ಜೂಜಾಟ ತಂಡದ ಮೇಲೆ ಡಿಸಿಐಬಿ ಧಾಳಿ; ಮಾಧ್ಯಮಗಳಲ್ಲಿ ಆಧಾರಹಿತ ವರದಿಗೆ ಎಸ್ಪಿ ಸ್ಪಷ್ಟನೆ
ಮಂಗಳೂರು: ಜೂಜಾಟ ನಡೆಯುತ್ತಿರುವ ಕೇಂದ್ರಕ್ಕೆ ಡಿಸಿಐಬಿ ಪೋಲಿಸರು ಧಾಳಿ ನಡೆಸಿದ ಕುರಿತು ಕೆಲವೊಂದು ಮಾಧ್ಯಮಗಳಲ್ಲಿ ಆಧಾರಹಿತ ಸುದ್ದಿ ಪ್ರಸಾರವಾದ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೆ ಗೌಡ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಕೆಲವೊಂದು ಮಾಧ್ಯಮಗಳಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ ನಾಯ್ಕ್ ಮತ್ತು ತಂಡ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಮಡಂತ್ಯಾರು ಎಂಬಲ್ಲಿರುವ ಎಂ.ಆರ್. ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಬಗ್ಗೆ ನಕಲಿ ರೈಡ್ ಅಂತಾ ಹೇಳಿ ಆಧಾರರಹಿತವಾಗಿ, ಯಾವುದೇ ಮೇಲಾಧಿಕಾರಿಗಳ ಸ್ಪಷ್ಟನೆಯನ್ನು ಕೇಳದೆ ಏಕಪಕ್ಷೀಯವಾಗಿ ಸುದ್ದಿ ಪ್ರಸಾರವಾಗಿದೆ.
ಸದರಿ ರೈಡಿನ ಕರುತಿ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರಿನ ಎಂ ಆರ್ ರಿಕ್ರಿಯೇಷನ್ ಕ್ಲಬ್ ಎಂದು ಪರವಾನಿಗೆ ಪಡೆದು ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದರೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ರಿಷಿಕೇಶ್ ಸೋನಾವಾಣೆ ಇವರಿಂದ ಸರ್ಚ್ ವಾರಂಟ್ ಪಡೆಯಲಾಗಿದ್ದು, ರೈಡಿನ ಬಗ್ಗೆ ಬೆಳ್ತಂಗಡಿ ನ್ಯಾಯಲಯದ ಅನುಮತಿ ಪಡೆಯಲಾಗಿದೆ.
ಡಿಸಿಐಬಿ ಪೋಲಿಸರ ತಂಡ ಮತ್ತು ಪುಂಜಾಲಕಟ್ಟೆ ಠಾಣಾಧಿಕಾರಿಗಳು ಜಂಟಿಯಾಗಿ ಧಾಳಿ ನಡೆಸಿದ್ದು, ಡಿಸಿಐಬಿ ತಂಡವು ಅಪರಾಧ ಪತ್ತೆ ಮತ್ತು ದಾಳಿ ಮಾಡುವ ಸಂದರ್ಭದಲ್ಲಿ ಮತ್ತು ಇತರ ಕರ್ತವ್ಯಗಳ್ಲಲಿ ಸಾಮಾನ್ಯವಾಗಿ ಮಫ್ತಿಯಲ್ಲಿ ಇರುತ್ತಾರೆ.
ಜಿಲ್ಲೆಯಲ್ಲಿ ಮುಂದಕ್ಕೂ ಸಹ ಸ್ಕಿಲ್ ಗೇಮ್, ವೀಡಿಯೋ ಗೇಮ್, ಮಾಡುವ ಬಗ್ಗೆ ಪರವಾನಿಗೆ ಪಡೆದು ಅದರ ಹೆಸರಿನಲ್ಲಿ ಅಕ್ರಮ ಜೂಜಾಟ ಮಾಡುವವರ ಮೇಲೆ ಮತ್ತಷ್ಟ ಪರಿಣಾಮಕಾರಿಯಾಗಿ ಧಾಳಿ ನಡೆಸಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೆ ಗೌಡ ಸ್ಪಷ್ಟನೆ ನೀಡಿದ್ದಾರೆ.