ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಎಬಿವಿಪಿಯಿಂದ ಡಿಜಿಪಿಗೆ ಮನವಿ

Spread the love

ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಎಬಿವಿಪಿಯಿಂದ ಡಿಜಿಪಿಗೆ ಮನವಿ

ದಕ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಎಬಿವಿಪಿಯಿಂದ ಡಿಜಿಪಿ ಪ್ರವೀಣ್ ಸೂದ್ ಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕದಲ್ಲಿ ಬೆಂಗಳೂರುನ್ನು ಹೊರೆತುಪಡಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಕೇಂದ್ರವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಶಿಕ್ಷಣ ಕೇಂದ್ರಗಳಿವೆ. ಹೊರ ರಾಜ್ಯ ಮತ್ತು ಹೊರ ದೇಶದ ವಿದ್ಯಾರ್ಥಿಗಳು ಸಹ ಇಲ್ಲಿ ವ್ಯಾಸಾಂಗವನ್ನು ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಪೋಲಿಸ್ ಇಲಾಖೆಯ ಅಪರಾಧ ವಿಭಾಗದ ವರದಿಗಳ ಪ್ರಕಾರ ಕಳೆದ ವರ್ಷಗಳಲ್ಲಿ ಪತ್ತೆಯಾಗಿರುವ ಗಾಂಜಾ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ಜಿಲ್ಲೆಯ ಪೋಲಿಸ್ ಇಲಾಖೆ 2-3 ದಿನಗಳಿಂದ ನಗರ ಮತ್ತು ಜಿಲ್ಲೆಯಾದ್ಯಂತ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಆದ್ದರಿಂದ ಪೋಲಿಸರಿಗೆ ಇನ್ನಷ್ಟು ದೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವಂತಹ ಕೆಲಸಗಳು ಪೋಲಿಸ್ ಇಲಾಖೆಯಿಂದ ಆಗಬೇಕು ಮತ್ತು ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೇ ನ್ಸಿಪಕ್ಷಪಾತವಾದ ತನಿಖೆಗಳನ್ನು ಮಾಡಬೇಕೆಂದು ಎಬಿವಿಪಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ.
ಎಬಿವಿಪಿ ತಮ್ಮಲ್ಲಿ ವಿನಂತಿ ಮಾಡುವ ಕೆಲವೊಂದು ಸಲಹೆಗಳು:-
1. ಆಯಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ವರ್ಷದಲ್ಲಿ ಕನಿಷ್ಟ ಒಂದು ಜಾಗೃತಿ ಕಾರ್ಯಕ್ರಮಗಳನ್ನು ಮಾಡವುದು ಮತ್ತು ಕಾಲೇಜು ಕ್ಯಾಂಪಸ್ನಲ್ಲಿ ಅಪರಾಧ ತಡೆಹಿಡಿಯುವ ಮಾಹಿತಿ ಅಂಟಿಸುವುದು.
2. ಕಾಲೇಜು ಕ್ಯಾಂಪಸ್ ಬಳಿ ಇರುವ ಪಾನ್ ಶಾಪ್, ಜೆರಾಕ್ಸ್ ಶಾಪ್, ಹೊಟೇಲ್, ಬೇಕರಿ ಮತ್ತು ಜ್ಯೂಸ್ ಸೆಂಟರ್ಗಳ ಮೇಲೆ ನಿಗಾವಹಿಸಬೇಕು.
3. ನಗರದಲ್ಲಿರುವ ಸರ್ಕಾರಿ, ಖಾಸಗಿ ಹಾಸ್ಟೆಲ್ಗಳು ಮತ್ತು ಪಿ.ಜಿಗಳು ನಡೆಸುತ್ತಿರುವವರ ಮಾಹಿತಿಯನ್ನು ಪಡೆದು ಅಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಅವುಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು.
4. ಕ್ಯಾಂಪಸ್ಗಳ ಸುತ್ತ-ಮುತ್ತ ದಿನಕ್ಕೆ ಒಂದು ಭಾರಿಯಾದರು ಪೋಲಿಸ್ ವಾಹನಗಳು ಗಸ್ತು ಮಾಡಬೇಕು.
5. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುರನ್ನು ಗೂಂಡಾ ಕಾಯಿದೆಯಲ್ಲಿ ಪ್ರಕರಣವನ್ನು ದಾಖಲಿಸಬೇಕು.
6. ಒಂದು ವೇಳೆ ವಿದ್ಯಾರ್ಥಿಗಳು ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ, ಅಂತಹ ವಿದ್ಯಾರ್ಥಿಗಳನ್ನು ಪೋಲಿಸ್ ಇಲಾಖಾ ವ್ಯಾಪ್ತಿಯಲ್ಲಿ ಕೌನ್ಸಲಿಂಗ್ ಮಾಡಬೇಕು.

ಈ ಸಂದರ್ಭದಲ್ಲಿ ಮನವಿಯನ್ನು ಡಿಜಿಪಿ ಶ್ರೀ ಪ್ರವಿಣ್ ಸೂದ್ ಹಾಗೂ ಮಂಗಳೂರು ನಗರ ಕಮಿಷನರ್ ಶ್ರೀ ವಿಕಾಸ ಕುಮಾರ್ ಅವರು ಸ್ವೀಕರಿಸಿದರು. ಎಬಿವಿಪಿಯಿಂದ ವಿಭಾಗ ಸಂಚಾಲಕ ಆಶೀಶ್ ಅಜಿಬೆಟ್ಟು ಹಾಗೂ ಮಂಗಳೂರು ನಗರ ಸಹ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.


Spread the love