ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಉಡುಪಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಅಭಿಯೋಜನಾ ಇಲಾಖೆ, ಉಡುಪಿ ಜಿಲ್ಲಾ ಕಾರಾಗ್ರಹದ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಲತಾ ಉದ್ಫಾಟಿಸಿ ಕೈದಿಗಳು ಸಹಾ ಸಮಾಜದ ಒಂದು ಅಂಗವಾಗಿದ್ದಾರೆ. ಅವರಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಕಿರಿಯ ಕಾನೂನು ಅಧಿಕಾರಿ ಜ್ಯೋತಿ ಪಿ. ನಾಯಕ್, ವಕೀಲರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲರಾದ ಅಖಿಲ್ ಹೆಗ್ಡೆ ಕೈದಿಗಳ ಹಕ್ಕುಗಳು ಮತ್ತು ಶಿಕ್ಷೆ ರಾಜಿಯ ಬಗ್ಗೆ ಉಪನ್ಯಾಸ ನೀಡಿದರು.
ಕಾರಾಗೃಹದ ಅಧೀಕ್ಷಕ ಶಿವಕುಮಾರ್ ಎನ್.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರಾಗೃಹದ ಸಿಬ್ಬಂದಿ ಶ್ರೀಮತಿ ಸ್ವಾಗತಿಸಿದರು. ರುದ್ರಮ್ಮ ಜಿ.ಕೆ. ನಿರೂಪಿಸಿ ವಂದಿಸಿದರು.