ಜ. 21-26: ವಾರ್ಷಿಕ ಮಹೋತ್ಸವಕ್ಕೆ ಸಿದ್ದಗೊಂಡ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು.
ಅವರು ಬಸಿಲಿಕಾದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದರು
ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 45 ಹಾಗೂ ಕನ್ನಡ ಭಾಷೆಯಲ್ಲಿ 3 ಹೀಗೆ ಒಟ್ಟು 48 ದಿವ್ಯ ಬಲಿ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಬೆಳ್ತಂಗಡಿ, ಪುತ್ತೂರು, ಮಂಗಳೂರು, ಶಿವಮೊಗ್ಗ ಹಾಗೂ ನವಿ್ಮೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸುವರು. ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 64 ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಬಸಿಲಿಕದ ಬಲ ಬದಿಯಲ್ಲಿ ಅಂದರೆ ‘ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೈಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ದೇವಾಲಯದ ಎಡಬದಿಯಲ್ಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳಿಗೆ ಕುಡಿಯಲು ಶುದ್ದ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ ಐದು ಸ್ಥಳದಲ್ಲಿ ಮಾಡಲಾಗುವುದು. ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರುನಿವಾಸದ ಎಡ ಬದಿಯಲ್ಲಿ 20 ಶೌಚಾಲಯಗಳು ಇವೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳಿವೆ. ಎಂದರು.
ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬಂಧಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ಸುರಕ್ಷಿತೆಯ ಹೊಣೆ ನಿರ್ವಹಿಸಲಿರುವರು. ಯಾತ್ರಿರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹರಕ್ಷದಳ ಹಾಗೂ ಇತರ ಸಿಬಂಧಿಗಳು ನಿರ್ವಹಿಸಲಿರುವರು. ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು, ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ, ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಾಕಾಶ ಕಲ್ಪಿಸಲಾಗಿದೆ. ಕೊಡಂಗೆ ಶ್ರೀ ರೋಬರ್ಟ್ ನೊರೋನ್ಹರವರ ತನಕ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅದರ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ. ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲಾರೆನ್ಸ್ ಧರ್ಮಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲಾರೆನ್ಸ್ ಹೈಸ್ಕೊಲ್ ಶಾಲಾ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ.
ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು – ಅತ್ತೂರು ಕ್ವಾನ್ವೆಂಟ್ ಮಾರ್ಗವಾಗಿ ತಂದು ಎಡಬದಿಯ ಪಂಚಾಯತ್ ಶೌಚಾಲಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯ BSNL MOBILE TOWER ಬಳಿ ಮುಂದೆ ಸಾಗಿ ಎಡಕ್ಕೆ ತಿರುಗಿ V.I.P. ಹಾಗೂ ಇತರ PASS HOLDER ಗಳಿಗಾಗಿ ನಿರ್ಮಿಸಿದ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆಗೊಳಿಸಲಾಗಿದೆ. ವೆಹಿಕಲ್ ಪಾಸ್ ಹೊಂದಿದ ವಾಹನಗಳು, ನಿಲುಗಡೆ ಮಾಡಿದ ವಾಹನಗಳಿಗೆ ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೋಲಿಸ್ ಸಿಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕ್ಸಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ.
ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲಾಗಿದೆ. ಬಸಿಲಿಕಾದ ವಠಾರದಲ್ಲಿ ಮೊಂಬತ್ತಿ ಮಾರಟ ಸಂಪೂರ್ಣವಾಗಿ ನಿಷೇದಿಸಲಾಗಿದೆ. ಸಾರ್ವಜನಿಕರ ಹಾಗೂ ಭಕ್ತಾಧಿಗಳ ಸುಗಮ ಸಂಚಾರಕ್ಕಾಗಿ ದೂಪದಕಟ್ಟೆಯಿಂದ ಪ್ರಸಾದ್ ಟೈಲರ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆಯ ಅಂಚಿನಿಂದ ಕ್ರಮವಾಗಿ ಕನಿಷ್ಟ 5 ಅಡಿ ಜಾಗ ಬಿಟ್ಟು ಅಂಗಡಿ ಮುಂಗಟ್ಟು ನಿರ್ಮಿಸುವಂತೆ ಸ್ಥಳೀಯ ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದು ಸುರಕ್ಷೆಯ ದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಹಾದುಹೋಗುವ ಯಾವುದೇ ವ್ಯಕ್ತಿಗೆ ದೈಹಿಕ ಕಿರುಕುಳ ಆಗದಂತೆ ತಡೆಯಲು ಅತೀ ಆವಶ್ಯಕವಾಗಿದೆ.
ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಅತೀ ದೊಡ್ಡ ಹೊಸ ಮೂರ್ತಿಯನ್ನು ಬಸಿಲಿಕದ ಬಲಬದಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಬಿಟ್ಟರೆ ಬೆರೆಲ್ಲೂ ಕಾಣಸಿಗುವುದಿಲ್ಲ. ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಹೊಸ ಮೂರ್ತಿಯನ್ನು ನವ್ಮಿೂೀ ಸಂತ ಲಾರೆನ್ಸರ ಪುಷ್ಕರಣಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಬಸಿಲಿಕದಲ್ಲಿ ಪುಷ್ಕರಣಿ ಹಾಗೂ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಎಕಶಿಲಾ ಪ್ರತಿಮೆ ಇಲ್ಲಿ ನವ್ಮಿೂ ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೊ, ಆಧ್ಯಾತ್ಮಿಕ ನಿರ್ದೇಶಕ ಉಪಾಧ್ಯಕ್ಷ ವಂ|ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪದಾಧಿಕಾರಿಗಳಾದ ವಂದೀಶ್ ಮಥಾಯಸ್, ಪ್ರಕಾಶ್ ಪಿಂಟೊ, ರಿತೇಶ್ ಪಿಂಟೊ, ರೋಶನ್ ಸಾಲಿಸ್ ಉಪಸ್ಥಿತರಿದ್ದರು.