ಛಾಯಾಗ್ರಾಹಕ ಸಂಘಟನೆಗೆ ಬೆಳೆಯುವ ಶಕ್ತಿ ಇದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಸದಸ್ಯರಿಗೆ ಸಂಕಷ್ಟಗಳಾದಾಗ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆಯಾಗಿ ಸಂಘಟನೆ ರೂಪುಗೊಳ್ಳಬೇಕು ಸಂಸದ ಕೋಟ ಸಲಹೆ
ಕುಂದಾಪುರ: ನಿಸ್ವಾರ್ಥವಾದ ಚಟುವಟಿಕೆ ಮತ್ತು ಶ್ರಮ ಇದ್ದಾಗ ಸಂಘಟನೆಗಳು ಬಲಗೊಳ್ಳುತ್ತವೆ. ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಛಾಯಾಗ್ರಾಹಕರ ಸಂಘವನ್ನು ಯಾರೂ ತಡೆಯುವವರೇ ಇಲ್ಲ ಎನ್ನುವ ಮಟ್ಟಿಗೆ ಬೆಳೆಯುವ ಶಕ್ತಿ, ಸಾಮರ್ಥ್ಯ ಈ ಸಂಘಟನೆಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ದ.ಕ, ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಕುಂದಾಪುರ-ಬೈಂದೂರು ವಲಯದ ನೇತೃತ್ವದಲ್ಲಿ ಕೋಟೇಶ್ವರ ಸಮೀಪದ ಕಟ್ಕೆರೆಯಲ್ಲಿ ಭಾನುವಾರ ಸಂಘದ ಸದಸ್ಯರಿಗಾಗಿ ಜರುಗಿದ ಕೆಸರು ಗದ್ದೆ ಕ್ರೀಡಾಕೂಟ ಕೆಸರಿನಲ್ಲಿ ಕಲರವ-2024 ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯ ಹಿಂದೆ ಒಂದು ಶಕ್ತಿ ಇರಬೇಕು. ಯಾವುದೇ ಗುರಿ ಇಲ್ಲದೇ ಸಂಘಟನೆ ಮಾಡಿದ ಅನೇಕ ಉದಾಹಣೆಗಳು ನಮ್ಮ ನಡುವೆ ಇವೆ. ವೃತ್ತಿಗಿಂದ ಹೆಚ್ಚಾಗಿ ಶಕ್ತಿ ಇರಬೇಕು. ಛಾಯಾಗ್ರಾಹಕ ಕುಟುಂಬಗಳಿಗೆ ಸಂಕಷ್ಟಗಳಾದಾಗ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆಯಾಗಿ ಸಂಘಟನೆ ರೂಪುಗೊಳ್ಳಬೇಕು ಎಂದು ಕೋಟ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಗಣೇಶ್ ಕಿಣಿ, ನಿವೃತ್ತ ದೈಹಿಕ ಶಿಕ್ಷಕ ಪ್ರಕಾಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕೋಣಿ ಗ್ರಾ.ಪಂ ಅಧ್ಯಕ್ಷ ಅಶೋಕ ಭಂಡಾರಿ, ಎಸ್ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಛಾಯಾಗ್ರಾಹಕ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ರಂಜಿತ್ ಶಬರಿ ಹಾಗೂ ಭಾರದ್ವಾಜ್, ಕುಂದಾಪುರ-ಬೈಂದೂರು ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ, ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ, ಕೋಶಾಧಿಕಾರಿ ಹರೀಶ್ ಪೂಜಾರಿ, ಪ್ರಮುಖರಾದ ನಾಗರಾಜ್ ರಾಯಪ್ಪನಮಠ, ದೊಟ್ಟಯ್ಯ ಪೂಜಾರಿ, ಶ್ರೀಧರ ಹೆಗ್ಡೆ, ದಿನೇಶ್ ಗೋಡೆ, ಚಂದ್ರಕಾಂತ್, ಸುರೇಶ್ ಮೊಳಹಳ್ಳಿ, ಅಮೃತ್ ಬೀಜಾಡಿ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯಮಟ್ಟದ ಕ್ರೀಡಾ ಪ್ರತಿಭೆ ಸೃಜನಾ ಎಸ್.ಪಿ ಅವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ಶೇಟ್ ಪ್ರಾರ್ಥಿಸಿದರು. ಎಸ್ಕೆಪಿಎ ಕುಂದಾಪುರ- ಬೈಂದೂರು ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ ಸ್ವಾಗತಿಸಿದರು. ಕಿರಣ್ ಬಿಜೂರು ಕಾರ್ಯಕ್ರಮವನ್ನು ನಿರೂಪಿಸಿದರು.