ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ -ಶರನ್ನವರಾತ್ರಿಯ ಆರನೇ ದಿನದ ಧಾರ್ಮಿಕ ಕಾರ್ಯಕ್ರಮ

Spread the love

ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ -ಶರನ್ನವರಾತ್ರಿಯ ಆರನೇ ದಿನದ ಧಾರ್ಮಿಕ ಕಾರ್ಯಕ್ರಮ

ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ, ಶೃಂಗೇರಿ, ಶಾಖಾ ಮಠ, ಕೋಟೆಕಾರು, ಇಲ್ಲಿ ಶರನ್ನವರಾತ್ರಿಯ ಆರನೇ ದಿನದ ಧಾರ್ಮಿಕ ಕಾರ್ಯಕ್ರಮವನ್ನು ರಾಮರಾಜ ಕ್ಷತ್ರಿಯ ಸೇವಾ ಸಂಘ, ಉಳ್ಳಾಲ ವಲಯ ಇದರ ಅಧ್ಯಕ್ಷರಾದ ಶ್ರೀ ಸೀತಾರಾಮ ಕೊಪ್ಪಲು ಮತ್ತು ಅವರ ಶ್ರೀಮತಿ ಮನೋರಮ ಟಿ.ವಿ. ಇವರುಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಗೊಂಡಿತು.

ಶ್ರೀಮತಿ ಶ್ರೀ ವಿಧ್ಯಾ ಅರವಿಂದ, ಬೆಂಗಳೂರು ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ವೇದಿಕೆಯಲ್ಲಿ, ಶ್ರೀ ಶಂಕರ ಮಠ, ಕೋಟೆಕಾರು ಶಾಖೆ ಇದರ ಧರ್ಮಾಧಿಕಾರಿ ಶ್ರೀ ಬೊಳ್ಳಾವ ಸತ್ಯಶಂಕರ, ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಧುಸೂದನ್ ಅಯರ್, ಉಪಾದ್ಯಕ್ಷರುಗಳಾದ ಶ್ರೀ ವಿಜಯ ಕುಮಾರ್ ವಕೀಲರು, ಶ್ರೀ ಅನಂತಕೃಷ್ಣ ಯಾದವ್, ಕೋಶಾಧಿಕಾರಿ ಡಾ. ಮಾಧವಿ ವಿಜಯ ಕುಮಾರ್, ಮಹಿಳಾ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಪ್ರಪುಲ್ಲದಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೀತಾರಾಮ ಕೊಪ್ಪಲು ದಂಪತಿಗಳಿಗೆ ಧರ್ಮಾಧಿಕಾರಿಯವರು ಮತ್ತು ಡಾ. ಮಾಧವಿ ವಿಜಯ ಕುಮಾರ್ ರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಸೀತಾರಾಮ ಕೊಪ್ಪಲು ರವರು ಮಾತನಾಡಿ, ನಮಗೆ ಕಷ್ಟಗಳು ಬಂದಾಗ ಕಷ್ಟ ನಿವಾರಣೆಗಾಗಿ ನಾವು ಜಗನ್ಮಾತೆಯಾದ ಮಹಾತಾಯಿಯನ್ನು ನೆನೆಯುತ್ತೇವೆ. ಅವಳನ್ನು ಅತೀ ಭಕ್ತಿಯಿಂದ ಸ್ತುತಿಸಿದರೆ ನಮ್ಮೆಲ್ಲಾ ಕಷ್ಟಗಳು ದೂರವಾಗಿ ಸುಖ, ಶಾಂತಿ ನೆಮ್ಮದಿಯ ಜೀವನ ನಮ್ಮದಾಗುದರಲ್ಲಿ ಸಂಶಯವಿಲ್ಲ. ಆದ್ದರಿಂದ ನಾವೆಲ್ಲರೂ ನಿರಂತರವಾಗಿ ಮತ್ತು ವಿಷೇಶವಾಗಿ ಶರನ್ನವರಾತ್ರಿಯ ದಿನಗಳಂದು ಭಕ್ತಿ ಮತ್ತು ಶೃದ್ದೆಯಿಂದ ಶಾರದಾ ಮಾತೆಯನ್ನು ಪೂಜಿಸಿ ಪಾವನರಾಗಬೇಕೆಂದು ತಿಳಿಸಿದರು. ಅಧ್ಯಕ್ಷ ಶ್ರೀ ಮಧುಸೂದನ್ ಆಯರ್ ರವರು ಸ್ವಾಗತಿಸಿ, ಶ್ರೀ ವಿಜಯ ಕುಮಾರ್ ರವರು ಧನ್ಯವಾದ ಸಮರ್ಪಿಸಿದರು.

ನಂತ್ರ ಶ್ರೀ ವಿದ್ಯಾಶಂಕರ ಬೊಳ್ಳಾವ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮವು ನಡೆಯಿತು. ವಾಯ್ಲಿನ್ ನಲ್ಲಿ ಶ್ರೀ ಟಿ.ಜಿ. ಗೋಪಾಲಕೃಷ್ಣನ್, ಮೃದಂಗದಲ್ಲಿ ಶ್ರೀ ಬೊಳ್ಳಪದವು ಯೋಗೀಶ ಶರ್ಮರವರು ಸಹಕರಿಸಿದರು. ಶ್ರೀ ಮಧುಸೂದನ್ ಅಯರ್ ರವರು ಸ್ವಾಗತಿಸಿ, ಶ್ರೀ ವಿಜಯ ಕುಮಾರ್ ರವರು ಧನ್ಯವಾದ ಸಮರ್ಪಿಸಿದರು. ಡಾ. ಪವಿತ್ರ ರವಿ ನಾರಾಯಣ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾ ಮಂಗಳಾರತಿಯೊಂದಿಗೆ ದಿನದ ಕಾರ್ಯಕ್ರಮ ಸಂಪನ್ನಗೊಂಡಿತು.


Spread the love