Spread the love
ಡಾ. ಅರ್ಚನಾ ಪ್ರಭಾತ್ ರವರಿಗೆ “ಬೆಸ್ಟ್ ವುಮೆನ್ ಫಾಕಲ್ಟಿ”
ವಿದ್ಯಾಗಿರಿ: ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್‍ರವರಿಗೆ ತಮಿಳುನಾಡಿನ “ನೇಚರ್ ಸೈನ್ಸ್ ಫೌಂಡೇಷನ್” ಕ್ಲಿನಿಕಲ್ ಮತ್ತು ಕಮ್ಯುನಿಟಿ ನ್ಯೂಟ್ರಿಷನ್‍ನ ಶೈಕ್ಷಣಿಕ ಉತ್ಕøಷ್ಟತೆಗೆ 2019-20ನೇ ಸಾಲಿನ “ಬೆಸ್ಟ್ ವುಮೆನ್ ಫಾಕಲ್ಟಿ” ಎಂಬ ಅವಾರ್ಡ್‍ನ್ನು ನೀಡಿ ಗೌರವಿಸಿದೆ. ಅವರು ಕಳೆದ 19 ವರ್ಷಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವಾ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಪ್ರೋ ಕುರಿಯನ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಶ್ಲಾಘಿಸಿದ್ದಾರೆ.
Spread the love