ಛಾಯಾದೇವಿ ಕೃಷ್ಣಮೂರ್ತಿಯವರಿಗೆ “ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ

Spread the love

ಛಾಯಾದೇವಿ ಕೃಷ್ಣಮೂರ್ತಿಯವರಿಗೆ “ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ

ಯುಎಇ : ಕರ್ನಾಟಕ ಸಂಘ ಶಾರ್ಜಾ ಇವರ ಆಶ್ರಯದಲ್ಲಿ 69ನೇ ಕರ್ನಾಟಕ ರಾಜೋತ್ಸವ ಮತ್ತು ಸಂಘದ 22ನೇ ವಾರ್ಷೀಕೋತ್ಸವದ ಮಯೂರ ವಿಶ್ವಮಾನ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನವೆಂಬರ್ 16 ರಂದು ಶಾರ್ಜಾದ ಇವಾನ್ ಹೋಟೆಲ್ ನಲ್ಲಿ ಅದ್ದೂರಿಂದ ನಡೆಯಿತು.

ಈ ವರ್ಷದ ಕಾರ್ಯಕ್ರವು ವಿಶೇಷವಾಗಿ ಮಹಿಳೆಯರಿಗಾಗಿ ಅದರಲ್ಲೂ ಅಮ್ಮಂದಿಯರಿಗಾಗಿ ಗೌರವ ನೀಡಿವ ಉದ್ದೇಶದಿಂದ ಅಮ್ಮಂದಿಯರ ಪ್ರತಿಭೆ ಅನಾವರಣಗೊಳಿಸುವ ಸಲುವಾಗಿ ಅಮ್ಮ ನೀ ಕುಣಿದಾಗ ಎನ್ನುವ ಸುಂದರ ಕಾರ್ಯಕ್ರಮ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅಧ್ಬತ ಮೆರಗು ತಂದಿತು.

ಪ್ರತಿ ವರ್ಷದಂತೆ ಯು ಎ ಇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮಯೂರ ವಿಶ್ವಮಾನ್ಯ ಅಂತರಾಷ್ಟ್ರೀಯ ಪ್ರಶಸ್ತಿ ಈ ವರ್ಷ ಸಮಾಜ ಸೇವೆಗಾಗಿ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ – ಯು.ಎ.ಇ. ಇಂಚಾರ್ಜ್ – ಡಿಸ್ಟ್ರೆಸ್ ಸಮಿತಿ ಶ್ರೀಮತಿ ಛಾಯದೇವಿ ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಅಂತೇಯೇ ಸಂಘದ ಸಂಘಟನೆಗಾಗಿ ಶಾರ್ಜಾ ಸಂಘದ ಶ್ರೀ ಮಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಹಾಗೆಯೇ ಶಾಸ್ತ್ರೀಯ ನೃತ್ಯ ಕ್ಷೇತ್ರದ ಶ್ರೀಮತಿ ರೋಹಿಣಿ ಅನಂತ ಮತ್ತು ರಂಗಭೂಮಿ ಕ್ಷೇತ್ರದ ಶ್ರೀಮತಿ ದೀಪ್ತಿ ದಿನ್ ರಾಜ್ ಶೆಟ್ಟಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಅಮ್ಮ ನೀ ಕುಣಿದಾಗ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಹತ್ತು ಸ್ಪರ್ಧಾಳುಗಳು ಇದ್ದು ಅದರ್ರಲ್ಲಿ ಪ್ರಥಮ ಸ್ಥಾನ ಶುಭ ಮನೋಜ್ ಮತ್ತು ದ್ವೀತಿಯ ಸ್ಥಾನ ಅಕ್ಷತಾ ಪ್ರವೀಣ್ ಕುಲಾಲ್ ಮತ್ತು ತೃತೀಯ ಸ್ಥಾನವನ್ನು ಶ್ವೇತಾ ಹೀತೇಶ್ ಪಡೆದುಕೊಂಡರು. ಅಂತೇಯೇ ಉತ್ತಮ ಮಾರ್ಗದರ್ಶಕರಾಗಿ ಶ್ರೀಮತಿ ರೂಪಾ ಕಿರಣ್ ಪಡೆದುಕೊಂಡರು.

ಈ ಕಾರ್ಯಕ್ರಮದ ತೀರ್ಪುಗಾರರಾಗಿ ಶ್ರೀಮತಿ ಗೋಪಿಕಾ ಮಯ್ಯ ಮತ್ತು ಶ್ರೀಮತಿ ಮಾಲಿನಿ ಗೌರಿ ಮತ್ತು ಶ್ರೀಮತಿ ರೋಹಿಣಿ ಅನಂತ ಅವರು ನಿರ್ವಹಿಸಿದರು. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.

 
ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಆರತಿ ಅಡಿಗ ಮತ್ತು ದೀಕ್ಷಾ ರೈ ಮತ್ತು ಶ್ರೀಮತಿ ಸುವರ್ಣ ಸತೀಶ್ ಮಾಡಿದರು. ಪ್ರಾಸ್ತಾವಿಕ ಭಾಷಣವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಮಾಡಿದರು. ಶಾರ್ಜಾ ಸಂಘದ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ ಶೆಟ್ಟಿ ಸ್ವಾಗತ ಮಾಡಿದರು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಘ್ನೇಶ್ ಕುಂದಾಪುರ ವಂದನಾರ್ಪನೆ ಮಾಡಿದರು.


Spread the love
Subscribe
Notify of

0 Comments
Inline Feedbacks
View all comments