ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸ್ ಕಡಿವಾಣ : ಬಿಜೆಪಿಗರಿಂದ ಪೊಲೀಸರ ಮೇಲೆ ಸುಳ್ಳು ಆರೋಪ – ಕೃಷ್ಣ ಶೆಟ್ಟಿ ಬಜಗೋಳಿ
ಉಡುಪಿ: ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳನ್ನು ಮಾಡಿಕೊಂಡಿದ್ದ ಬಿಜೆಪಿ ನಾಯಕರುಗಳು ಹಾಗೂ ಯುವ ಮೋರ್ಚಾ ಪದಾಧಿಕಾರಿಗಳ ಅಕ್ರಮ ಚಟುವಟಿಕೆಗಳಿಗೆ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಆಗಮನದಿಂದ ಕಡಿವಾಣ ಬಿದ್ದಿರುವುದನ್ನು ಅರಗಿಸಿಕೊಳ್ಳಲಾಗದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಈ ಹಿಂದೆ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವನರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲಿ ಕಿಡಿಗೇಡಿಗಳಂತೆ ವರ್ತಿಸಿದ ಯುವ ಮೋರ್ಚಾ ಪದಾಧಿಕಾರಿಗಳ ಮೇಲೆ ಕೇಸ್ ದಾಖಲಾಗಿದ್ದು ಅದನ್ನು ಮುಚ್ಚಿಟ್ಟು ಸುಮ್ಮನೆ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಬಿಜೆಪಿ ಯುವ ಮೋರ್ಚಾದವರು ನಡೆಸುತ್ತಿದ್ದಾರೆ.
ದೊಡ್ಡ ಸಮಾಜ ಸೇವೆ ನಡೆಸಿ ಸಮಾಜದ ಏಳಿಗೆಗೆ ಶ್ರಮಿಸಿ ಪ್ರಕರಣ ದಾಖಲಾಗಿರುವ ರೀತಿ ಯುವ ಮೋರ್ಚಾದವರು ಪೋಸ್ ನೀಡುತ್ತಿರುವುದು ಹಾಸ್ಯಸ್ಪದ.
ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಅರುಣ್ ಕುಮಾರ್ ರವರು ಉಡುಪಿಗೆ ಬಂದ ಮೇಲೆ ಯಾವುದೇ ರೀತಿಯ ಅಹಿತಕರ ಪ್ರಕರಣಗಳಿಗೆ ಅವಕಾಶ ಮಾಡಿಕೊಡದೆ ಜಿಲ್ಲೆಯನ್ನು ಹದ್ದುಬಸ್ತಿನಲ್ಲಿಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಈ ನಡುವೆ ಗೃಹ ಇಲಾಖೆಯಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ಮರೆತು ಪೊಲಿಸ್ ವೃತ್ತಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿರುವುದರಿಂದ ಗೃಹ ಇಲಾಖೆಯ ಬಗ್ಗೆ ಉಡುಪಿ ಜಿಲ್ಲೆಯ ಜನರಲ್ಲಿ ಪೊಲೀಸರ ಮೇಲೆ ಮತ್ತು ಸರಕಾರದ ಮೇಲೆೆ ವಿಶ್ವಾಸ ಮೂಡಿದೆ.
ಉಡುಪಿ ಜಿಲ್ಲೆಯ ಜನರು ಪದೇ ಪದೇ ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿ ಮಾಡುತ್ತಿರುವ ಬಿಜೆಪಿಯ ಉಡುಪಿ ಶಾಸಕ ಯಶ್ಪಾಲ್ ಸುವರ್ಣರವರು ದ್ವಿತೀಯ ಬಾರಿಗೆ ವಿಧಾನಸಭೆಯಲ್ಲಿ ತಮ್ಮ ದುರ್ವರ್ತನೆ ಹಾಗೂ ಅಶಿಸ್ತಿಗಾಗಿ ಅಮಾನತು ಆಗಿದ್ದಾರೆ. ಇಂತಹ ನಾಯಕರನ್ನು ಅನುಕರಿಸುವ ಬಿಜೆಪಿ ಯುವ ಮೋರ್ಚಾದವರು ಜಿಲ್ಲೆಯಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಹುನ್ನಾರವನ್ನು ಕೈ ಬಿಟ್ಟು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಸರಕಾರದೊಂದಿಗೆ ಕೈ ಜೋಡಿಸುವ ಕೆಲಸ ಮಾಡಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸುವಂತೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.