ಜನತಾ ಕರ್ಫ್ಯೂಗೆ ಖಾಸಗಿ ಸರ್ವಿಸ್ ಮತ್ತು ಸಿಟಿ ಬಸ್ ಮ್ಹಾಲಕರ ಬೆಂಬಲ

Spread the love

ಜನತಾ ಕರ್ಫ್ಯೂಗೆ ಖಾಸಗಿ ಸರ್ವಿಸ್ ಮತ್ತು ಸಿಟಿ ಬಸ್ ಮ್ಹಾಲಕರ ಬೆಂಬಲ

ಮಂಗಳೂರು : ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿ ಮಾ.22ರಂದು ದ.ಕ.ಜಿಲ್ಲಾದ್ಯಂತ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಈ ಮಧ್ಯೆ ಕೊರೋನ ವೈರಸ್ ಹಬ್ಬದಂತೆ ಮಾ.22ರ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ನೀಡಿದ ಕರೆಗೆ ಮಂಗಳೂರು ಸಹಿತ ದ.ಕ.ಜಿಲ್ಲಾದ್ಯಂತ ಸ್ಪಂದನೆ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವಾಗಿ ಮಾ.22ರಂದು ಸಿಟಿ ಮತ್ತು ಸರ್ವಿಸ್ ಬಸ್ ಸ್ಥಗಿತಗೊಳ್ಳಲಿದೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತು ಮಂಗಳೂರು ಪೂರ್ವ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love