನೆಯ ಜಿಲ್ಲಾ ಸಂಯೋಜಕ ರೋಶನಿ ಒಲಿವೆರಾ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love