ಜಾಗತಿಕ ಮುಸ್ಲಿಮ ವಿರುದ್ಧ ನಡೆಯುತ್ತಿರುವ ಆಕ್ರಮಣದ ವಿಮೋಚನೆಗಾಗಿ ಬೃಹತ್ ಪ್ರಾರ್ಥನಾ ಸಂಗಮ

Spread the love

ಜಾಗತಿಕ ಮುಸ್ಲಿಮ ವಿರುದ್ಧ ನಡೆಯುತ್ತಿರುವ  ಆಕ್ರಮಣದ ವಿಮೋಚನೆಗಾಗಿ  ಬೃಹತ್   ಪ್ರಾರ್ಥನಾ ಸಂಗಮ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಸೆಕ್ಟರ್ ಹಾಗೂ ಅಲ್ ಖಾದಿಸ ಕಾವಳಕಟ್ಟೆ ”  ಇದರ ಮದೀನಾ ಘಟಕದ ಸಹಭಾಗಿತ್ವದಲ್ಲಿ ಶೈಖ್ ಜೀಲಾನೀ (ಖ.ಸಿ), ತಾಜುಲ್ ಉಲಮಾ (ಖ.ಸಿ) ರವರ ಅನುಸ್ಮರಣೆ

ಹಾಗೂ ಜಾಗತಿಕ ಮುಸ್ಲಿಮ ವಿರುದ್ಧ ನಡೆಯುತ್ತಿರುವ  ಆಕ್ರಮಣದ ವಿಮೋಚನೆಗಾಗಿ  ಬೃಹತ್   ಪ್ರಾರ್ಥನಾ ಸಂಗಮ ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ ಶುಕ್ರವಾರ ನಡೆಯಿತು. ಅಲ್ ಖಾದಿಸ ಎಜ್ಯುಕೇಷನ್ ಅಕಾಡೆಮಿ ಕಾವಳಕಟ್ಟೆ ಇದರ ಸಂಚಾಲಕ ಅಲ್ ಹಾಜ್ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಅವರ ನೇತೃತ್ವದಲ್ಲಿ ನಡೆದ ಪ್ರಾರ್ಥನಾ ಸಂಗಮವನ್ನು ಕೆ.ಸಿ.ಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು.

kcf-madina-munavara kcf-madina-munavara1 kcf-madina-munavara2 kcf-madina-munavara3 kcf-madina-munavara4 kcf-madina-munavara5 kcf-madina-munavara6

ನಂತರ ಅಲ್ ಖಾದಿಸ ಎಜ್ಯುಕೇಷನ್ ಅಕಾಡೆಮಿ ಕಾವಳಕಟ್ಟೆ ಇದರ ಸಂಚಾಲಕ ಅಲ್ ಹಾಜ್ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಅವರು ಮಾತನಾಡಿದರು. ಮುಹಮ್ಮದ್ ಪೈಗಂಬರ್(ಸ.ಅ) ಸಾಧಾರಣ ವ್ಯಕ್ತಿಯಲ್ಲ,  ಅವರ ಕೈ ಕಾಲುಗಳು, ಬೆವರು, ರಕ್ತ ಸೇರಿದಂತೆ ದೇಹದ ಎಲ್ಲಾ ಭಾಗಗಳು ಅಸಾಧಾರಣವಾಗಿದೆ ಎಂದ ಅವರು, ಪ್ರವಾದಿಯವರ ಅಸಾಧಾರಣ ವ್ಯಕ್ತಿತ್ವವನ್ನು ವಿವರಿಸಿದರು. ಮುಹಿಯುದ್ದೀನ್ ಶೇಖ್(ಖ.ಸಿ) ಹಾಗೂ ತಾಜುಲ್ ಉಲಮಾ(ಖ.ಸಿ) ಅವರ ಬಗ್ಗೆ ಸ್ಮರಿಸಿಕೊಂಡ ಅವರು, ಇಂತಹ ಮಹಾನ್ ವ್ಯಕ್ತಿಗಳ ಜೀವನ ವೃತ್ತಾಂತ ನಾವು ಕೂಡ ಅನುಸರಿಸಬೇಕೆಂದು ಕಿವಿ ಮಾತು ನೀಡಿದರು.

ಈ ವೇಳೆ ಪ್ರಸ್ತಾವಿಕವಾಗಿ ಮಾತನಾಡಿದ ಉಸ್ಮಾನ್ ಮಾಸ್ಟರ್ ಅವರು, ಜಾಗತಿಕವಾಗಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ  ಆಕ್ರಮಣದ ವಿಮೋಚನೆಗಾಗಿ ಅಲ್ಲಾಹನ ಸಹಾಯ ಯಾಚಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.  ಗಲ್ಫ್ ಇಶಾರ ಅರಿವಿನ ಮೈತ್ರಿ ಅಭಿಯಾನದ ಅಂಗವಾಗಿ ಮದೀನಾದ ವಿವಿಧ ಕಮಿಟಿಗಳ ಅಧ್ಯಕ್ಷರಿಗೆ  ಗಲ್ಫ್‌ ಇಶಾರದ ಪ್ರತಿಯನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಕಾವಳಕಟ್ಟೆ ನೂತನ ಯೋಜನೆಗಳ ಬಗ್ಗೆ ಮದೀನಾದ ಕಾರ್ಯಕರ್ತರಿಗೆ ಮಾಹಿತಿ  ನೀಡಲಾಯಿತು.

ಉಮ್ಮರ್ ಗೇರುಕಟ್ಟೆ ಸ್ವಾಗತಿಸಿದರು. ಅಲ್ ಖಾದಿಸ ಕಾವಳಕಟ್ಟೆ”  ಇದರ ಮದೀನಾ ಘಟಕದ ಕಾರ್ಯದರ್ಶಿ  ಜಬ್ಬಾರ್ ಕಾವಳಕಟ್ಟೆ ಅವರು ಧನ್ಯವಾದ ಸಮರ್ಪಿಸಿದರು.

ವರದಿ: ಹಕೀಂ ಬೋಳಾರ್


Spread the love