ಜಿಹಾದಿ ಉಗ್ರರ ನರಮೇಧಕ್ಕೆ ಬಲಿಯಾದ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಬದ್ಧ : ಯಶ್ಪಾಲ್ ಸುವರ್ಣ
ಉಡುಪಿ: ಜಮ್ಮು ಕಾಶ್ಮೀರದಲ್ಲಿ ಮತಾಂಧ ಜಿಹಾದಿ ಉಗ್ರರ ನರಮೇಧಕ್ಕೆ ಬಲಿಯಾದ ಅಮಾಯಕ ಹಿಂದೂ ಪ್ರವಾಸಿಗರ ಪ್ರತಿ ಹನಿ ರಕ್ತಕ್ಕೆ ಕೇಂದ್ರ ಸರ್ಕಾರ ನ್ಯಾಯ ಒದಗಿಸಲಿದೆ ಎಂದು ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಈ ಪೈಶಾಚಿಕ ಘಟನೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾಗಿದ್ದು, ದೇಶದ ಜನತೆ ಪ್ರತಿ ಮನೆ ಮನೆಯಲ್ಲಿ ಸ್ವಂತ ಸಹೋದರ ಸಹೋದರಿಯನ್ನು ಕಳೆದು ಕೊಂಡ ನೋವು ಅನುಭವಿಸುತ್ತಿದ್ದಾರೆ.
ಪ್ರವಾಸಿಗರ ಧರ್ಮವನ್ನು ಕೇಳಿ ಕುಟುಂಬಿಕರ ಕಣ್ಣೆದುರಿನಲ್ಲಿ ಗುಂಡು ಹೊಡೆದು ನರಮೇಧ ಮಾಡಿ ಜಿಹಾದಿ ಮಾನಸಿಕತೆಯ ವಿಕೃತಿಯನ್ನು ಜಾತಿ ಮತ ಭೇದ ಮರೆತು ಸಮಸ್ತ ಭಾರತೀಯರು ಒಕ್ಕೊರಲಿನಿಂದ ಖಂಡಿಸಬೇಕಿದೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಹಾಗೂ ಹಾವೇರಿ ಜಿಲ್ಲೆಯ ಭರತ್ ಭೂಷಣ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಅಮಾಯಕರ ಬಲಿ ಪಡೆದ ಮತಾಂಧ ಉಗ್ರರನ್ನು ಸದೆಬಡಿಯಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಜಿಹಾದಿ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಲು ದೇಶದ ಜನತೆ ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.