ಈ ಜಗತ್ತನಲ್ಲಿ ನೀರಿಗೆ ಪರ್ಯಾಯವಾಗಿ ಬೇರಾವುದೂ ಇಲ್ಲ, ಮಾನವನಿಗೆ ಕೃಷಿ, ವಾಣಿಜ್ಯ ಬಳಕೆಗೆ ಸೇರಿದಂತೆ ದಿನ ನಿತ್ಯದ ಜೀವನದಲ್ಲಿ ನೀರು ಅತ್ಯಾವಶ್ಯಕ. ಭೂಮಿಯ ಶೇ.70 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದ್ದರೂ ಸಹ, ವಿಶ್ವದಲ್ಲಿರುವ ಶೇ.97 ನೀರು ಸಮುದ್ರದ ಉಪ್ಪಿನಿಂದ ಕೂಡಿದ್ದು, ಮಾನವ ಬಳಕೆಗೆ ಸಾಧ್ಯವಿಲ್ಲ. ಶೇ.2.7 ಮಾತ್ರ ಬಳಕೆಗೆ ಯೋಗ್ಯವಾಗಿದ್ದು ಎನ್ನುವ ಮಾಹಿತಿಯಿದೆ. ಇಂತಹ ಅಮೂಲ್ಯವಾದ ನೀರನ್ನು ಎಲ್ಲರೂ ಮಿತವಾಗಿ ಬಳಸುವುದು ಮಾತ್ರವಲ್ಲದೇ , ಮುಂದಿನ ಪೀಳಿಗೆಗೆ ಉಳಿಸುವುದೂ ಸಹ ಅಗತ್ಯವಾಗಿದೆ.
ನೀರನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇತ್ತೀಚೆಗೆ ಉಡುಪಿಯ ಕಲ್ಯಾಣಪುರದ ಮೋಂಟ್ ರೋಸಾರಿಯೋ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂದ ಸ್ಪರ್ದೆ ಮತ್ತು ಮಳೆ ನೀರು ಉಳಿಸುವ ಕುರಿತು ಮಾದರಿಗಳ ತಯಾರಿಕಾ ಸ್ಪರ್ದೆ ಏರ್ಪಡಿಸಲಾಗಿದ್ದಿತು.
ಸುಮಾರು 50 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ , ವಿವಿಧ ರೀತಿಯಲ್ಲಿ ಮಳೆ ನೀರನ್ನು ಉಳಿಸುವ ಮತ್ತು ಅದನ್ನು ಇಂಗಿಸುವ ಕುರಿತು ತಮ್ಮ ಮಾದರಿಗಳನ್ನು ಸಿದ್ದಪಡಿಸಿದ್ದರು.
ಮನೆಯ ತಾರಸಿಯ ಮೇಲೆ ಬೀಳುವ ಮಳೆ ನೀರನ್ನು ಮನೆಯ ಅಂಗಳದಲ್ಲಿ ಇಂಗಿಸಿಸುವುದು, ನೀರನ್ನು ಬಾವಿಗೆ ಪೂರಣ ಮಾಡುವುದು, ಇಂಗು ಗುಂಡಿಗಳ ನಿರ್ಮಾಣ , ನೀರಿನ ಶುದ್ದೀಕರಣ , ಜಲ ಮಾಲಿನ್ಯ ತಡೆಯುವುದರ ಬಗ್ಗೆ ವಿದ್ಯಾರ್ಥಿಗಳು ಆಕರ್ಷಕ ಮಾದರಿಗಳನ್ನು ಸಿದ್ದಪಡಿಸಿದ್ದರು. ಅಲ್ಲದೇ ನೀರು ಉಳಿಸುವ ಕುರಿತು ಪ್ರಬಂದ ಸ್ಪರ್ದೇಯನ್ನೂ ಸಹ ಆಯೋಜಿಸಲಾಗಿದ್ದಿತು.
ಮಾದರಿ ರಚನೆ ಮತ್ತು ಪ್ರಬಂದ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಸಮಾದಾನಕರ ಬಹುಮಾನ ವಿತರಿಸಲಾಯಿತು.
ಕಲ್ಯಾಣಪುರದ ಮೌಂಟ್ ರೊಸೋರಿಯೋ ಚರ್ಚ್ನ ಸಾಮಾಜಿಕ ಅಭಿವೃದ್ಧಿ ಚಟುವಟಿಕೆ ವಿಭಾಗದಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಫಾದರ್ ಫಿಲಿಫ್ ನೇರಿ ಆರನ್ನ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್ ಕೋಟ್ಯಾನ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜೋಸೆಫ್ ರೆಬೆಲ್ಲೋ ಸಂಯೋಜಿಸಿದ್ದರು.
ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಮಾದರಿಗಳು ತುಂಬಾ ಸರಳವಾಗಿದ್ದು, ಈ ವಿಧಾನಗಳಿಂದ ನೀರನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವ ಬಗ್ಗೆ ಕಾರ್ಯಕ್ರಮ ಜಾಗೃತಿ ಮೂಡಿಸಿತು.