ಠಾಣೆಯೆದರು ಕೆಎಸ್ಸಾರ್ಟಿಸಿ ನಿರ್ವಾಹಕನ ಶವವಿಟ್ಟು ಪ್ರತಿಭಟಿಸಿದ ಕುಟುಂಬಿಕರು
ಮಂಗಳೂರು: ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಸರಕಾರಿ ಬಸ್ ನಿರ್ವಾಹಕ ಅವರ ಶವ ಬುಧವಾರ ಪತ್ತೆಯಾಗಿದ್ದು, ಪೋಲಿಸರು ದೇವದಾಸ್ ಅವರಿಗೆ ಕಡಬ ಠಾಣೆಯಲ್ಲಿ ಹಲ್ಲೆಗೈಯ್ಯಲಾಗಿದೆ ಎಂದು ಆರೋಪಿಸಿ ಕುಟುಂಬಿಕರು ಮೃತದೇಹವನ್ನು ಪೋಲಿಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಚಿಲ್ಲರೆ ವಿಚಾರದಲ್ಲ ಯುವತಿಯೋರ್ವಳ ಜೊತೆ ದೇವದಾಸ್ ವಾಗ್ವದಾ ನಡೆದು ಪೋಲಿಸರ ಮಧ್ಯ ಪ್ರವೇಶ ನಡೆದಿತ್ತು. ಇದರಿಂದ ಅವಮಾನಿತರಾದ ದೇವದಾಸ್ ಡೆತ್ ನೋಟ್ ಬರೆದಿಟ್ಟು ಕುಮಾರಾಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಶವ ಮೂರು ದಿನದ ಸತತ ಶೋಧದ ಬಳಿಕ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಗೆ ಕಡಬ ಠಾಣೆಯ ಮುಂದೆ ಇಟ್ಟು ದೇವದಾಸ್ ಮಗನಾದ ಪವನ್ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪುತ್ತೂರು ಎಎಸ್ಪಿ ರಿಷ್ಯಂತ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಉನ್ನತ ಅಧಿಕಾರಿಗಳಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಸಿಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ಮೃತದೇಹವನ್ನು ಕೊಂಡೊಯ್ಯಲಾಯಿತು.