ಏ 12-13ರಂದು  ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

Spread the love

ಮಂಗಳೂರು:  ಇತಿಹಾಸ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಇಲ್ಲಿ  ಏಪ್ರಿಲ್ 12 ಹಾಗೂ 13 ರಂದು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ, ಇತ್ತೀಚಿನ ಐತಿಹಾಸಿಕ ಬರವಣಿಗೆಗಳ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.

ಸುಮಾರು ಇನ್ನೂರು ಇತಿಹಾಸಕಾರರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿವಿಧ   ಸಮಾಜವಿಜ್ಞಾನ ಶಿಸ್ತುಗಳಿಗೆ ಸೇರಿದ ಪರಿಣತರು ಇದರಲ್ಲಿ ಭಾಗವಹಿಸಲಿದ್ದು, ಇತಿಹಾಸದ ಬರವಣಿಗೆಗಳಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ವಿಚಾರಧಾರೆಗಳು, ಪ್ರವೃತ್ತಿಗಳು ಹಾಗೂ ಒಲವುಗಳು, ಹಾಗೂ ಈ ಬರವಣಿಗೆಗಳು ಸಮಕಾಲೀನ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವಗಳ ಕುರಿತು ಎರಡು ದಿವಸಗಳ ಕಾಲ ವಿಚಾರ ಸಂಕಿರಣದಲ್ಲಿ ಚರ್ಚಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಹಾಗೂ ಸಂಸ್ಕøತಿಯ ಕುರಿತಾಗಿ ಇಂದು ಮೂಡಿಬರುತ್ತಿರುವ ಬರವಣಿಗೆಗಳು ಕೂಡ ಇಲ್ಲಿ ಚಿಂತನ-ಮಂಥನಕ್ಕೆ ಒಳಗಾಗುತ್ತವೆ.

ವಿಚಾರ ಸಂಕಿರಣವನ್ನು ಕರ್ನಾಟಕ ಸರಕಾರದ ಯುವಜನ ಹಾಗೂ ಮೀನುಗಾರಿಕಾ ಇಲಾಖೆ, ಸಚಿವ  ಅಭಯಚಂದ್ರ ಜೈನ್ ಇವರು ಉದ್ಘಾಟಿಸಲಿದ್ದು, ಕೊಡಗು ಜಿಲ್ಲೆಯ ಚರಿತ್ರೆ ಮತ್ತು ಸಂಸ್ಕøತಿಯಲ್ಲಿ ವಿಶೇಷ ತಜ್ಞರಾಗಿರುವ ಕೆನಡಾದ ಡಾ. ನಂಜಮ್ಮ ಚಿಣ್ಣಪ್ಪ ಇವರು ಮುಖ್ಯ ಅತಿಥಿಯಾಗಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ      ಪೆÇ್ರ. ಕೆ. ಭೈರಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ.  ಉಪನ್ಯಾಸಕರಿಗೆ ಅನ್ಯ ಕಾರ್ಯ ನಿಮಿತ್ತ ರಜ ಸೌಲಭ್ಯವು ದೊರಯಲಿದೆ ಎಂದು  ಪ್ರಕಟಣೆ ತಿಳಿಸಿದೆ.


Spread the love