ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

Spread the love

ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಸೈಬೀರಿಯ ದೇಶದ ಬೆಲ್ಗ್ರೆಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಳ್ಳಿಯ ಕೆಸರುಗದ್ದೆಯ ಮಕ್ಕಳ ಆಟದ ಚಿತ್ರಕ್ಕೆ ಉಡುಪಿಯ ಪ್ರಖ್ಯಾತ ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಫೋಟೋ ಜರ್ನಲಿಸಂ ವಿಭಾಗದಲ್ಲಿ FIAP GOLD ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ .

ವಿಶ್ವದ ವಿವಿಧ ದೇಶಗಳಿಂದ ಬಹಳಷ್ಟು ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿದ್ದವು. ಪೋಕಸ್ ರಾಘು ಅವರಿಗೆ ಇಪ್ಪತ್ನಾಲ್ಕನೆ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.

ಪೋಕಸ್ ರಾಘು ಹಳ್ಳಿಗಾಡಿನ ಪ್ರದೇಶದವರಾಗಿದ್ದು ಹಳ್ಳಿ ಗಾಡಿನ ಜನಪದ ಸೊಗಡಿನ ಕೆಸರುಗದ್ದೆಯ ಚಿತ್ರಣವನ್ನು ಸೆರೆಹಿಡಿದಿದ್ದಾರೆ. ರಾಘು ಅವರ ಈ ಸಾಧನೆಗಳನ್ನು ಗುರುತಿಸಿ ನಿಕೋನ್ ಸಂಸ್ಥೆ ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ಹಳ್ಳಿ ಪ್ರತಿಭೆಯ ಪರಿಶ್ರಮಕ್ಕೆ ದೊಡ್ಡ ಗೌರವವನ್ನು ನೀಡಿದೆ. ಉಡುಪಿಯ ಖ್ಯಾತ ಛಾಯಾಗ್ರಾಹಕ ಗುರುದತ್ ಅವರ ಶಿಷ್ಯರಾಗಿದ್ದಾರೆ


Spread the love