ಡಿಸೇಂಟ್ ಫ್ರೆಂಡ್ಸ್ ಮಟಪಾಡಿ- ನೀಲಾವರ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

Spread the love

ಡಿಸೇಂಟ್ ಫ್ರೆಂಡ್ಸ್ ಮಟಪಾಡಿ- ನೀಲಾವರ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಬ್ರಹ್ಮಾವರ : ಕೊರೊನಾ ಪರಿಣಾಮ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅತೀ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಡಿಸೇಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ವತಿಯಿಂದ ಅಗತ್ಯ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಯಿತು.

ಮಟಪಾಡಿ ನೀಲಾವರ ಪರಿಸರದಲ್ಲಿ ಬಡ ಕುಟುಂಬಗಳು ಅನುಭವಿಸುತ್ತಿರುವ ಕಷ್ಟ ಮನಗಂಡು ಸುಮಾರು 150 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದರು. ಆಹಾರ ಪೊಟ್ಟಣದಲ್ಲಿ ಅಕ್ಕಿ, ಬೇಳೆ, ಸಾಂಬಾರು, ಎಣ್ಣೆ ಹಾಗೂ ಇತರ ಸಾಮಾಗ್ರಿಗಳು ಒಳಗೊಂಡಿವೆ.

ಈ ವೇಳೆ ಸಂಘಟನೆಯ ಧೀರಜ್, ದೀಪಕ್, ಚಿನ್ಮಯ್, ರಂಜನ್, ಪ್ರವೀಣ್, ವೈಭವ್, ವಸಂತ್, ಸ್ಟೀವನ್, ರಾಹುಲ್, ಕಾರ್ತಿಕ್, ಯೋಗೀಶ್ ಹಾಗೂ ಇತರರು ಉಪಸ್ಥೀತರಿದ್ದರು.


Spread the love