ಜನರ ತೀರ್ಪಗೆ ಬದ್ದ: ದಕ ಜಿಲ್ಲಾ ಜೆಡಿಎಸ್

Spread the love

ಜನರ ತೀರ್ಪಗೆ ಬದ್ದ: ದಕ ಜಿಲ್ಲಾ ಜೆಡಿಎಸ್

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಪರ ಜನರು ಒಲವು ವ್ಯಕ್ತ ಪಡಿಸಿದ್ದು ಸಂಪೂರ್ಣವಾಗಿ ಸ್ಪಷ್ಟ ಜನಾದೇಶ ಬಿಜೆಪಿಗೆ ದೊರಕುವ ಅವಕಾಶ ಲಭಿಸಿದೆ. ಈ ಪ್ರಜಾಪ್ರಭುತ್ದಲ್ಲಿ ಜನರ ಅದೇಶಕ್ಕೆ ಜೆಡಿಎಸ್ ಬದ್ಧವಾಗಿದೆ ಎಂದು ದಕ ಜಿಲ್ಲಾ ಜೆಡಿಎಸ್ ಪ್ರತಿಕ್ರಿಯಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ರಾಷ್ಟ್ರ ಮಟ್ಟದಲ್ಲಿ ಹೈಕಮಾಂಡಿನ ನಿರ್ಧಾರವಾಗಿದ್ದು ಈ ನಿರ್ಧಾರವು ರಾಜ್ಯ ಮಟ್ಟದ ನಾಯಕರಲ್ಲಿ ಸ್ಥಳಿಯ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಜಿರ್ಣಿಸಲು ಅಸಾಧ್ಯವಾಗಿತ್ತು. ಇದರಿಂದ ಒಗ್ಗಟ್ಟು ಹೊಂದಾಣಿಕೆ ಇಲ್ಲದೆ ಎರಡು ಪಕ್ಪಕ್ಕೆ ಹೀನಾಯ ಸೋಲು ಅನುಭವಿಸಬೇಕಾಯಿತು. ಇನ್ನೊಂದೆಡೆ ಲೋಕ ಸಭೆ ಹಾಗೂ ವಿಧಾನ ಸಭೆಗೆ ಮಾತ್ರ ಮೈತ್ರಿ ಸೀಮಿತವಾಗಿದ್ದು ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಎರಡು ಪಕ್ಷಗಳ ಹೈಕಮಾಂಡ್ ನಿರ್ಧಾರ ಸ್ಥಳೀಯ ಕಾರ್ಯಕರ್ತರಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ಜೆಡಿಎಸ್ ಬಗ್ಗೆ ಹೇಳುವುದಾದರೆ ಕರ್ನಾಟಕದಲ್ಲಿ ಸುಲಭವಾಗಿ ಎರಡು ಸ್ಥಾನ ಗೆಲ್ಲುವ ಅವಕಾಶ ವಿದ್ದು ತಪ್ಪು ನಿರ್ಧಾರದಿಂದಾಗಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಹಾಸನದಲ್ಲಿ ಮಾಜಿ ಪ್ರದಾನಿ ಎಚ್.ಡಿ ದೇವೆಗೌಡ ಹಾಗೂ ಮಂಡ್ಯದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿದಲ್ಲಿ ಸುಲಭವಾಗಿ ಜಯ ದೊರಕುತ್ತಿತ್ತು ಇದು ಮುಂದಿನ ರಾಜಕೀಯ ಬೆಳವಣಿಗೆಗೆ ಪಕ್ಷಕ್ಕೆ ಮುಂಜಾಗ್ರತೆ ಕೊಟ್ಟಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love